ಬೀಜಿಂಗ್(ಸೆ.18): ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಉದ್ದೇಶದಿಂದ 3 ತಿಂಗಳ ಹಿಂದೆ ಬಾಹ್ಯಾಕಾಶಕ್ಕೆ ತೆರಳಿದ್ದ ಚೀನಾದ ಮೂವರು ಗಗನಯಾತ್ರಿಗಳ ಉದ್ದೇಶ ಯಶಸ್ವಿಯಾಗಿದ್ದು, ಶುಕ್ರವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.
90 ದಿನಗಳ ಕಾಲ ಭೂಮಿಯಿಂದ 380 ಕಿ.ಮೀ ದೂರದಲ್ಲಿನ ಮಾದರಿ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿದ್ದ ನೀ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗೊ ಗಗನಯಾತ್ರಿಗಳು ಶೆನ್‌ಜೌವ್ -12 ಗಗನನೌಕೆ ಮೂಲಕ ಶುಕ್ರವಾರ ಮುಂಜಾನೆ 1.30ಕ್ಕೆ ಮಂಗೋಲಿಯಾದ ನಿರ್ದಿಷ್ಟಪ್ರದೇಶಕ್ಕೆ ಬಂದಿಳಿದಿದ್ದಾರೆ.
ಜೂ.17ರಂದು ಶೆನ್‌ಜೌವ್- 12 ಗಗನನೌಕೆ ಮೂಲಕ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಈ ವೇಳೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಗಗನಯಾತ್ರಿಗಳಿಗೆ ವಿಡಿಯೋ ಕಾಲ್ ಸಹ ಮಾಡಿದ್ದರು.