ಮಲಾಲಾಗೆ ಗುಂಡು ಹಾರಿಸಿದ್ದ ತಾಲಿಬಾನ್‌ ಉಗ್ರ ಜೈಲಿಂದ ಎಸ್ಕೇಪ್‌

By Kannadaprabha NewsFirst Published Feb 8, 2020, 10:37 AM IST
Highlights

ಮಕ್ಕಳ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್‌ಝೈ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ

ಇಸ್ಲಾಮಾಬಾದ್‌ [ಫೆ.08]: 8 ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಮಕ್ಕಳ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್‌ಝೈ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ ಎಹ್ಸಾನುಲ್ಲಾ ಎಹ್ಸಾನ್‌ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ. 

ಜ.11ರಂದು ಪಾಕಿಸ್ತಾನ ಭದ್ರತಾ ಪಡೆಗಳ ಜೈಲಿನಿಂದ ತಪ್ಪಿಸಿಕೊಂಡಿರುವ ಎಹ್ಸಾನುಲ್ಲಾ ಆಡಿಯೋ ಕ್ಲಿಪ್‌ ಡುಗಡೆ ಮಾಡಿದ್ದಾನೆ. ‘ದೇವರ ದಯೆಯಿಂದ ನಾನು ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ. 

2017ರಲ್ಲಿ ನಾನು ಶರಣಾಗತನಾದಾಗ ನೀಡಿದ್ದ ಭರವಸೆಯಂತೆ ಪಾಕಿಸ್ತಾನ ಪಡೆಗಳು ನಡೆದುಕೊಂಡಿಲ್ಲ ಎಂದು ಆತ ಆಡಿಯೋ ಕ್ಲಿಪ್‌ನಲ್ಲಿ ಹೇಳಿಕೊಂಡಿದ್ದಾನೆ.

ಮಲಾಲಾ ಈ ದಶಕದ ವಿಶ್ವದ ಕಿರಿಯ ಜನಪ್ರಿಯ ಯುವತಿ!...

ತಾಲಿಬಾನ್‌ ಉಗ್ರ ಸಂಘಟನೆಯ ವಕ್ತಾರ ಕೂಡಾ ಆಗಿದ್ದ ಎಹ್ಸಾನುಲ್ಲಾ, 2012ರಲ್ಲಿ ಮಲಾಲಾ ಮೇಲೆ ನಡೆದ ದಾಳಿ ಮತ್ತು 2012ರಲ್ಲಿ ಪೇಶಾವರದ ಶಾಲೆ ಮೇಲೆ ನಡೆದ ಭೀಕರ ದಾಳಿಯ ಪ್ರಮುಖ ಸಂಚು ಕೋರನಾಗಿದ್ದ.

click me!