ಸುತ್ತಲೂ ತಾಲಿಬಾನ್‌ ಉಗ್ರರಿಂದ ಕಾವಲು: ಕಾಬೂಲ್‌ ವಿಮಾನ ನಿಲ್ದಾಣವೀಗ ರಣಾಂಗಣ!

By Suvarna NewsFirst Published Aug 21, 2021, 8:59 AM IST
Highlights

* ಸಾವಿರಾರು ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಧಾವಿಸುತ್ತಿರುವ ಜನ

* ಕಾಬೂಲ್‌ ವಿಮಾನ ನಿಲ್ದಾಣವೀಗ ರಣಾಂಗಣ

* ವಿಮಾನ ನಿಲ್ದಾಣದ ಸುತ್ತಲೂ ತಾಲಿಬಾನ್‌ ಉಗ್ರರಿಂದ ಕಾವಲು

ಕಾಬೂಲ್‌(ಆ.21): ಕಾಬೂಲ್‌ ವಿಮಾನ ನಿಲ್ದಾಣ ಇದೀಗ ಅಕ್ಷರಶಃ ರಣಾಂಗಣವಾಗಿ ಪರಿವರ್ತನೆಗೊಂಡಿದೆ. ಉಗ್ರರಿಂದ ಪಾರಾಗಲು ಸಾವಿರಾರು ಮಂದಿ ತಮ್ಮ ಪ್ರಾಣದ ಹಂಗು ತೊರೆದು ವಿಮಾನ ನಿಲ್ದಾಣಗಳತ್ತ ಧಾವಿಸುತ್ತಿದ್ದಾರೆ. ಆದರೆ, ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಮಾನ ನಿಲ್ದಾಣದ ಗೋಡೆಗಳನ್ನು ಏರಲು ಜನರು ಯತ್ನ ನಡೆಸುತ್ತಿದ್ದಾರೆ. ಆದರೆ, ತಾಲಿಬಾನ್‌ ಉಗ್ರರು ಇದಕ್ಕೆ ಆಸ್ಪದ ನೀಡುತ್ತಿಲ್ಲ. ವಿಮಾನ ನಿಲ್ದಾಣದ ಸುತ್ತಲೂ ಕಾವಲು ಕಾಯುತ್ತಿರುವ ತಾಲಿಬಾನ್‌ ಉಗ್ರರು, ಗುಂಡು ಹಾರಿಸಿ ಜನರನ್ನು ಚದುರಿಸುತ್ತಿದ್ದಾರೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.

ಇದೇ ವೇಳೆ ವಿಮಾನ ನಿಲ್ದಾಣಕ್ಕೆ ತೆರಳುವ ಎಲ್ಲಾ ಮಾರ್ಗಗಳನ್ನು ಉಗ್ರರು ಬಂದ್‌ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಉಗ್ರರು ನಿರ್ಮಿಸಿದ್ದು, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಜನವಸತಿ ಪ್ರದೇಶಗಳು ಸಂಪೂರ್ಣವಾಗಿ ತಾಲಿಬಾನಿಗಳ ನಿಯಂತ್ರಣದಲ್ಲಿದ್ದು, ಉಗ್ರರ ಕಣ್ಣು ತಪ್ಪಿಸಿ ವಿಮಾನ ನಿಲ್ದಾಣಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.

ಸದ್ಯ ವಿಮಾನ ನಿಲ್ದಾಣ ಅಮೆರಿಕದ ನ್ಯಾಟೋ ಪಡೆಗಳ ವಶದಲ್ಲಿದೆ. ಅಮೆರಿಕದ 4 ಸಾವಿರಕ್ಕೂ ಹೆಚ್ಚು ಸೈನಿಕರ ವಿಮಾನ ನಿಲ್ದಾಣಕ್ಕೆ ಭದ್ರತೆ ಒದಗಿಸುತ್ತಿದ್ದು, ಅಷ್ಘಾನಿಸ್ತಾನದಲ್ಲಿ ಅತಂತ್ರವಾಗಿರುವ ವಿದೇಶಿಗರು ಹಾಗೂ ಸ್ಥಳೀಯರನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

click me!