
ಕಾಬೂಲ್(ಆ.21): ಅಷ್ಘಾನಿಸ್ತಾನದ ಕಂದಹಾರ್ ಮತ್ತು ಹೆರಾತ್‌ನಲ್ಲಿರುವ ಭಾರತದ ದೂತವಾಸ ಕಚೇರಿಯ ಮೇಲೆ ತಾಲಿಬಾನ್ ದಾಳಿ ನಡೆಸಿದ್ದು, ಕೆಲವು ದಾಖಲೆಗಳನ್ನು ಹಾಗೂ ಹೊರಗಡೆ ನಿಲ್ಲಿಸಲಾದ ವಾಹನಗಳನ್ನು ಹೊತ್ತೊಯ್ದಿದ್ದಾರೆ.
ಭಾರತ ಅಷ್ಘಾನಿಸ್ತಾನದಲ್ಲಿ ನಾಲ್ಕು ದೂತವಾಸ ಕಛೇರಿಗಳನ್ನು ಹೊಂದಿದೆ. ಕಂದಹಾರ್, ಹೆರಾತ್, ಮಜತ್-ಇ-ಷರೀಫ್‌ನಲ್ಲಿರುವ ಕಚೇರಿಗಳನ್ನು ತಾಲಿಬಾನ್ ಆಕ್ರಮಣದ ನಂತರ ಮುಚ್ಚಲಾಗಿತ್ತು. ರಕ್ಷಣಾ ಕಾರ್ಯಾಚರಣೆಯ ಸಂಬಂಧ ಕಾಬೂಲ್‌ನಲ್ಲಿರುವ ಕಚೇರಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಶುಕ್ರವಾರ ತಾಲಿಬಾನ್ ಉಗ್ರರು ಮುಚ್ಚಿರುವ ಕಂದಹಾರ್ ಮತ್ತು ಹೆರಾತ್ ದೂತವಾಸ ಕಚೇರಿಗಳಿಗೆ ನುಗ್ಗಿ ತಪಸಣೆ ನಡೆಸಿದ್ದಾರೆ.
ಅಲ್ಲಿರುವ ವಸ್ತುಗಳನ್ನು ಚಲ್ಲಾಪಿಲ್ಲಿಗೊಳಿಸಿದ ಉಗ್ರರು, ಕೊನೆಗೆ ಕೈಗೆ ಸಿಕ್ಕ ಕೆಲವೊಂದು ದಾಖಲೆಗಳನ್ನು ಹೊತ್ತೊಯ್ದಿದ್ದಾರೆ. ಆದರೆ ಕಾಬೂಲ್‌ನಲ್ಲಿ ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯರು ಹೇಳಿದ್ದಾರೆ.
ಅಷ್ಘಾನಿಸ್ತಾನದಲ್ಲಿದ್ದ ಎಲ್ಲಾ ಭಾರತೀಯ ದೂತಾವಾಸ ಸಿಬ್ಬಂದಿಗಳನ್ನು ಈಗಾಗಲೇ ಸ್ವದೇಶಕ್ಕೆ ಕರೆತರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ