ಗುರುದ್ವಾರದ ಧ್ವಜ ಕಿತ್ತ ತಾಲಿಬಾನ್‌ ಉಗ್ರರು!

By Suvarna NewsFirst Published Aug 7, 2021, 7:41 AM IST
Highlights

* ಆಷ್ಘಾನಿಸ್ತಾನದ ಒಂದೊಂದೇ ಪ್ರದೇಶಗಳನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳುತ್ತಿರುವ ತಾಲಿಬಾನ್‌

* ಗುರುದ್ವಾರದ ಧ್ವಜ ಕಿತ್ತ ತಾಲಿಬಾನ್‌ ಉಗ್ರರು

ಕಾಬೂಲ್‌(ಆ.07): ಆಷ್ಘಾನಿಸ್ತಾನದ ಒಂದೊಂದೇ ಪ್ರದೇಶಗಳನ್ನು ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳುತ್ತಿರುವ ತಾಲಿಬಾನ್‌ ಉಗ್ರರು ಇದೀಗ ಇಲ್ಲಿನ ಐತಿಹಾಸಿಕ ಥಾಲಾ ಸಾಹೀಬ್‌ ಗುರುದ್ವಾರದಲ್ಲಿನ ‘ನಿಶಾನ್‌ ಸಾಹಿಬ್‌’ ಎಂಬ ಸಿಖ್‌ ಧಾರ್ಮಿಕ ಧ್ವಜವನ್ನು ಕಿತ್ತೆಸೆದಿದ್ದಾರೆ.

ಪಕ್ತಿಯಾ ಪ್ರಾಂತ್ಯದಲ್ಲಿರುವ ಈ ಐತಿಹಾಸಿಕ ಗುರುದ್ವಾರಕ್ಕೆ ಶ್ರೀ ಗುರು ನಾನಕ್‌ ದೇವ್‌ ಅವರು ಭೇಟಿ ನೀಡಿದ್ದಾರೆ ಎಂಬ ಪ್ರತೀತಿ ಇದೆ. ಗುರುದ್ವಾರದಲ್ಲಿನ ನಿಶಾನ್‌ ಸಾಹಿಬ್‌ ಧ್ವಜವನ್ನು ತಾಲಿಬಾನ್‌ ಉಗ್ರರು ಕಿತ್ತು ಬಿಸಾಡಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಈ ಘಟನೆ ಕುರಿತು ಭಾರತ ಸರ್ಕಾರ, ತನ್ನ ಅಸಮಾಧಾನವನ್ನು ಆಷ್ಘಾನಿಸ್ತಾನ ಸರ್ಕಾರಕ್ಕೆ ಸಲ್ಲಿಸಿದೆ.

ದೇಗುಲ ಮೇಲೆ ದಾಳಿಗೆ ಪಾಕ್‌ ಸುಪ್ರೀಂ ಕೋರ್ಟ್‌ ಆಕ್ರೋಶ

ಆಫ್ಘನ್‌ ರಕ್ಷಣಾ ಸಚಿವರ ಗುರಿಯಾಗಿಸಿ ದಾಳಿ: ಎಂಟು ಮಂದಿ ಸಾವು!

ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದಲ್ಲಿ ಇತ್ತೀಚೆಗೆ ನಡೆದ ಹಿಂದೂ ದೇವಾಲಯ ಧ್ವಂಸ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್‌, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆದುಕೊಂಡಿದೆ. ದೇವಸ್ಥಾನ ಮೇಲೆ ದಾಳಿಯಾಗುವ ಮೊದಲು ಪೊಲೀಸರು ಏನು ಮಾಡುತ್ತಿದ್ದರು? ಈ ಘಟನೆ ಜಾಗತೀಕವಾಗಿ ದೇಶದ ಘನತೆ ಕುಗ್ಗಿಸಿದೆ. ಕೂಡಲೇ ದೇವಸ್ಥಾನ ನಾಶ ಮಾಡಿದವರನ್ನು ಬಂಧಿಸುವಂತೆ ನ್ಯಾ. ಗುಲ್ಜಾರ್‌ ಅಹಮದ್‌ ಆದೇಶ ನೀಡಿದ್ದಾರೆ.

‘ದೇವಸ್ಥಾನ ಸುತ್ತಲೂ ಇರುವ 70 ಹಿಂದೂ ಕುಟುಂಬಗಳನ್ನು ರಕ್ಷಿಸುವುದು ಸರ್ಕಾರದ ಆದ್ಯತೆಯಾಗಬೇಕು. ಇದೇ ರೀತಿ ಮಸೀದಿ ಧ್ವಂಸವಾಗಿದ್ದರೆ ಹೇಗೆ ಪ್ರತಿಕ್ರಯಿಸುತ್ತಿದ್ದಿರಿ, ಘಟನೆ ನಡೆದು 3 ದಿನವಾದರೂ ಒಬ್ಬರನ್ನು ಬಂಧಿಸಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಿ ಶಾಂತಿ ಕಾಪಾಡುವುದು ಪೋಲೀಸರ ಕರ್ತವ್ಯ’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ಇದೇ ವೇಳೆ ದೇಗುಲ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅರೆ ಸೇನಾಪಡೆಯನ್ನು ಪಾಕ್‌ ಸರ್ಕಾರ ನಿಯೋಜಿಸಿದೆ.

click me!