
ಬೆಂಗಳೂರು(ಆ.20): ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆರ್ಭಟ ಒಂದೆಡೆಯಾದರೆ ಅಲ್ಲಿ ಸಿಲುಕಿರುವ ಕನ್ನಡಿರ ಸ್ಥಿತಿ ಅತಂತ್ರವಾಗಿದೆ. ಹೌದು ಆಫ್ಘಾನಿಸ್ತಾನದಲ್ಲಿ ಆರು ಜನ ಕನ್ನಡಿಗರು ಸಿಲುಕಿದ್ದಾರೆ.
"
ಇದೀಗ ಅವರನ್ನ ವಾಪಸ್ ಭಾರತಕ್ಕೆ ಕರೆತರೋದು ಬಹುದೊಡ್ಡ ಸವಾಲಾಗಿದೆ. ತೀರ್ಥಹಳ್ಳಿಯ ಫಾದರ್ ರಾಬರ್ಟ್, ಬೆಂಗಳೂರಿನ ಅಶ್ವತಿ, ಮಂಗಳೂರಿನ ವೆನ್ಸೆಂಟ್, ಮಾರ್ಥಹಳ್ಳಿಯ ದೇವನಾಥ್, ಸಂಡೂರಿನ ತನ್ವೀರ್ ಇವರೆಲ್ಲರನ್ನ ರಕ್ಷಿಸೋದಕ್ಕೆ ಹರಸಾಹಸ ಪಡುತ್ತಿದ್ದಾರೆ.
ಉಗ್ರರ ರಣಕೇಕೆ: ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿದ ಆಫ್ಘನ್ ಜನ
ಇವರೆಲ್ಲರೂ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅತಂತ್ರವಾಗಿದ್ದಾರೆ. ಆಫ್ಘನ್‌ನಲ್ಲಿ ಸಿಲುಕಿ ಕರುನಾಡಿಗೆ ಬರಲು ಪಡಬಾರದ ಸಂಕಷ್ಟಗಳನ್ನ ಅನುಭವಿಸುತ್ತಿದ್ದಾರೆ. ಏರ್‌ಪೋರ್ಟ್‌ನಲ್ಲಿ ಹಲವು ಕನ್ನಡಿಗರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
"
ಇವರೆಲ್ಲರೂ ಕಳೆದ ಮೂರು ದಿನಗಳಿಂದ ಏರ್‌ಪೋರ್ಟ್‌ನ ಹೊರಗಡೆ ಇದ್ದಾರೆ. ಇದೀಗ ಕಾಬೂಲ್ ಏರ್‌ಪೋರ್ಟ್‌ಗೆ ಹೋಗೋದಕ್ಕೆ ಪರದಾಡುತ್ತಿದ್ದಾರೆ. ಯಾರನ್ನ ಸಂಪರ್ಕಿಸಬೇಕು ಅನ್ನೋದೆ ಇವರಿಗೆ ಗೊತ್ತಾಗುತ್ತಿಲ್ಲ. ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಹರಸಾಹ ಪಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ