73 ವಿಮಾನ, 97 ಮಿಲಿಟರಿ ವಾಹನ ನಾಶ ಮಾಡಿ ಅಪ್ಘಾನ್ ಬಿಟ್ಟ ಅಮೆರಿಕ: ಉಳಿದಿದ್ದೆಷ್ಟು?

Published : Sep 01, 2021, 08:38 AM ISTUpdated : Sep 01, 2021, 08:45 AM IST
73 ವಿಮಾನ, 97 ಮಿಲಿಟರಿ ವಾಹನ ನಾಶ ಮಾಡಿ ಅಪ್ಘಾನ್ ಬಿಟ್ಟ ಅಮೆರಿಕ: ಉಳಿದಿದ್ದೆಷ್ಟು?

ಸಾರಾಂಶ

* 97 ಮಿಲಿಟರಿ ವಾಹನಗಳೂ ನಿರುಪಯುಕ್ತ * 73 ವಿಮಾನ ನಾಶಗೊಳಿಸಿ ಆಫ್ಘನ್‌ ತೊರೆದ ಅಮೆರಿಕ * ರಾಕೆಟ್‌ ದಾಳಿ ತಡೆವ ವ್ಯವಸ್ಥೆ ಕೂಡ ನಿಷ್ಕ್ರಿಯ * ಉಗ್ರರಿಗೆ ಮಿಲಿಟರಿ ಉಪಕರಣ ಕೈತಪ್ಪಿಸಿದ ದೊಡ್ಡಣ್ಣ * ತಾಲಿಬಾನಿಗಳಿಗೆ ಭಾರಿ ಹೊಡೆತ

ವಾಷಿಂಗ್ಟನ್‌(ಸೆ.01): ತಾಲಿಬಾನ್‌ ಉಗ್ರರ ಜತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಅನುಗುಣವಾಗಿ ನಿಗದಿತ ಗಡುವಿನೊಳಗೆ ಅಫ್ಘಾನಿಸ್ತಾನವನ್ನು ತೊರೆದಿರುವ ಅಮೆರಿಕ, ಅದಕ್ಕೂ ಮುನ್ನ ಹಲವು ಮಿಲಿಟರಿ ಉಪಕರಣಗಳನ್ನು ನಾಶ ಮಾಡಿ ಜಾಗ ಖಾಲಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ತನ್ಮೂಲಕ ತಾನು ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿದೆ. ಇದರಿಂದ ತಾಲಿಬಾನ್‌ಗೆ ಭಾರಿ ಹಿನ್ನಡೆಯಾಗಿದೆ.

ಕಾಬೂಲ್‌ನ ಹಮೀದ್‌ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 73 ವಿಮಾನಗಳನ್ನು ಅಮೆರಿಕ ಸಿಬ್ಬಂದಿ ನಿಷ್ಕಿ್ರಯಗೊಳಿಸಿದ್ದಾರೆ. ಅಂದರೆ ಈ ವಿಮಾನಗಳನ್ನು ನಿಶ್ಶಸ್ತ್ರೀಕರಣಗೊಳಿಸಲಾಗಿದೆ ಅಥವಾ ಬಳಕೆಗೆ ಸಿಗದಂತೆ ಮಾಡಲಾಗಿದೆ. ವಿಮಾನದ ಕಾಕ್‌ಪಿಟ್‌ ಕಿಟಕಿಗಳನ್ನು ಧ್ವಂಸ ಮಾಡಲಾಗಿದೆ. ಟೈರ್‌ಗಳಿಗೆ ಗುಂಡು ಹಾರಿಸಿ ಹಾಳು ಮಾಡಲಾಗಿದೆ.

ಮತ್ತೊಂದೆಡೆ, ರಾಕೆಟ್‌, ಆರ್ಟಿಲರಿ ಹಾಗೂ ಮೊರ್ಟರ್‌ ದಾಳಿಯಿಂದ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ರಕ್ಷಣೆ ಒದಗಿಸಲು ಅಳವಡಿಸಲಾಗಿದ್ದ ಹೈಟೆಕ್‌ ರಾಕೆಟ್‌ ನಿರೋಧಕ ವ್ಯವಸ್ಥೆಯನ್ನೂ ನಿಷ್ಕಿ್ರಯ ಮಾಡಲಾಗಿದೆ. ಈ ವ್ಯವಸ್ಥೆಯೇ ಸೋಮವಾರ ಐಸಿಸ್‌ ನಡೆಸಿದ ಐದು ರಾಕೆಟ್‌ಗಳನ್ನು ಹಿಮ್ಮೆಟ್ಟಿಸಿತ್ತು ಎಂಬುದು ಗಮನಾರ್ಹ.

ಕಾಬೂಲ್‌ ವಿಮಾನ ನಿಲ್ದಾಣದಲ್ಲಿದ್ದ ವಿಮಾನಗಳು ಇನ್ನು ಮುಂದೆ ಹಾರುವುದಿಲ್ಲ. ಯಾರಿಂದಲೂ ಅವನ್ನು ಹಾರಿಸುವುದಕ್ಕೆ ಆಗುವುದಿಲ್ಲ ಎಂದು ಅಮೆರಿಕದ ಕೇಂದ್ರ ಕಮಾಂಡ್‌ ಮುಖ್ಯಸ್ಥ ಜನರಲ್‌ ಕೆನ್ನೆಥ್‌ ಮೆಕ್‌ಕೆಂಜಿ ಅವರು ತಿಳಿಸಿದ್ದಾರೆ.

ಇದೇ ವೇಳೆ ಕಾಬೂಲ್‌ನಲ್ಲಿ ಅಮೆರಿಕದ 70 ಎಂಆರ್‌ಎಪಿ ಎಂಬ ಸೇನಾ ಉದ್ದೇಶದ ವಾಹನಗಳು ಇದ್ದವು. ತಲಾ 7.25 ಕೋಟಿ ರು. ಬೆಲೆ ಬಾಳುವ ಈ ಎಲ್ಲ ವಾಹನಗಳನ್ನೂ ನಿಷ್ಕಿ್ರಯಗೊಳಿಸಲಾಗಿದೆ. ಇದೇ ವೇಳೆ ಹಮ್‌ವೀ ಎಂಬ 27 ಸೇನಾ ಬಳಕೆ ವಾಹನಗಳನ್ನೂ ನಿರುಪಯುಕ್ತ ಮಾಡಲಾಗಿದೆ.

ಶಸ್ತ್ರಾಸ್ತ್ರದ ಮುಂದಿನ ಕಥೆ?

- ವಿಮಾನ, ಕಾಪ್ಟರ್‌, ಸೇನಾ ವಾಹನ ಚಲಾಯಿಸುವಂತೆ ಮಾಜಿ ಆಫ್ಘನ್‌ ಯೋಧರಿಗೆ ಸೂಚಿಸಬಹುದು

- ಮಿತ್ರ ದೇಶಗಳ ನೆರವಿನೊಂದಿಗೆ ಉಪಕರಣ ದುರಸ್ತಿಗೊಳಿಸಲು ಮಿತ್ರರ ನೆರವು ಕೋರಬಹುದು

- ಸೂಕ್ಷ್ಮ ಉಪಕರಣ, ಶಸ್ತ್ರ್ಸಾಸ್ತ್ರಗಳನ್ನು ಕಳಚಿ ಪಾಕ್‌ ಸೇರಿದಂತೆ ಮಿತ್ರ ದೇಶಗಳಿಗೆ ನೀಡಬಹುದು

- ಈ ಉಪಕರಣ ಇರುವ ಸ್ಥಳದ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿ ನಾಶ ಮಾಡಬಹುದು

ಅಮೆರಿಕ ಬಿಟ್ಟು ಹೋಗಿದ್ದು

150 - ಯುದ್ಧ ವಿಮಾನಗಳು

4 - ಸಿ130 ಸರಕು ಸಾಗಣೆ ವಿಮಾನ

45 - ಯುಎಚ್‌60 ಬ್ಲಾಕ್‌ಹಾಕ್‌ ಕಾಪ್ಟರ್‌

21 - ಎ29 ಟರ್ಬೊಟ್ರೂಪ್‌ ಹೆಲಿಕಾಪ್ಟರ್‌

50 - ಎಂಡಿ530 ಹೆಲಿಕಾಪ್ಟರ್‌ಗಳು

30- ಇತರೆ ವಿಮಾನಗಳು

3,50,000 - ರೈಫಲ್‌ಗಳು

64,000 - ಮಶೀನ್‌ ಗನ್‌ಗಳು

25,000 - ಗ್ರೆನೇಡ್‌ಗಳು

22,174 - ಮಿಲಿಟರಿ ವಾಹನಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ