ಅಮೆರಿಕ ಸೇನೆಯನ್ನು ಬಗ್ಗುಬಡಿಯಲು ಇರಾನ್‌ಗೆ ಚೀನಾ ರಹಸ್ಯ ಸಹಾಯ? ರಣರಂಗದಲ್ಲಿ AI ಆಟ

Published : Apr 07, 2026, 07:31 AM IST
China Iran

ಸಾರಾಂಶ

ಚೀನಾದ ಕೆಲವು ಎಐ ಕಂಪನಿಗಳು ಸ್ಯಾಟಲೈಟ್ ಚಿತ್ರಗಳು ಮತ್ತು ಇತರ ಡೇಟಾವನ್ನು ಬಳಸಿ ಮಧ್ಯಪ್ರಾಚ್ಯದಲ್ಲಿನ ಅಮೆರಿಕ ಸೇನಾ ಚಲನವಲನಗಳ ಮಾಹಿತಿಯನ್ನು ಇರಾನ್‌ಗೆ ಮಾರಾಟ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ವಾಷಿಂಗ್ಟನ್‌: ಸದ್ಯ ನಡೆಯುತ್ತಿರುವ ಮಧ್ಯಪ್ರಾಚ್ಯ ಕದನದಲ್ಲಿ ತಾನು ಯಾರ ಪರವೂ ಇಲ್ಲ ಎಂದು ತೋರಿಸಿಕೊಳ್ಳುವ ಚೀನಾ, ರಹಸ್ಯವಾಗಿ ಇರಾನ್‌ಗೆ ಅಮೆರಿಕ ಸೇನೆಯನ್ನು ಬಗ್ಗುಬಡಿಯಲು ಸಹಾಯ ಮಾಡುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಇತ್ತೀಚೆಗೆ ಅಮೆರಿಕದ ಪ್ರತಿಷ್ಠಿತ ಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಪ್ರಕಟವಾಗಿದ್ದ ತನಿಖಾ ವರದಿಯಲ್ಲಿ, ‘ಚೀನಾದ ಕೆಲ ಎಐ ಕಂಪನಿಗಳು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ಚಲನವಲನದ ಬಗ್ಗೆ ಸ್ಯಾಟಲೈಟ್‌ ಇಮೇಜಿಂಗ್‌ ಆಧರಿತ ಮಾಹಿತಿಯನ್ನು ಮಾರಾಟ ಮಾಡುತ್ತಿವೆ’ ಎಂದು ವರದಿಯಾಗಿದೆ.

ಇರಾನ್ ಹೇಳಿಕೆ

ಇದಕ್ಕೆ ಪುಷ್ಟಿ ಕೊಡುವಂತೆ, ‘ಮಿಜಾರ್‌ವಿಷನ್‌’ ಎಂಬೊಂದು ಕಂಪನಿ, ‘ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿರುವ ಶಸ್ತ್ರಾಸ್ತ್ರಗಳ ಜಾಗವನ್ನು ನಾವು ಪತ್ತೆ ಮಾಡಿದೆವು. ಅಮೆರಿಕದ ಯುದ್ಧವಿಮಾನ ವಾಹಕ ನೌಕೆಗಳ ಮರುಪೂರಣದ ಮಾದರಿಯನ್ನೂ ನಾವು ಗುರುತಿಸಿದ್ದೇವೆ. ವೆನಿಜುವೆಲಾ ಅಧ್ಯಕ್ಷ ಮಡುರೋ ಅಪಹರಣಕ್ಕೂ ತಿಂಗಳುಗಳ ಮುಂಚೆಯೇ ನಾವು ಅಮೆರಿಕದ ಕ್ಷಿಪಣಿಗಳ ಸ್ಥಾನ ಬದಲಾವಣೆಯನ್ನು ಗಮನಿಸಿದ್ದೆವು’ ಎಂದು ಹೇಳಿಕೊಂಡಿದೆ.

ಪತ್ತೆ ಹೇಗೆ?

ಈ ಕಂಪನಿಗಳು ಯಾವುದೇ ರಹಸ್ಯ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಈ ಮಾಹಿತಿಯನ್ನು ಪಡೆಯುತ್ತಿಲ್ಲ. ಬದಲಿಗೆ, ಮಾರಾಟಕ್ಕಿರುವ ಸ್ಯಾಟಲೈಟ್‌ ಚಿತ್ರಗಳು, ವಿಮಾನ ಟ್ರ್ಯಾಕಿಂಗ್‌ ಡೇಟಾ, ಹಡಗುಗಳನ್ನು ಗುರುತಿಸುವ ಸೌಲಭ್ಯವನ್ನು ಬಳಸಿಕೊಂಡು, ಅವನ್ನೆಲ್ಲಾ ಎಐ ಟೂಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಅದು ಅವುಗಳ ಚಲನೆಯನ್ನು ಪರಿಶೀಲಿಸಿ, ಅಮೆರಿಕ ಸೇನೆಯ ಮುಂದಿನ ನಡೆಯನ್ನು ಅಂದಾಜಿಸುತ್ತದೆ.

ಇದನ್ನೂ ಓದಿ: ಇರಾನ್‌ನಲ್ಲಿ ಪೈಲಟ್ ರಕ್ಷಣೆ ನೆಪದಲ್ಲಿ ಅಮೆರಿಕ ಗುಪ್ತ ಕಾರ್ಯಾಚರಣೆ? ಯುರೇನಿಯಂ ಕದಿಯುವ ಸಂಚು ವಿಫಲವಾದಾಗ ತನ್ನದೇ ವಿಮಾನ ಸ್ಫೋಟಿಸಿತೇ?

ಇದೇ ಮಾಹಿತಿಯನ್ನು ಆ ಕಂಪನಿಗಳು ಇರಾನ್‌ಗೆ ಮಾರಿವೆ ಎನ್ನುವುದು ಆರೋಪ. ಒಟ್ಟಿನಲ್ಲಿ ಅವುಗಳು ಮಧ್ಯಪ್ರಾಚ್ಯ ಸಂಘರ್ಷವನ್ನು ತಮ್ಮ ಎಐ ಟೂಲ್‌ನ ತರಬೇತಿ ಮತ್ತು ಕಾರ್ಯಕ್ಷಮತೆಯ ಪರಿಶೀಲನೆಗೆ ಬಳಸುತ್ತಿರುವುದರಲ್ಲಿ ಸಂದೇಹವಿಲ್ಲ.

ಇದನ್ನೂ ಓದಿ: ಒಬ್ಬ ಯೋಧನಿಗಾಗಿ ₹1000 ಕೋಟಿ ವಿಮಾನಕ್ಕೆ ಬೆಂಕಿ; ಅಮೆರಿಕ ಇತಿಹಾಸದಲ್ಲೇ ರೋಚಕ ಸೇನಾ ಕಾರ್ಯಾಚರಣೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Trump Final Warning: ಒಂದೇ ರಾತ್ರೀಲಿ ಇರಾನ್‌ ಫಿನಿಶ್‌ ನಮಗೆ ಆ ಶಕ್ತಿ ಇದೆ; ಟ್ರಂಪ್ ಫೈನಲ್ ವಾರ್ನಿಂಗ್!
ಇರಾನ್‌ನಲ್ಲಿ ಪೈಲಟ್ ರಕ್ಷಣೆ ನೆಪದಲ್ಲಿ ಅಮೆರಿಕ ಗುಪ್ತ ಕಾರ್ಯಾಚರಣೆ? ಯುರೇನಿಯಂ ಕದಿಯುವ ಸಂಚು ವಿಫಲವಾದಾಗ ತನ್ನದೇ ವಿಮಾನ ಸ್ಫೋಟಿಸಿತೇ?