ಕತಾರ್ ಭಾರತ ಮೂಲದ ಆಡಳಿತ ಸಮಿತಿಗೆ  ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ

By Suvarna News  |  First Published Jan 19, 2021, 9:28 PM IST

ಕತಾರ್ ಭಾರತ ಮೂಲದ ಆಡಳಿತ ಸಮಿತಿಯ ಚುನಾವಣೆ/ ಅವಿರೋಧ ಆಯ್ಕೆಯಾದ ಸುಬ್ರಮಣ್ಯ ಹೆಬ್ಬಾಗಿಲು/ ಕನ್ನಡಿಗರ ಹಿತ  ಕಾಪಾಡಿಕೊಂಡು ಬಂದಿದ್ದಾರೆ


ಕತಾರ್(ಜ. 19)   ಕತಾರ್ ಭಾರತ ಮೂಲದ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಅತಿ ಹೆಚ್ಚು ಮತಗಳನ್ನು ಪಡೆದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರದ ಮುಂದಿನ 2 ವರ್ಷಗಳ ಆಡಳಿತ ಸಮಿತಿಗೆ ಸುಬ್ರಮಣ್ಯ ಅವರು ಆಯ್ಕೆಯಾಗಿದ್ದಾರೆ. ಬೈಂದೂರು ಮೂಲದ ಸುಬ್ರಮಣ್ಯ, ಕಳೆದ ಒಂದು ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯರ  ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

'ಡಿಜಿಪೋಲ್' ಎಂಬ ತಂತ್ರಾಂಶವನ್ನು (ಮೊಬೈಲ್  ಎಪ್) ಪ್ರತ್ಯೇಕವಾಗಿ ಈ ಚುನಾಣೆಗೆಂದೇ ಮಾಡಲಾಗಿತ್ತು ಹಾಗೂ ಪ್ರತಿಯೊಬ್ಬರ ಮೊಬೈಲ್ ಗೆ ಇನ್ ಸ್ಟಾಲ್ ಮಾಡಲಾಗಿತ್ತು ಇದರ ಪರಿಣಾಮ ಎಂಬಂತೆ ಶೇ.  90 ಮತದಾನ ಆಯಿತು.

Tap to resize

Latest Videos

undefined

ಕತಾರ್‌ನಲ್ಲಿ ಜಯಭೇರಿ ಬಾರಿಸಿದ ಕನ್ನಡಿಗರಿಗೆ ಸನ್ಮಾನ

 ಸುಬ್ರಮಣ್ಯ ಈ ಹಿಂದೆ ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಯ ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಮತ್ತು ಅದಕ್ಕೂ ಪೂರ್ವದಲ್ಲಿ ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 

click me!