ಅಮೆರಿಕದ ದೇಗುಲ ರಸ್ತೆಗೆ ಗಣೇಶನ ಹೆಸರು!

Published : Apr 05, 2022, 07:26 AM IST
ಅಮೆರಿಕದ ದೇಗುಲ ರಸ್ತೆಗೆ ಗಣೇಶನ ಹೆಸರು!

ಸಾರಾಂಶ

* ಫ್ಲಶಿಂಗ್‌ ನಗರದ ಖ್ಯಾತ ಗಣೇಶ ದೇಗುಲ ರಸ್ತೆಗೆ ನಾಮಕರಣ * ಅಮೆರಿಕದ ದೇಗುಲ ರಸ್ತೆಗೆ ಗಣೇಶನ ಹೆಸರು * ಮೈಸೂರಿನ ಡಾ. ಉಮಾ ನೇತೃತ್ವದಲ್ಲಿ ನಡೆಸಿದ ಪ್ರಯತ್ನಕ್ಕೆ ಫಲ

ನ್ಯೂಯಾರ್ಕ್(ಏ.05): ಉತ್ತರ ಅಮೆರಿಕದ ಕ್ವೀನ್ಸ್‌ ಕೌಂಟಿಯಲ್ಲಿರುವ ಫ್ಲಶಿಂಗ್‌ ನಗರದ ರಸ್ತೆಯೊಂದಕ್ಕೆ ‘ಗಣೇಶ ಟೆಂಪಲ್‌ ಸ್ಟ್ರೀಟ್‌’ (ಗಣೇಶ ದೇಗುಲ ಬೀದಿ) ಎಂದು ಹೆಸರಿಸಲಾಗಿದೆ. ಇದು ಇಲ್ಲಿನ ಹಿಂದೂ ಸಮುದಾಯದ ಸಂಭ್ರಮಕ್ಕೆ ಕಾರಣವಾಗಿದೆ.

1977ರಲ್ಲಿ ಅಮೆರಿಕ ಹಿಂದೂ ಟೆಂಪಲ್‌ ಸೊಸೈಟಿಯಿಂದ ವಲ್ಲಭ ಗಣಪತಿ ದೇಗುಲವನ್ನು ನಿರ್ಮಿಸಲಾಗಿತ್ತು. ಇದು ಉತ್ತರ ಅಮೆರಿಕದಲ್ಲಿ ಸ್ಥಾಪನೆಯಾದ ಮೊದಲ ಹಿಂದೂ ದೇಗುಲ ಮತ್ತು ಅತ್ಯಂತ ಪುರಾತನ ದೇಗುಲ ಎಂಬ ಹಿರಿಮೆ ಹೊಂದಿದೆ. ಈ ದೇಗುಲ ಇರುವ ರಸ್ತೆಗೆ ಮೊದಲು ಧಾರ್ಮಿಕ ಸ್ವಾತಂತ್ರ್ಯ ಹೋರಾಟಗಾರ ಜಾನ್‌ ಬ್ರೌನೆ ಅವರ ಹೆಸರಿಡಲಾಗಿತ್ತು. ಅದರ ಜೊತೆಗೆ ಇದೀಗ ಈ ರಸ್ತೆಗೆ ಗಣೇಶ ಟೆಂಪಲ್‌ ಸ್ಟ್ರೀಟ್‌ ಎಂಬ ಸಹ ಹೆಸರನ್ನು ಇಡಲಾಗಿದೆ.

ನಗರದಲ್ಲಿರುವ ದ ಹಿಂದು ಟೆಂಪಲ್‌ ಸೊಸೈಟಿ ಆಫ್‌ ನಾಥ್‌ರ್‍ ಅಮೆರಿಕದ ಹಾಲಿ ಅಧ್ಯಕ್ಷೆಯಾಗಿ ಮೈಸೂರಿನವರಾದ ಖ್ಯಾತ ವೈದ್ಯೆ ಡಾ. ಉಮಾ ಮೈಸೂರ್‌ಕರ್‌ ಅವರು ಕಾರ್ಯನಿರ್ವಹಿಸುತ್ತಿದ್ದು, ಅವರ ನೇತೃತ್ವದಲ್ಲೇ ಈ ಹೆಸರು ಇಡುವ ಕಾರ್ಯ ನೆರವೇರಿದೆ. ಶನಿವಾರ ಬೀದಿಗೆ ಹೊಸ ಹೆಸರು ಇಡುವ ಸಮಾರಂಭ ನಡೆದಿದ್ದು, ಅದರಲ್ಲಿ ನ್ಯೂಯಾರ್ಕ್ನ ಎರಿಕ್‌ ಆ್ಯಡಮ್ಸ್‌, ನ್ಯೂಯಾರ್ಕ್ನ ಭಾರತದ ರಾಯಭಾರಿ ರಣದೀರ್‌ ಜೈಸ್ವಲಾಲ್‌ ಸೇರಿದಂತೆ ಹಲವ ಹಿಂದೂ ಸಮುದಾಯದ ನಾಯಕರು ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ