
ಕರ್ನಾಟಕದಲ್ಲಿ ಸದ್ಯ ಲಕ್ಕುಂಡಿಯ ನಿಧಿ ಭಾರಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದು ಹೊಸ ಹೊಸ ರೂಪ ಪಡೆಯುತ್ತಲೇ ಇದೆ. ದಿನದಿಂದ ದಿನಕ್ಕೆ ಇದು ಕುತೂಹಲ ಕೆರಳಿಸುತ್ತಿದ್ದು, ಹೆಸರೇ ಗೊತ್ತಿಲ್ಲದ ಗ್ರಾಮವೊಂದು, ಇದೀಗ ಭಾರತದಾದ್ಯಂತ ಸದ್ದು ಮಾಡುತ್ತಿದೆ. ದಿಢೀರ್ ಎಂದು ಇಲ್ಲಿಯ ಭೂಮಿಯ ಬೆಲೆಯೂ ಹೆಚ್ಚಾಗಿದ್ದು, ಇಲ್ಲಿ ಸಿಕ್ಕಿರುವ ಶಾಸನಗಳು, ನಿಧಿಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಇದು ಕರ್ನಾಟಕದ ಮಾತಾದರೆ, ಇದರ ಬೆನ್ನಲ್ಲೇ, 85 ಶತಕೋಟಿ ಡಾಲರ್ ಮೌಲ್ಯದ 1 ಸಾವಿರ ಟನ್ ಚಿನ್ನದ ನಿಧಿ ಪತ್ತೆಯಾಗಿದ್ದು, ಅನ್ಯಗ್ರಹದ ಲೋಹಗಳೂ ಸಿಕ್ಕಿರುವ ಘಟನೆ ಇಡೀ ವಿಶ್ವವನ್ನೇ ಬೆರಗುಗೊಳಿಸಿದೆ. ಇದು ಸಿಕ್ಕಿರುವುದು ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಪಿಂಗ್‌ಜಿಯಾಂಗ್ ಕೌಂಟಿಯಲ್ಲಿರುವ ವಾಂಗುವಿನಲ್ಲಿ. ಇಲ್ಲಿಯವರೆಗೆ ಕಂಡು ಬಂದಿರುವ ಅತಿದೊಡ್ಡ ಚಿನ್ನದ ನಿಕ್ಷೇಪ ಇದು ಎಂದು ವರದಿಯಾಗಿದೆ. ಇದರ ಅಂದಾಜು ನಿಕ್ಷೇಪ 85.9 ಶತಕೋಟಿ ಡಾಲರ್ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೇ, 6,562 ಅಡಿ ಆಳದಲ್ಲಿ 300 ಟನ್‌ಗಳಿಗೂ ಹೆಚ್ಚು ಚಿನ್ನದ ನಿಕ್ಷೇಪ ಇರುವುದನ್ನು ಭೂವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ 40 ಚಿನ್ನದ ನಾಳಗಳು ಕೂಡ ಸೇರಿರುವುದು ಇತಿಹಾಸದ ಬಗ್ಗೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿವೆ.
ಅದೇ ಇನ್ನೊಂದೆಡೆ, ಅನ್ಯಗ್ರಹದ ಲೋಹಗಳನ್ನು ಹೋಲುವ ವಸ್ತುಗಳು ಕೂಡ ಪತ್ತೆಯಾಗಿರುವುದು ಮತ್ತಷ್ಟು ಅಚ್ಚರಿಯನ್ನು ಉಂಟು ಮಾಡುತ್ತಿದೆ. ಐಬೇರಿಯನ್ ಕಂಚಿನ ಯುಗದ ಹೊಳೆಯುವ ಚಿನ್ನದ ನಿಧಿಗಳ ಸಂಗ್ರಹದ ನಡುವೆ ತುಕ್ಕು ಹಿಡಿದ ವಸ್ತುಗಳು ಪತ್ತೆಯಾಗಿದ್ದು, ಇವು ಭೂಮಿಯ ಮೇಲಿನ ವಸ್ತುಗಳಲ್ಲ, ಬದಲಿಗೆ ಅನ್ಯಗ್ರಹದ ವಸ್ತುಗಳು ಎನ್ನುವುದು ತಿಳಿದುಬಂದಿದೆ. ಚಿನ್ನದಿಂದ ಅಲಂಕರಿಸಲ್ಪಟ್ಟ ಬಳೆ ಮತ್ತು ತುಕ್ಕು ಹಿಡಿದ ಟೊಳ್ಳಾದ ಗೋಳಾರ್ಧವುಳ್ಳ ಆಭರಣಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ, ಇವು ನೆಲದ ಕೆಳಗಿನಿಂದ ಲೋಹದಿಂದಲ್ಲ, ಆದರೆ ಆಕಾಶದಿಂದ ಬಿದ್ದ ಲೋಹಗಳು ಎಂದು ಅಂದಾಜಿಸಲಾಗಿದೆ.
ಸ್ಪೇನ್‌ನ ರಾಷ್ಟ್ರೀಯ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿನ ನಿವೃತ್ತ ಸಂರಕ್ಷಣಾ ಮುಖ್ಯಸ್ಥ ಸಾಲ್ವಡಾರ್ ರೋವಿರಾ-ಲೊರೆನ್ಸ್ ನೇತೃತ್ವದ ಆವಿಷ್ಕಾರ ತಂಡವು ಇದರ ಬಗ್ಗೆ ಅಧ್ಯಯನ ನಡೆಸುತ್ತಿದೆ. ಒಟ್ಟಿನಲ್ಲಿ ಈ ಭೂಮಿ ಅದೆಷ್ಟೋ ವಿಚಿತ್ರಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಅಗೆದಷ್ಟೂ, ಬಗೆದಷ್ಟೂ ಜನರ ಊಹೆಗೂ ನಿಲುಕದ ಪ್ರಕೃತ್ಯ ವೈಚಿತ್ರ್ಯಗಳು ಜನರನ್ನು ಅಚ್ಚರಿಗೆ ತಳ್ಳುತ್ತಿದೆ. ತಾನೇ ಎಲ್ಲವನ್ನೂ ಬಲ್ಲವ ಎಂದು ಬೀಗುವ ಮನುಷ್ಯರ ನಡುವೆ, ಈ ಪ್ರಕೃತಿ ಅವರನ್ನು ಕುಬ್ಜರನ್ನಾಗಿ ಮಾಡುತ್ತಿದೆ ಎನ್ನುವುದು ಸುಳ್ಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ