ಅಮೆರಿಕದಲ್ಲಿ ಭಾರತೀಯನಿಂದ ಗುಂಡಿಕ್ಕಿ ಪತ್ನಿ, 3 ನೆಂಟರ ಹತ್ಯೆ, ಬಚ್ಚಲಮನೆ ಸೇರಿ ಜೀವ ಉಳಿಸಿಕೊಂಡ ಮಕ್ಕಳು

Published : Jan 25, 2026, 09:15 AM IST
Indian man shoots wife 3 sibling

ಸಾರಾಂಶ

ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯನೊಬ್ಬ ಪತ್ನಿ ಸೇರಿ ನಾಲ್ವರನ್ನು ಹತ್ಯೆ ಮಾಡಿದ್ದಾನೆ. ಮತ್ತೊಂದೆಡೆ, ಅಮೆರಿಕದಲ್ಲಿ ಟಿಕ್‌ಟಾಕ್‌ ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಎಚ್‌ಪಿ ಮುಖಂಡನ ಮೇಲಿನ ಹಲ್ಲೆ ಬಳಿಕ ಕೋಮು ಹಿಂಸಾಚಾರ ಭುಗಿಲೆದ್ದಿದೆ.

ಜಾರ್ಜಿಯಾ: ಅಮೆರಿಕದಲ್ಲಿ ನೆಲೆಸಿದ್ದ ಭಾರತ ಮೂಲದ ವ್ಯಕ್ತಿಯೊಬ್ಬ ಪತ್ನಿಯೊಡನೆ ಜಗಳವಾಡಿ ಸಿಟ್ಟಿಗೆದ್ದು, ಮಕ್ಕಳ ಕಣ್ಣೆದುರಲ್ಲೇ ಪತ್ನಿ ಹಾಗೂ ಆಕೆಯ ಮೂವರು ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ ಜಾರ್ಜಿಯಾದ ಲಾರೆನ್ಸ್‌ವಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಮೀನೂ ಡೋಗ್ರಾ (43), ಗೌರವ್‌ ಕುಮಾರ್ (33), ನಿಧಿ ಚಂದರ್ (37) ಹಾಗೂ ಹರೀಶ್‌ ಚಂದರ್‌ (38) ಮೃತ ದುರ್ದೈವಿಗಳು. ಆರೋಪಿ ಪತಿ ವಿಜಯ್‌ ಕುಮಾರ್‌ನನ್ನು (51) ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು?

ಮೀನೂ ದಂಪತಿ ತಮ್ಮ 12 ವರ್ಷದ ಮಗುವಿನ ಜೊತೆ ಲಾರೆನ್ಸ್‌ವಿಲ್ಲೆಯ ಸಂಬಂಧಿಕರ ಮನೆಗೆ ತೆರಳಿದ್ದರು. ಆಗ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದೆ. ಕೂಡಲೇ ಪತ್ನಿ ಹಾಗೂ ಇತರರನ್ನು ವಿಜಯ್‌ ಕುಮಾರ್‌ ಗುಂಡಿಕ್ಕಿ ಹತ್ಯೆಗೆ ಮುಂದಾಗಿದ್ದಾನೆ. ವಿಜಯ್‌ನ ಮಗು ಹಾಗೂ ಸಂಬಂಧಿಕರ ಇಬ್ಬರು ಮಕ್ಕಳು ಬಚ್ಚಲಮನೆಯಲ್ಲಿ ಅಡಗಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಮಗು ಸಮಯಪ್ರಜ್ಞೆ ತೋರಿ 911ಕ್ಕೆ ಕರೆ ಮಾಡಿದ್ದರಿಂದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.

ಅಮೆರಿಕದಲ್ಲಿ ಕಡೆಗೂ ಟಿಕ್‌ಟಾಕ್‌ ನಿಷೇಧ ರದ್ದು: ಹೊಸ ಒಪ್ಪಂದ

ವಾಷಿಂಗ್ಟನ್‌: ಕಳೆದ 1 ವರ್ಷದಿಂದ ಅಮೆರಿಕದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಚೀನಾ ಮೂಲದ ಜನಪ್ರಿಯ ಆನ್‌ಲೈನ್‌ ವೇದಿಕೆ ಟಿಕ್‌ಟಾಕ್‌ ಮರಳಿ ಸೇವೆ ಒದಗಿಸಲು ಮುಂದಾಗಿದೆ. ಸೇವೆ ಪುನಾರಂಭ ಸಂಬಂಧ ಅಮೆರಿಕ ಒಡ್ಡಿದ್ದ ಷರತ್ತುಗಳಿಗೆ ಟಿಕ್‌ಟಾಕ್‌ನ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ ಒಪ್ಪಿದ ಕಾರಣ ಶೀಘ್ರವೇ ಅದು ಹೊಸ ಆ್ಯಪ್‌ ಮೂಲಕ ಸೇವೆ ಪುನಾರಂಭಿಸಲು ಸಜ್ಜಾಗಿದೆ.

ಈ ಒಪ್ಪಂದದ ಅನ್ವಯ, ಬೈಟ್‌ಡ್ಯಾನ್ಸ್‌ ಅಮೆರಿಕದಲ್ಲಿ ಹೊಸ ಕಂಪನಿಯಾಗಿ ಅಸ್ತಿತ್ವಕ್ಕೆ ಬರಲಿದೆ. ‘ಟಿಕ್‌ಟಾಕ್ ಯುಎಸ್‌ಡಿಎಸ್ ಜಾಯಿಂಟ್ ವೆಂಚರ್ ಎಲ್‌ಎಲ್‌’ ಹೆಸರಿನ ಹೊಸ ಉದ್ಯಮದಲ್ಲಿ ಶೇ.80ಕ್ಕಿಂತ ಹೆಚ್ಚು ಹೂಡಿಕೆಯ ಪಾಲನ್ನು ಅಮೆರಿಕ ಮೂಲದ ಒರಾಕಲ್‌, ಎಂಜಿಎಕ್ಸ್‌, ಸಿಲ್ವರ್ ಲೇಕ್‌ ಕಂಪನಿಗಳು ಹೊಂದಿರಲಿವೆ. ಶೇ.19.9ರಷ್ಟು ಪಾಲು ಬೈಟ್‌ಡ್ಯಾನ್ಸ್‌ಗಿರಲಿದೆ. ಕಂಪನಿಯ ಆಡಳಿತ ಮಂಡಳಿಯಲ್ಲಿ ಅಮೆರಿಕದ 7 ಮಂದಿ ನಿರ್ದೇಶಕರಿರಲಿದ್ದಾರೆ.

20 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದ್ದ ಟಿಕ್‌ಟಾಕ್‌ನ್ನು 2020ರಲ್ಲಿ ಅಮೆರಿಕ ಸರ್ಕಾರ ತನ್ನ ದೇಶದಲ್ಲಿ ಭಧ್ರತಾ ಕಾರಣಗಳೀಗಾಗಿ ನಿಷೇಧಿಸಿತ್ತು.

ಇದನ್ನೂ ಓದಿ: ಭಾರತದ ಮೇಲೆ ಅಮೆರಿಕ ಹೇರಿದ 25% ತೆರಿಗೆ ರದ್ದು? ದಾಳಿ ನಡೆಸಿದ್ರೆ ಯುದ್ದ ಎಂದು ಪರಿಗಣನೆ: ಇರಾನ್‌ ಗುಡಗು

ಇದನ್ನೂ ಓದಿ: ವಿಶ್ವ ಆರೋಗ್ಯ ಸಂಸ್ಥೆಗೆ 2300 ಕೋಟಿ ರೂಪಾಯಿ ಟೋಪಿ ಹಾಕಿ ಅಲ್ಲಿಂದ ಹೊರಬಂದ ಅಮೆರಿಕ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ಮೇಲೆ ಅಮೆರಿಕ ಹೇರಿದ 25% ತೆರಿಗೆ ರದ್ದು? ದಾಳಿ ನಡೆಸಿದ್ರೆ ಯುದ್ದ ಎಂದು ಪರಿಗಣನೆ: ಇರಾನ್‌ ಗುಡಗು
ಪ್ರಿಯಾಂಕಾ ಚೋಪ್ರಾ 'ಕಾಂಪ್ರಮೈಸ್' ಆಗಲ್ಲ.. ಸಹನಟಿ ಬಗ್ಗೆ ಹೀಗ್ ಹೇಳ್ಬಿಟ್ರು ಮಹೇಶ್ ಬಾಬು; ಏನಿದು ಮ್ಯಾಟರ್?