
ನವದೆಹಲಿ (ಸೆ.01) ಆ್ಯಪಲ್ ಕಂಪನಿಗೆ ಇಂದಿನಿಂದ ಹೊಸ ಸಿಇಒ. ಸ್ಟೀವ್ ಜಾಬ್ಸ್ ನಿರ್ಗಮಿಸಿದ ಬಳಿಕ ಕಳೆದ 15 ವರ್ಷಗಳಿಂದ ಆ್ಯಪಲ್ ಕಂಪನಿಯನ್ನು ದೈತ್ಯವಾಗಿ ಬೆಳೆಸಿದ ಟಿಮ್ ಕುಕ್ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇಂದಿನಿಂದ (ಸೆ.01) ಜಾನ್ ಟರ್ನಸ್ ಆ್ಯಪಲ್ ಕಂಪನಿ ಸಿಇಒ ಆಗಿ ಅಧಿಕಾರವಹಿಸಿಕೊಂಡಿದ್ದಾರೆ. ಆ್ಯಪಲ್ ಕಂಪನಿ ಇದೀಗ 381 ಲಕ್ಷ ಕೋಟಿ ಮೌಲ್ಯದ ಕಂಪನಿ. ಈ ದೈತ್ಯ ಕಂಪನಿ ಕಟ್ಟಿದ ಹಿಂದೆ ಭಾರತದ ನೀಮ್ ಕರೋಲಿ ಬಾಬಾ, ಹಿಂದೂ ಧರ್ಮ ಹಾಗೂ ಸಂಪ್ರದಾಯದ ಪ್ರೇರಣೆ ಇದೆ.
ಸ್ಟೀವ್ಸ್ ಜಾಬ್ಸ್ ಆ್ಯಪ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ. ಆ್ಯಪಲ್ ಕಂಪನಿಯನ್ನು ಹುಟ್ಟುಹಾಕುವ ಮೊದಲು ಸ್ಟೀವ್ ಜಾಬ್ಸ್ ಎಲ್ಲರಂತೆ ಸಾಮಾನ್ಯ ವ್ಯಕ್ತಿಯಾಗಿದ್ದ. ಕಾಲೇಜು ದಿನದ ಗೆಳೆಯ ಡ್ಯಾನಿಯಲ್ ಕಾಟ್ಕೆ ರಾಮ್ ದಾಸ್ ಬರೆದ ಬಿ ಹಿಯರ್ ನೌ ಅನ್ನೋ ಪುಸ್ತಕ ಓದಿ ಭಾರತೀಯತೆ, ಧರ್ಮಗಳಿಂದ ಪ್ರೇರಿತರಾಗಿದ್ದರು. ಇಷ್ಟೇ ಅಲ್ಲ ನೀಮ್ ಕರೋಲಿ ಬಾಬಾ ಭೇಟಿಯಾಗಲು ಬಯಸಿದ್ದರು. 19 ವರ್ಷದ ಸ್ಟೀವ್ ಜಾಬ್ಸ್ 1974ರಲ್ಲಿ ಆಧ್ಯಾತ್ಮಿಕ ಜ್ಞಾನಕ್ಕಾಗಿ ಭಾರತಕ್ಕೆ ಆಗಮಿಸಿದ್ದರು.
ಭಾಷೆ, ಭಾರತದ ಊರು, ನಗರ, ಇಲ್ಲಿನ ಜನರು, ಪದ್ಧತಿ, ಸಂಪ್ರದಾಯದ ಯಾವುದೇ ಅರಿವಿಲ್ಲದ ಸ್ಟೀವ್ ಜಾಬ್ಸ್ ಭಾರತಕ್ಕೆ ಬಂದಿಳಿದು ನೀಮ್ ಕರೋಲಿ ಬಾಬಾನ ಭೇಟಿಯಾಗಲು ದಾರಿ ಹುಡುಕಿದ್ದರು. ದುರುೃಷ್ಟವಶಾತ್ ಸ್ಟೀವ್ ಜಾಬ್ಸ್ ಭಾರತಕ್ಕೆ ಬರುವ ಒಂದು ವರ್ಷ ಮೊದಲೇ ನೀಮ್ ಕರೋಲಿ ಬಾಬಾ ನಿಧನರಾಗಿದ್ದರು. ಬಾಬಾ ಜೊತೆ ಆಶ್ರಮದಲ್ಲಿ ಕಳೆಯಲು ಬಯಸಿದ್ದ ಸ್ಟೀವ್ ಜಾಬ್ಸ್‌ಗೆ ಆಘಾತವಾಗಿತ್ತು. ಆದರೆ ಭಾರತದಿಂದ ಆಧ್ಯಾತ್ಮ ಜ್ಞಾನ ಪಡದೇ ಪಡೆಯುತ್ತೇನೆ ಎಂದು ಹಠಕ್ಕೆ ಬಿದ್ದ ಜಾಬ್ಸ್ 7 ತಿಂಗಳು ಉಳಿದುಕೊಂಡಿದ್ದರು. ಇದರ ನಡುವೆ ಭಾಷೆ ಗೊತ್ತಿಲ್ಲದೆ ಹಲವರಿಂದ ಮೋಸ ಹೋಗಿದ್ದರು. ಇನ್ನು ಇರುವ ಹಣ ಕಳುವಾಗಿತ್ತು. ಹೀಗಾಗಿ ಗ್ರಾಮದಲ್ಲಿ ಉಳಿದುಕೊಂಡ ಸ್ಟೀವ್ ಜಾಬ್ಸ್ ಆಧ್ಯಾತ್ಮಿಕ ವಿಚಾರಗಳನ್ನು ಕಲಿಯುತ್ತಾ ಸಾಗಿದ್ದರು.
ಕಂಚೈ ಧಾಮ್ ಸೇರಿದಂತೆ ಕೆಲ ಆಶ್ರಮಗಳಲ್ಲಿ ಹಲವು ದಿನ ಉಳಿದಿಕೊಂಡಿದ್ದರು. ಭಾರತದಲ್ಲಿ ಸ್ಟೀವ್ ಜಾಬ್ಸ್ ಹಲವು ಸವಾಲು ಎದುರಿಸಿದ್ದರು. ಭಾರತದ ಗ್ರಾಮದ ಜನರು ಅಂತಃಪ್ರಜ್ಞೆಯನ್ನು ಬಳಸುತ್ತಾರೆ. ಇದು ವಿಶ್ವದ ಇತರ ಭಾಗದ ಜನರ ಅಂತಃಪ್ರಜ್ಞೆಗಿಂತ ಹೆಚ್ಚು ಅಭಿವೃದ್ಧಿ ಹೊಂದಿದೆ ಎಂದಿದ್ದರು. ಸರಳತೆ, ಜ್ಞಾನ ಸೇರಿದಂತೆ ಹಲವು ವಿಚಾರಗಳು ಜಾಬ್ಸ್‌ಗೆ ಪ್ರೇರಣೆ ನೀಡಿತ್ತು. ಇದೇ ತತ್ವದಡಿ ಆ್ಯಪಲ್ ಕಂಪನಿ ಹುಟ್ಟು ಹಾಕಿದ ಸ್ಟೀವ್ ಜಾಬ್ಸ್ ಐಫೋನ್, ಮ್ಯಾಕ್ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನ, ತಂತ್ರಜ್ಞಾನಗಳ ಪರಿವರ್ತನಾಗಿ ಗುರುತಿಸಿಕೊಂಡರು.
2011ರಲ್ಲಿ ಸ್ಟೀವ್ ಜಾಬ್ಸ್ ಆರೋಗ್ಯ ಹದಗೆಟ್ಟಿತು. ಹೀಗಾಗಿ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು. 2011ರ ಆಕ್ಟೋಬರ್ 5 ರಂದು ಸ್ಟೀಬ್ ಜಾಬ್ಸ್ ನಿಧನರಾದರು. ಬಳಿಕ ಟಿಮ್ ಕುಕ್ ಹುದ್ದೆ ಅಲಂಕರಿಸಿದರು. ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ನಡೆದ ಮಹಾ ಕುಂಭ ಮೇಳಕ್ಕೆ ಸ್ಟೀವ್ ಜಾಬ್ಸ್ ಪತ್ನಿ ಹಾಜರಾಗಿದ್ದರು. ಹಿಂದೂ ಹೆಸರಿನಲ್ಲಿ ಮಹಾ ಕುಂಭಮೇಳದಲ್ಲಿ ಹಲವು ದಿನಗಳ ಕಾಲ ತಂಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ