ನಮ್ಮ ಬೆಂಬಲಕ್ಕೆ ಬನ್ನಿ: ಜೈಶಂಕರ್‌ಗೆ ಬಲೂಚ್ ನಾಯಕ ಪತ್ರ

Kannadaprabha News   | Kannada Prabha
Published : Jan 03, 2026, 07:34 AM IST
Mir Yar Baloch

ಸಾರಾಂಶ

ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಮತ್ತೆ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದು, ತಮ್ಮ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಭಾರತದ ಸಹಕಾರ ಕೋರಿದ್ದಾರೆ. ಈ ಸಂಬಂಧ ಬಲೂಚ್‌ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರಿಗೆ ಬಹಿರಂತ ಪತ್ರ ಬರೆದಿದ್ದಾನೆ.

ಪೇಶಾವರ: ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಮತ್ತೆ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದು, ತಮ್ಮ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಭಾರತದ ಸಹಕಾರ ಕೋರಿದ್ದಾರೆ. ಈ ಸಂಬಂಧ ಬಲೂಚ್‌ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರಿಗೆ ಬಹಿರಂತ ಪತ್ರ ಬರೆದಿದ್ದಾನೆ.

‘ಚೀನಾ ಮತ್ತು ಪಾಕಿಸ್ತಾನದ ಸಂಬಂಧ ದಿನೇದಿನೇ ಬಲವಾಗುತ್ತಿದೆ. ಪಾಕ್‌ನ ಬಲೂಚಿಸ್ತಾನ ಪ್ರದೇಶದಲ್ಲಿ ಚೀನಾ ಮುಂದಿನ ಕೆಲವು ತಿಂಗಳಲ್ಲಿ ಸೇನೆಯನ್ನು ನಿಯೋಜಿಸುವ ಸಾಧ್ಯತೆಯಿದೆ. ಇದು ಭಾರತಕ್ಕೂ ಅಪಾಯಕರ’ ಎಂದು ಬಲೂಚ್‌ ನಾಯಕ ಮೀರ್ ಯಾರ್ ಬಲೂಚ್ , ಸಚಿವ ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ. ಜೊತೆಗೆ, ’ನಮ್ಮ ಹಕ್ಕುಗಳನ್ನು ಪಾಕಿಸ್ತಾನ ಕಸಿಯುತ್ತಿದೆ. ಇದರ ವಿರುದ್ಧದ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದೂ ಕೋರಿದ್ದಾನೆ.

ಇನ್ನು ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನದ ಸೊಕ್ಕಡಗಿಸಿದ ಭಾರತದ ಪರಾಕ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾನೆ.

‘ಬೀಜಿಂಗ್-ಇಸ್ಲಾಮಾಬಾದ್ ಮೈತ್ರಿ ಇನ್ನಷ್ಟು ಆಳವಾಗುತ್ತಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಚೀನಾ ತನ್ನ ಸೇನಾ ಪಡೆಗಳನ್ನು ಬಲೂಚಿಸ್ತಾನ್ ಪ್ರದೇಶದಲ್ಲಿ ನಿಯೋಜಿಸಬಹುದು. ಇದು ಭಾರತದ ಪಾಲಿಗೂ ಅಪಾಯಕರ. ಇದನ್ನು ನೀವು ವಿರೋಧಿಸಬೇಕು’ ಎಂದಿದ್ದಾನೆ,

ಆಪರೇಷನ್‌ ಸಿಂದೂರಕ್ಕೆ ಅಭಿನಂದನೆ:

‘ಆಪರೇಷನ್ ಸಿಂದೂರವು ಪಾಕ್‌ ಬೆಂಬಲಿತ ಉಗ್ರಕೇಂದ್ರಗಳನ್ನು ನಾಶಪಡಿಸಿತು. ಇದು ಭಾರತದ ಧೈರ್ಯ ಮತ್ತು ಪ್ರಾದೇಶಿಕ ಭದ್ರತೆಗೆ ಬದ್ಧತೆಯನ್ನು ಸೂಚಿಸುತ್ತದೆ. ಎಲ್ಲ ಭಾರತೀಯರಿಗೆ 2026ನೇ ವರ್ಷದ ಶುಭಾಶಯಗಳು. ಭಾರತ ಮತ್ತು ಬಲೂಚಿಸ್ತಾನದ ನಡುವಿನ ದಶಕಗಳ ಸಂಬಂಧದ ಮೇಲೆ ಬೆಳಕು ಚೆಲ್ಲಲು ಇದು ಅತ್ಯುತ್ತಮ ಸಂದರ್ಭ’ ಎಂದು ಉಲ್ಲೇಖಿಸಿದ್ದಾನೆ.

ದುಷ್ಟ ನೆರೆರಾಷ್ಟ್ರದಿಂದ ದೇಶವಾಸಿಗಳ ರಕ್ಷಣೆ ನಮ್ಮ ಹಕ್ಕು: ಜೈಶಂಕರ್‌

ಚೆನ್ನೈ: ಪಾಕಿಸ್ತಾನವನ್ನು ‘ಕೆಟ್ಟ ನೆರೆರಾಷ್ಟ್ರ’ ಎಂದು ಕರೆದಿರುವ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ‘ಅಂತಹವರು ಪೋಷಿಸುವ ಉಗ್ರವಾದದಿಂದ ನಮ್ಮ ದೇಶವಾಸಿಗಳನ್ನು ರಕ್ಷಿಸಿಕೊಳ್ಳುವುದು ಭಾರತದ ಹಕ್ಕು’ ಎಂದು ಹೇಳಿದ್ದಾರೆ. ಈ ಮೂಲಕ, ‘ಆಪರೇಷನ್‌ ಸಿಂದೂರ ಕೈಗೊಂಡು ಭಾರತ ತಪ್ಪು ಮಾಡಿತು’ ಎಂದು ಇತ್ತೀಚೆಗೆ ನಾಲಗೆ ಹರಿಬಿಟ್ಟಿದ್ದ ಲಷ್ಕರ್‌ ಸಂಘಟನೆಯ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಗೆ ತಿರುಗೇಟು ನೀಡಿದ್ದಾರೆ.ಮದ್ರಾಸ್‌ನ ಐಐಟಿಯಲ್ಲಿ ಮಾತನಾಡಿದ ಜೈಶಂಕರ್‌, ‘ದುರದೃಷ್ಟವಶಾತ್‌, ನಮ್ಮ ಪಶ್ಚಿಮದಲ್ಲಿರುವ ದುಷ್ಟ ದೇಶವು (ಪಾಕ್‌) ಉದ್ದೇಶಪೂರ್ವಕವಾಗಿ, ನಿರಂತರವಾಗಿ ಮತ್ತು ಪಶ್ಚಾತ್ತಾಪವಿಲ್ಲದೆ ಭಯೋತ್ಪಾದನೆಯನ್ನು ಮುಂದುವರಿಸಲು ನಿರ್ಧರಿಸಿದರೆ, ಅದರಿಂದ ನಮ್ಮ ನಾಗರಿಕರನ್ನು ರಕ್ಷಿಸುವುದು ನಮ್ಮ ಹಕ್ಕು. ಅದನ್ನು ಹೇಗೆ ಬಳಸುತ್ತೇವೆಂಬುದು ನಮಗೆ ಬಿಟ್ಟ ವಿಚಾರ. ಅನ್ಯರು ಹೇಳುವ ಅಗತ್ಯವಿಲ್ಲ’ ಎಂದರು. ಜತೆಗೆ, ಉಗ್ರವಾದವನ್ನು ನಿಲ್ಲಿಸದೆ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸುವುದು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌ ಸರ್ಕಾರದ ವಿರುದ್ಧ ಭಾರಿ ಜನತಾ ದಂಗೆ
ಭಾರತ ‘ದೇಶದ್ರೋಹಿ’ಯ ಪರ ನ್ಯೂಯಾರ್ಕ್‌ ಮೇಯರ್‌ ಬೆಂಬಲ