Latest Videos

ಐಸ್‌ಲ್ಯಾಂಡ್ ಪ್ರಧಾನಿ ಬೆನೆಡಿಕ್ಟ್‌ಸನ್ ಭೇಟಿಯಾದ ರವಿಶಂಕರ್ ಗುರೂಜಿ; ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ

By Suvarna NewsFirst Published Jun 25, 2024, 2:32 PM IST
Highlights

ಜಾಗತಿಕ ಶಾಂತಿಧೂತರಾದ ಗುರುದೇವ್ ಶ್ರೀ ಶ್ರೀ ರವಿಶಂಕರ ಗುರೂಜಿಯನ್ನ ಐಸ್‌ಲ್ಯಾಂಡ್ ನ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಜಾರ್ನಿ ಬೆನಿಡಿಕ್ಟ್ ಸನ್ ರವರು ರೇಯ್ಜಾವಿಕ್ ನಲ್ಲಿ  ಇಂದು ಸ್ವಾಗತಿಸಿದರು.           

  ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರೂ, ಜಾಗತಿಕ ಆಧ್ಯಾತ್ಮಿಕ ಗುರುಗಳೂ ಆದ ಗುರುದೇವ್ ಶ್ರೀ ಶ್ರೀ ರವಿಶಂಕರರನ್ನು ಐಸ್ ಲ್ಯಾಂಡ್ ನ ಪ್ರಧಾನಮಂತ್ರಿಗಳಾದ ಜಾರ್ನಿ ಬೆನಿಡಿಕ್ಟ್ ಸನ್iceland pm benediktsson( ರವರು ಇಂದು ರೇಯ್ಜಾವಿಕ್ ನಲ್ಲಿ ಬರ ಮಾಡಿಕೊಂಡರು. ಇಂದಿನ ದಿನಗಳಲ್ಲಿ, ಯೂರೋಪಿನಲ್ಲಿ ಶಾಂತಿಯನ್ನು ತರುವ ಬಗ್ಗೆ, ಮಾನಸಿಕ ಆರೋಗ್ಯವನ್ನು ಸುಧಾರಿಸುವ ಬಗ್ಗೆ,  ಸಾಮಾಜಿಕ ಅಭಿವೃದ್ಧಿಯನ್ನು ಹೊಂದುವ ಸಲುವಾಗಿ ವೈಯಕ್ತಿಕ ಒಳಿತು ಎಷ್ಟು ಮಹತ್ವವಾದದ್ದು ಎಂಬುದರ ಬಗ್ಗೆ ಚರ್ಚಿಸಿದರು.

ಆರ್ಟ್ ಆಫ್ ಲಿವಿಂಗ್(art of living) ಮಾಡುವ ಕಾರ್ಯಗಳ ಬಗ್ಗೆ ಹಂಚಿಕೊಳ್ಳುತ್ತಾ ಗುರುದೇವರು, ಎಲ್ಲಾ ಕಾಲಗಳ ಪರೀಕ್ಷೆಯನ್ನೂ ಗೆದ್ದು ಬಂದಿರುವಂತಹ ಧ್ಯಾನದ, ಉಸಿರಾಟದ ಪ್ರಕ್ರಿಯೆಗಳ ಬಗ್ಗೆ ತಿಳಿಸಿ ಹೇಳಿ, ಅದರಿಂದ ವ್ಯಕ್ತಿಗಳ ಒತ್ತಡ, ಆತಂಕ ನಿವಾರಣೆಯಾಗಿ, ಅದರ ಪರಿಣಾಮವಾಗಿ ಎಲ್ಲರ ದೈಹಿಕ ಹಾಗೂ ಮಾನಸಿಕ ಒಳಿತು ಉಂಟಾಗುತ್ತದೆಂದು ವಿವರಿಸಿದರು. ಡೆನ್ಮಾರ್ಕ್ ನ ಕೈದಿಗಳಿಗೆ ಹಾಗೂ ಗ್ಯಾಂಗ್ ಲೀಡರ್ ಗಳಿಗೆ "ಬ್ರೀದ್ ಸ್ಮಾರ್ಟ್" ಕಾರ್ಯಕ್ರಮ ನಡೆಸಿ, ಅದರಿಂದ ಅವರ ಪುನಶ್ಚೇತನ ಕಾರ್ಯ ನಡೆಯುತ್ತಿರುವುದಾಗಿ ತಿಳಿಸಿದರು. ಅಪರಾಧಿಗಳಲ್ಲಿ ಹಿಂಸೆಯ ಚಕ್ರವನ್ನು, ಮಾದಕ ವಸ್ತುಗಳ ಸೇವನೆಯನ್ನು ಇದರಿಂದ ತಡೆಗಟ್ಟಿದ್ದರಿಂದ, ಅವರಲ್ಲಿ ಆಂತರಿಕ ಶಾಂತಿ ಹೆಚ್ಚಿ, ಒಬ್ಬರು ಮತ್ತೊಬ್ಬರಿಗೆ ಅಕ್ಕರೆಯನ್ನು ಈಗ ತೋರುವಂತಾಗಿದೆ ಎಂದು ತಿಳಿಸಿದರು.

Ravi Shankar Guruji: ಆರ್ಟ್‌ ಆಫ್‌ ಲಿವಿಂಗ್‌ನಿಂದ ಭಾರತಾದ್ಯಂತ 1 ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ!

ಈ ಭೇಟಿಯಲ್ಲಿ, ಪ್ರಧಾನಮಂತ್ರಿಗಳಾದ ಬೆನಿಡಿಕ್ಟ್ ಸನ್ ರವರು ಪರಿಸರ ಬದಲಾವಣೆಯನ್ನು ಎದುರಿಸಲಿಕ್ಕಾಗಿ ಮಾಡಿರುವ ಅದ್ಬುತ ಕೆಲಸವನ್ನು ಗುರುದೇವರು ಶ್ಲಾಘಿಸಿದರು. ಐಸ್ ಲ್ಯಾಂಡ್ ನ ವಿದ್ಯುಚ್ಛಕ್ತಿಯ ಉತ್ಪಾದನೆಯಲ್ಲಿ ಶೇಕಡಾ 100 ರಷ್ಟು ನವೀಕರಿಸಬಹುದಾದ ಮೂಲಗಳಿಂದಲೇ ಬರುತ್ತದೆ.

ಜಿನಿವಾದಲ್ಲಿ ವಿಶ್ವಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭೇಟಿಗಳು ಹಾಗೂ ಪ್ರಮುಖ ವಕ್ತಾರರಾಗಿ ಭಾಷಣಗಳನ್ನು ನೀಡಿದ ನಂತರ ಗುರುದೇವರು ಐಸ್ ಲ್ಯಾಂಡ್ ಗೆ ಭೇಟಿ ನೀಡಿದ್ದಾರೆ. ಇದಾದ ನಂತರ ಗುರುದೇವರು ಅಮೆರಿಕಾದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ.

click me!