113 ದೇಶಗಳಲ್ಲಿ ಈವರೆಗೂ ಸ್ತ್ರೀಯರು ಮುಖ್ಯಸ್ಥರಾಗಿಲ್ಲ: ವಿಶ್ವಸಂಸ್ಥೆ

By Kannadaprabha News  |  First Published Jun 25, 2024, 10:20 AM IST

141 ರಾಷ್ಟ್ರಗಳ ಪೈಕಿ 113 ರಾಷ್ಟ್ರಗಳಲ್ಲಿ ಇದುವರೆಗೂ ಒಬ್ಬರೂ ಮಹಿಳಾ ನಾಯಕರಿಗೆ ದೇಶವನ್ನು ಮುನ್ನಡೆಸುವ ಅಧಿಕಾರ ಸಿಕ್ಕಿಲ್ಲ. ಜೊತೆಗೆ ಎಲ್ಲ ರಾಷ್ಟ್ರಗಳ ಕೇಂದ್ರ ಸಚಿವರ ಪೈಕಿ ಕೇವಲ ಶೇ.23ರಷ್ಟು ಮಾತ್ರ ಮಹಿಳಾ ಸದಸ್ಯರಿದ್ದಾರೆ. ಅದರಲ್ಲೂ 7 ರಾಷ್ಟ್ರಗಳ ಕೇಂದ್ರೀಯ ಮಂತ್ರಿ ಮಂಡಲದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನೇ ನೀಡಿಲ್ಲ ಎಂಬುದಾಗಿ ತಿಳಿಸಿದ ವಿಶ್ವಸಂಸ್ಥೆ 


ವಿಶ್ವಸಂಸ್ಥೆ(ಜೂ.25):  ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (ಜೂ.24) ಆಚರಿಸುತ್ತಿರುವ ನಡುವೆಯೇ ದೇಶದ ನಾಯಕತ್ವದಲ್ಲಿ ಮಹಿಳೆಯರ ಪಾತ್ರ ಬಹಳ ಸೀಮಿತವಾಗಿರುವ ಕುರಿತು ವಿಶ್ವಸಂಸ್ಥೆಯ ಮಹಿಳಾ ಆಯೋಗದ ವರದಿ ಉಲ್ಲೇಖಿಸಿದೆ.

141 ರಾಷ್ಟ್ರಗಳ ಪೈಕಿ 113 ರಾಷ್ಟ್ರಗಳಲ್ಲಿ ಇದುವರೆಗೂ ಒಬ್ಬರೂ ಮಹಿಳಾ ನಾಯಕರಿಗೆ ದೇಶವನ್ನು ಮುನ್ನಡೆಸುವ ಅಧಿಕಾರ ಸಿಕ್ಕಿಲ್ಲ. ಜೊತೆಗೆ ಎಲ್ಲ ರಾಷ್ಟ್ರಗಳ ಕೇಂದ್ರ ಸಚಿವರ ಪೈಕಿ ಕೇವಲ ಶೇ.23ರಷ್ಟು ಮಾತ್ರ ಮಹಿಳಾ ಸದಸ್ಯರಿದ್ದಾರೆ. ಅದರಲ್ಲೂ 7 ರಾಷ್ಟ್ರಗಳ ಕೇಂದ್ರೀಯ ಮಂತ್ರಿ ಮಂಡಲದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನೇ ನೀಡಿಲ್ಲ ಎಂಬುದಾಗಿ ತಿಳಿಸಿದೆ. ನ್ಯೂಯಾರ್ಕ್‌ನಲ್ಲಿ ಶೇ.25, ಜಿನೇವಾದಲ್ಲಿ ಶೇ.35, ವಿಯೆನ್ನಾದಲ್ಲಿ ಶೇ.33.5 ರಷ್ಟು ಮಹಿಳೆಯರು ಕಾಯಂ ಜನಪ್ರತಿನಿಧಿಗಳಾಗಿದ್ದಾರೆ ಎಂದು ತಿಳಿಸಿದೆ.

Tap to resize

Latest Videos

undefined

ಅಂತರಿಕ್ಷದಿಂದ ಹೇಗೆ ಕಾಣುತ್ತೆ ರಾಮ ಸೇತುವೆ? ಯುರೋಪ್ ಬಾಹ್ಯಾಕಾಶ ಸಂಸ್ಥೆಯಿಂದ ಫೋಟೋ ರಿಲೀಸ್

ರಾಜತಾಂತ್ರಿ ಕತೆಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 1995ರಲ್ಲೇ ಬೀಜಿಂಗ್ ಮಹಿಳಾ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಂಡಿದ್ದರೂ ಪರಿಸ್ಥಿತಿ ಸುಧಾರಿಸದಿರುವ ಕುರಿತು ಕಳವಳ ವ್ಯಕ್ತಪಡಿಸಿದೆ.

click me!