ನಿಮ್ಮ ಆಸ್ಪತ್ರೆ ತ್ಯಾಜ್ಯ ನಿಮಗೆ ವಾಪಸ್, ಬ್ರಿಟನ್‌ಗೆ ಶ್ರೀಲಂಕಾದಿಂದ ಎಂಥಾ ಠಕ್ಕರ್!

By Suvarna NewsFirst Published Sep 28, 2020, 3:57 PM IST
Highlights

ಬ್ರಿಟನ್ ಗೆ ಸರಿಯಾದ ಠಕ್ಕರ್ ನೀಡಿದ ಶ್ರೀಲಂಕಾ/ ನಮ್ಮನ್ನೇನು ತ್ಯಾಜ್ಯ ಡಂಪಿಂಗ್ ಯಾರ್ಡ್ ಎಂದು ಭಾವಿಸಿದ್ದೀರಾ?/ ಬ್ರಿಟನ್ ವಸಾಹತುಶಾಹಿ ನೀತಿಗೆ ಶ್ರಿಲಂಕಾದ ಕಟುವಾದ ಉತ್ತರ

ಕೊಲಂಬೊ(ಸೆ.28)  ಬ್ರಿಟನ್ ಗೆ ಶ್ರೀಲಂಕಾ ಸರಿಯಾದ ಠಕ್ಕರ್ ನೀಡಿದೆ.   ಬ್ರಿಟನ್ ನಿಂದ ತ್ಯಾಜ್ಯ ಹೊತ್ತು ಬಂದಿದ್ದ ಕಂಟೇನರ್ ಗಳನ್ನು ಹಾಗೆ ವಾಪಸ್ ಕಳಿಸಲಾಗಿದೆ.

ಅಂತಾರಾಷ್ಟ್ರೀಯ ಸಂಬಂಧಗಳ ನಿಯಮವನ್ನು ಬ್ರಿಟನ್ ಮುರಿದಿದೆ ಎಂದಿರುವ ಲಂಕಾ 21 ಕಂಟೇನರ್‌ಗಳ -260 ಟನ್‌ ಕಸವನ್ನು ವಾಪಸ್ ಕಳಿಸಿದೆ.  ಸೆಪ್ಟೆಂಬರ್ 2017 ಮತ್ತು ಮಾರ್ಚ್ 2018 ರ ನಡುವೆ ರಾಜಧಾನಿ ಕೊಲಂಬೊದ ಮುಖ್ಯ ಬಂದರಿಗೆ ಹಡಗಿನ ಮೂಲಕ ಈ ತ್ಯಾಜ್ಯ ಬಂದಿತ್ತು. ಶನಿವಾರ ಶ್ರೀಲಂಕಾದಿಂದ ಇದು ವಾಪಸ್ ರವಾನೆಯಾಗಿದೆ.

ಬಳಸಿದ ವಸ್ತುಗಳು, ರಬ್ಬರ್, ಕಾರ್ಪೆಟ್ ಇದೆ ಎಂದು ಹೇಳಿದ್ದ ಬ್ರಿಟನ್ ಅದರ ಜತೆಗೆ ಆಸ್ಪತ್ರೆ ತ್ಯಾಜ್ಯ ಕಳುಹಿಸಿಕೊಟ್ಟಿತ್ತು. ಈ ಕಾರಣಕ್ಕೆ ಹಿಂದಕ್ಕೆ ಕಳಿಸಲಾಗಿದೆ ಎಂದು ಶ್ರೀಲಂಕಾದ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ಮಾಡಲು ತೆಂಗಿನ ಮರ ಏರಿದ ಶ್ರೀಲಂಕಾ ಸಚಿವ

ಕಂಟೇನರ್‌ಗಳಲ್ಲಿ ಚಿಂದಿ, ಬ್ಯಾಂಡೇಜ್ ಮತ್ತು ಶವಾಗಾರದ ತ್ಯಾಜ್ಯ, ದೇಹದ ಭಾಗಗಳು ಇದ್ದಿದ್ದು ಆತಂಕ ಹೆಚ್ಚಿಸಿದ್ದು ಅನಿವಾರ್ಯವಾಗಿ ಹಿಂದಕ್ಕೆ ಕಳಿಸಿದ್ದೇವೆ ಎಂದು ಶ್ರೀಲಂಕಾದ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಅಲ್ಲದೇ  ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ 242  ಕಂಟೇನರ್ ಗಳನ್ನು ಕಳಿಸಿದೆ. ಆಸ್ಪತ್ರೆ ತ್ಯಾಜ್ಯ ಮತ್ತು ರಬ್ಬರ್ ಇದರಲ್ಲಿ ತುಂಬಿಕೊಂಡಿರುವ ಸಾಧ್ಯತೆ ಇದ್ದು ಎಲ್ಲವನ್ನು ವಾಪಸ್ ಕಳಿಸಲಾಗುತ್ತದೆ.

ಚೀನಾದ ವುಹಾನ್ ಪ್ರಾಂತ್ಯದಿಂದಲೇ ಕೊರೋನಾ ಎಂಬ ಮಹಾಮಾರಿ ಜಗತ್ತನ್ನು ವ್ಯಾಪಿಸಿತ್ತು. ಸಮುದ್ರ ಆಹಾರದಲ್ಲಿಯೂ ಕೊರೋನಾ ವೈರಸ್  ಪತ್ತೆಯಾದ ಬಗ್ಗೆ ಪುರಾವೆಗಳು ಸಿಕ್ಕಿದ್ದವು. ಇದೆಲ್ಲದರ ನಡುವೆ ಶ್ರೀಲಂಕಾ ತೆಗೆದುಕೊಂಡ ಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ .

 

 

click me!