ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಿಂಗಲ್‌ ಡೋಸ್‌ ಲಸಿಕೆಗೆ ಆರಂಭಿಕ ಯಶಸ್ಸು!

By Suvarna NewsFirst Published Sep 28, 2020, 2:36 PM IST
Highlights

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಿಂಗಲ್‌ ಡೋಸ್‌ ಲಸಿಕೆಗೆ ಆರಂಭಿಕ ಯಶಸ್ಸು| ಲಸಿಕೆ ಪಡೆದವರಲ್ಲಿ ಪ್ರತಿಕಾಯ ಶಕ್ತಿ ಹೆಚ್ಚಳ ಸಾಬೀತು

 

ವಾಷಿಂಗ್ಟನ್(ಸೆ.28)‌: ಕೊರೋನಾ ವೈರಸ್‌ ವಿರುದ್ಧ ಜಾನ್ಸ್‌ನ್‌ ಆ್ಯಂಡ್‌ ಜಾನ್ಸನ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆ ಬಲಶಾಲಿ ಪ್ರತಿಕಾಯ ಶಕ್ತಿ ಉಂಟು ಮಾಡಿರುವುದು ಕಂಡುಬಂದಿದೆ. ‘ಎಡಿ26 ಕೋವ್‌2ಎಸ್‌’ ಹೆಸರಿನ ಈ ಲಸಿಕೆಯ ಡೋಸ್‌ ಪಡೆದವರಲ್ಲಿ ಆರಂಭಿಕ ಮತ್ತು ಮಧ್ಯಮ ಹಂತದ ಪರೀಕ್ಷೆಯಲ್ಲಿ ಪರಿಣಾಮಾಕಾರಿ ಆಗಿರುವುದು ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ವಿಶ್ವದ ಇತರೆ ಎಲ್ಲಾ ಕಂಪನಿಗಳ ಲಸಿಕೆ 2 ಡೋಸ್‌ ಪಡೆಯಬೇಕಿದ್ದರೆ, ಇದು ಸಿಂಗಲ್‌ ಡೋಸ್‌ನ ಲಸಿಕೆಯಾಗಿದೆ.

ಆರಂಭದಲ್ಲಿ ಮಂಗಗಳಲ್ಲಿ ಈ ಲಸಿಕೆಯನ್ನು ನೀಡಿದ ಸಂದರ್ಭದಲ್ಲಿ ಪ್ರತಿಕಾಯ ಶಕ್ತಿ ಉತ್ಪತ್ತಿ ಆದ ಹಿನ್ನೆಲೆಯಲ್ಲಿ ಕಳೆದ ಜುಲೈನಲ್ಲಿ 1000 ಜನರ ಮೇಲೆ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಯ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲು ಅಮೆರಿಕ ಸರ್ಕಾರ ಅನುಮತಿ ನೀಡಿತ್ತು.

ಈ ಫಲಿತಾಂಶದ ಆಧಾರದ ಮೇಲೆ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ 60 ಸಾವಿರ ಜನರ ಮೇಲೆ ಲಸಿಕೆಯನ್ನು ಕೊನೆಯ ಹಂತದ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ. ಈ ವರ್ಷದ ಅಂತ್ಯ ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿ 3ನೇ ಹಂತದ ಲಸಿಕೆ ಪ್ರಯೋಗದ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ.

click me!