
ನವದೆಹಲಿ(ಸೆ.19): ಕೊರೋನಾ ವೈರಸ್ ತಡೆಗೆ ರಷ್ಯಾ ಬಿಡುಗಡೆ ಮಾಡಿರುವ ಲಸಿಕೆ ಸ್ಪುಟ್ನಿಕ್-5 ಬಗ್ಗೆ ಭಾರೀ ಅನುಮಾನಗಳ ಇರುವ ಹೊತ್ತಿನಲ್ಲೇ, ಲಸಿಕೆಯನ್ನು ಪಡೆದ 7ರಲ್ಲಿ ಒಬ್ಬರಿಗೆ ಜ್ವರ, ತಲೆನೋವು, ಮೈಕೈನೋವಿನಂತಹ ಅಡ್ಡ ಪರಿಣಾಮಗಳು ಕಂಡು ಬಂದಿವೆ.
ರಷ್ಯಾದಲ್ಲಿ 300 ಜನರ ಮೇಲೆ ಸ್ಪಟ್ನಿಕ್-5 ಲಸಿಕೆಯನ್ನು ಪ್ರಯೋಗಿಸಲಾಗಿದೆ. ಅವರಲ್ಲಿ ಶೇ.14ರಷ್ಟುಮಂದಿಗೆ 24 ಗಂಟೆಗಳ ಕಾಲ ಸಣ್ಣ ಪ್ರಮಾಣದ ಬಳಲಿಕೆ, ಮೈಕೈನೋವು, ದೇಹದ ಉಷ್ಣಾಂಶ ಏರಿಕೆಯಂತಹ ಅಡ್ಡ ಪರಿಣಾಮಗಳು ಕಂಡುಬಂದಿವೆ. ಇದನ್ನು ಮೊದಲೇ ನಿರೀಕ್ಷಿಸಲಾಗಿತ್ತು. ಲಸಿಕೆ ಪಡೆಯುವ ಮುನ್ನ ಈ ಬಗ್ಗೆ ಮಾಹಿತಿಯನ್ನೂ ನೀಡಲಾಗಿತ್ತು ಎಂದು ಎಂದು ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್ ಮುರಾಷ್ಖೋ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಷ್ಯಾ ಮೂರನೇ ಹಂತದ ಪ್ರಯೋಗವನ್ನು ದೊಡ್ಡ ಸಂಖ್ಯೆಯಲ್ಲಿ ಕೈಗೊಂಡಿಲ್ಲ. ಅದಕ್ಕೂ ಮೊದಲೇ ವಿಶ್ವದ ಮೊದಲ ಲಸಿಕೆ ಹೆಸರಲ್ಲಿ ಜಾಗತಿಕ ಮಟ್ಟದಲ್ಲಿ ಅದನ್ನು ಬಿಡುಗಡೆ ಮಾಡಲು ಹೊರಟಿದೆ. ಈ ವೇಳೆಯೇ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಡ್ಡಪರಿಣಾಮಗಳು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ರಷ್ಯಾ ಜೊತೆ ಮಾತುಕತೆ: ಕೇಂದ್ರ
ನವದೆಹಲಿ: ರಷ್ಯಾ ಅಭಿವೃದ್ಧಪಡಿಸಿರುವ ಲಸಿಕೆಯನ್ನು ಭಾರತದಲ್ಲಿ ಪ್ರಯೋಗಿಸುವ ಮತ್ತು ಉತ್ಪಾದಿಸುವ ಕುರಿತು, ಆ ದೇಶದ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ಮಾಹಿತಿ ನೀಡಿದೆ. ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣ ಪ್ರಾಧಿಕಾರಕ್ಕೆ ರಷ್ಯಾ ತನ್ನ ಕೊರೋನಾ ಲಸಿಕೆಯ ಮಾಹಿತಿಯನ್ನು ಒದಗಿಸಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ