ಭಾರತದ ಲಸಿಕೆಗೆ ಆದ್ಯತೆ, ಚೀನಾಗೆ ಶಾಕ್ ಕೊಟ್ಟ ಲಂಕಾ!

Published : Feb 24, 2021, 01:22 PM ISTUpdated : Feb 24, 2021, 04:26 PM IST
ಭಾರತದ ಲಸಿಕೆಗೆ ಆದ್ಯತೆ, ಚೀನಾಗೆ ಶಾಕ್ ಕೊಟ್ಟ ಲಂಕಾ!

ಸಾರಾಂಶ

ಕೊರೋನಾ ವೈರಸ್‌ ವಿರು​ದ್ಧ ತನ್ನ ಪ್ರಜೆ​ಗಳ ರಕ್ಷ​ಣೆಗಾ​ಗಿ ಶ್ರೀಲಂಕಾ ಸರ್ಕಾ​ರವು ಭಾರ​ತದ ಕೋವಿ​ಶೀಲ್ಡ್‌ ಲಸಿಕೆಯ ಮೊರೆ| ಚೀನಾದ ಲಸಿ​ಕೆ ಬಿಟ್ಟು ಭಾರ​ತ​ದ ಕೋವಿ​ಶೀಲ್ಡ್‌ ಖರೀ​ದಿ​ಸಿದ ಶ್ರೀಲಂಕಾ

ಕೊಲಂಬೋ(ಫೆ.24): ಕೊರೋನಾ ವೈರಸ್‌ ವಿರು​ದ್ಧ ತನ್ನ ಪ್ರಜೆ​ಗಳ ರಕ್ಷ​ಣೆಗಾ​ಗಿ ಶ್ರೀಲಂಕಾ ಸರ್ಕಾ​ರವು ಭಾರ​ತದ ಕೋವಿ​ಶೀಲ್ಡ್‌ ಲಸಿಕೆಯ ಮೊರೆ ಹೋಗಿದೆ. ತನ್ಮೂ​ಲಕ ಲಸಿ​ಕೆಯ 3ನೇ ಹಂತದ ಪರೀ​ಕ್ಷೆ ವರದಿ ಸಲ್ಲಿ​ಸದ ಚೀನಾದ ಕೊರೋನಾ ಲಸಿ​ಕೆ​ಯನ್ನು ಖರೀ​ದಿ​ಸ​ದಿ​ರುವ ಸುಳಿ​ವನ್ನು ಶ್ರೀಲಂಕಾ ವ್ಯಕ್ತ​ಪ​ಡಿ​ಸಿದೆ.

ಈ ಬಗ್ಗೆ ಮಂಗ​ಳ​ವಾ​ರ ಪ್ರತಿ​ಕ್ರಿ​ಯಿ​ಸಿದ ಶ್ರೀಲಂಕಾದ ಸಚಿವ, ತಮ್ಮ ಸರ್ಕಾರ ಒಟ್ಟಾರೆ 1.35 ಕೋಟಿ ಡೋಸ್‌​ನಷ್ಟುಕೋವಿ​ಶೀಲ್ಡ್‌ ಲಸಿ​ಕೆ​ಗ​ಳನ್ನು ಖರೀ​ದಿ​ಸಿದ್ದು, ಈ ಪೈಕಿ 1 ಕೋಟಿ ಲಸಿ​ಕೆ​ಯನ್ನು ಪುಣೆಯ ಸೀರಂ ಇನ್‌​ಸ್ಟಿ​ಟ್ಯೂ​ಟ್‌​ನಿಂದ ಮತ್ತು 35 ಲಕ್ಷ ಲಸಿ​ಕೆ​ಗ​ಳನ್ನು ಬ್ರಿಟ​ನ್‌​ನಿಂದ ತರಿ​ಸಿ​ಕೊಂಡಿದೆ.

ಫೆ.1ರಂದು ಶ್ರೀಲಂಕಾಕ್ಕೆ ಚೀನಾ 3 ಲಕ್ಷ ಡೋಸ್‌​ನಷ್ಟುಲಸಿಕೆ ಪೂರೈ​ಸಲು ಮುಂದಾ​ಗಿತ್ತು. ಆದರೆ ಅಷ್ಟೊ​ತ್ತಿ​ಗಾ​ಗ​ಲೇ ಭಾರತ ಸರ್ಕಾರ 5 ಲಕ್ಷ ಡೋಸ್‌​ನಷ್ಟುಲಸಿ​ಕೆ​ಯನ್ನು ಉಡು​ಗೊ​ರೆ​ಯಾಗಿ ನೀಡಿ​ತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಾಲಕ್ಕೆ ಭಿಕ್ಷೆ ಬೇಡುವ ಪಾಕ್‌ 1 ವರ್ಷ IMFಬಾಸ್‌! ಪಟ್ಟಕ್ಕೇರಿದ್ರೂ ಪಾಕಿಸ್ತಾನಕ್ಕಿಲ್ಲ ಪವರ್
ಇನ್ಮುಂದೆ ರಾತ್ರಿ ಬಾಡಿಗೆಗೆ ಸಿಗಲಿದೆ ಸೂರ್ಯನ ಬೆಳಕು; ಸ್ಕೈರೂಟ್ ಜೊತೆ ಅಮೆರಿಕಾ ಒಪ್ಪಂದ