ರಾಜಕೀಯ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾಗೆ ಮತ್ತೊಂದು ಶಾಕ್, ವಿಮಾನ ಪ್ರಯಾಣ ರದ್ದು!

Published : Jul 11, 2022, 04:31 PM IST
ರಾಜಕೀಯ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾಗೆ ಮತ್ತೊಂದು ಶಾಕ್,  ವಿಮಾನ ಪ್ರಯಾಣ ರದ್ದು!

ಸಾರಾಂಶ

ಶ್ರೀಲಂಕಾದಲ್ಲಿ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದ ಪ್ರತಿಭಟನೆ ಪ್ರಧಾನಿ, ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ದಾಂಧಲೆ

ಕೊಲೊಂಬೊ(ಜು.11):  ಶ್ರೀಲಂಕಾದಲ್ಲಿ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನಿಂದ ಜನರು ರೋಸಿ ಹೋಗಿದ್ದಾರೆ. ಪ್ರತಿಭಟನೆ ಮೂಲಕ ಆರಂಭವಾದ ಆಕ್ರೋಶ ಇದೀಗ ದಂಗೆ ಸ್ವರೂಪ ಪಡೆದಿದೆ.  ಪ್ರಧಾನಿ , ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ತೀವ್ರ ಹಿಂಜರಿತ ಅನುಭವಿಸುತ್ತಿರುವ ಶ್ರೀಲಂಕಾಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.  ಶ್ರೀಲಂಕಾದ ಪರಿಸ್ಥಿತಿ ಕೆಟ್ಟದಾಗಿರುವ ಕಾರಣ ಫ್ಲೈ ದುಬೈ ವಿಮಾನಯಾನ ಸಂಸ್ಥೆ ಲಂಕಾ ಪ್ರಯಾಣದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ.

ದುಬೈನ ಖ್ಯಾತ ವಿಮಾನಯಾನ ಸಂಸ್ಥೆ ಫ್ಲೈ ದುಬೈ ಕೊಲೊಂಬೊ ವಿಮಾನ ಪ್ರಯಾಣ ರದ್ದು ಮಾಡಿದೆ. ಈಗಾಗಲೇ ಬುಕ್ ಮಾಡಿದ ಪ್ರಯಾಣಿಕರಿಗೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸುವುದಾಗಿ ಹೇಳಿದೆ. ದುಬೈ ಸೇರಿದಂತೆ ಅರಬ್ ರಾಷ್ಟ್ರದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಶ್ರೀಲಂಕಾಗೆ ತೆರಳುತ್ತಾರೆ. ಪ್ರತಿ ಭಾರಿ ಫ್ಲೈ ದುಬೈ ವಿಮಾನ ಟಿಕೆಟ್ ಸಿಗದೆ ಕಾಯುವಿಕೆ ಸಂಖ್ಯೆ ಕೂಡ ಹೆಚ್ಚಾಗಿದೆ. ಅತೀ ಕಡಿಮೆ ಮೊತ್ತದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಸಾಧ್ಯವಿದೆ. ಇದೀಗ ಮುಂದಿನ ಆದೇಶದವರೆಗೆ ಫ್ಲೈ ದುಬೈ ವಿಮಾನ ತನ್ನ ಶ್ರೀಲಂಕಾ ಪ್ರಯಾಣದ ಎಲ್ಲಾ ವಿಮಾನ ರದ್ದಗೊಳಿಸಿದೆ.

ದ್ವೀಪದೇಶ ಶ್ರೀಲಂಕಾ ಅಯೋಮಯ: ನೆರೆಮನೆ ಅರಾಜಕತೆ!

ಶ್ರೀಲಂಕಾದಲ್ಲಿ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ತೀವ್ರವಾಗಿದೆ. ಜನರ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಪ್ರಮುಖವಾಗಿ ಶ್ರೀಲಂಕಾ ಇಂಧನ ಕೊರತೆ ಅನುಭವಿಸುತ್ತಿದೆ. ಹೀಗಾಗಿ ಸದ್ಯ ಶ್ರೀಲಂಕಾ ವಿಮಾನ ಪ್ರಯಾಣ ಅತ್ಯಂತ ಸವಾಲಿನಿಂದ ಕೂಡಿದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಫ್ಲೈ ದುಬೈ ಸಂಸ್ಥೆ ಹೇಳಿದೆ. 

ಶ್ರೀಲಂಕಾ ಶ್ರೀಘ್ರದಲ್ಲೇ ಎಲ್ಲಾ ಸಮಸ್ಯೆಗಳಿಂದ ಹೊರಬರುವ ಸಾಧ್ಯತೆ ಇದೆ.  ಪರಿಸ್ಥಿತಿ ಶಾಂತಗೊಂಡ ಬಳಿಕ ಫ್ಲೈ ದುಬೈ ಸಂಸ್ಥೆ ಆದೇಶ ಪರೀಶಿಲಿಸಲಿದೆ ಎಂದು ಫ್ಲೈ ದುಬೈ ಹೇಳಿದೆ. ವಿಶ್ವದ ಅತೀ ದೊಡ್ಡ ವಿಮಾಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಫ್ಲೈ ದುಬೈ ಪ್ರತಿ ತಿಂಗಳು ಸರಾಸರಿ 8,500ಕ್ಕೂ ಹಾರಾಟ ನಡೆಸುತ್ತಿದೆ. 102 ಸ್ಥಳಗಳಿಗೆ ಫ್ಲೈ ದುಬೈ ಸಂಸ್ಥೆ ವಿಮಾನಸೇವೆ ಲಭ್ಯವಿದೆ.

ಶ್ರೀಲಂಕಾ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ದೇಶ. ಕೊರೋನಾ ದಾಳಿಯಿಂದ ಲಂಕಾ ಪ್ರವಾಸೋದ್ಯಮ ನೆಲಕಚ್ಚಿತು. ವಿದೇಶಿ ಸಾಲದ ಮೊತ್ತ ಹೆಚ್ಚಾಯಿತು. ಇದೀಗ ಕೊರೋನಾದಿಂದ ಚೇತರಿಸಿಕೊಂಡರೂ ಶ್ರೀಲಂಕಾ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದೆ.  ಇದೀಗ ಪ್ರವಾಸೋದ್ಯ ಚೇತರಿಕೆ ಹಾದಿಯಲ್ಲಿರುವಾಗಲೇ ಪ್ರತಿಭಟನೆ ಸೇರಿದಂತೆ ಹಲವು ಕಾರಣಗಳಿಂದ ಇದೀಗ ವಿಮಾನ ಸಂಸ್ಥೆಗೆ ಶ್ರೀಲಂಕಾ ಪ್ರಯಾಣವನ್ನೇ ರದ್ದುಗೊಳಿಸುತ್ತಿದೆ. ಇದು ಶ್ರೀಲಂಕಾ ಅರ್ಥಿಕತೆ ಮೇಲೆ ಮತ್ತಷ್ಟು ಹೊಡೆತ ನೀಡಲಿದೆ. 

ಶ್ರೀಲಂಕಾ ಸ್ಥಿತಿ ಬಗ್ಗೆ IMF ಕಣ್ಣು, ರಾಜಕೀಯ ಸಂಕಷ್ಟ ನಿವಾರಣೆಯಾಗುತ್ತಿದ್ದಂತೆಯೇ ಬೇಲ್‌ಔಟ್‌ ಡೀಲ್‌ ಚರ್ಚೆ!

ಜನರ ದಂಗೆಯಿಂದ ತತ್ತರಿಸಿರುವ ಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಬುಧವಾರ (ಜು.13ರಂದು) ರಾಜೀನಾಮೆ ನೀಡುವುದಾಗಿ ನನಗೆ ತಿಳಿಸಿದ್ದಾರೆ ಎಂದು ಲಂಕಾ ಸಂಸತ್ತಿನ ಸ್ಪೀಕರ್‌ ಮಹಿಂದ ಯಪಾ ಅಭಯವರ್ಧನ ಹೇಳಿದ್ದಾರೆ. ರಾಜಪಕ್ಸೆ ಅವರಿಗೆ ರಾಜೀನಾಮೆ ನೀಡುವಂತೆ ತಾವು ಕೂಡ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ