
ಬೋಕಾ ಚಿಕಾ (ಅಮೆರಿಕ) (ಅ.14): ಅಪರೂಪದ ಎಂಜಿನಿಯರಿಂಗ್ ಸಾಧನೆಯೊಂದರಲ್ಲಿ ಭೂಮಿಗೆ ಮರಳಿದ ‘ಸ್ಟಾರ್‌ಶಿಪ್ ರಾಕೆಟ್ ಬೂಸ್ಟರ್’ ಅನ್ನು ಎಲಾನ್ ಮಸ್ಕ್ ಒಡೆತನದ ‘ಸ್ಪೇಸ್‌ಎಕ್ಸ್’ ಕಂಪನಿ ಯಶಸ್ವಿಯಾಗಿ ಭಾನುವಾರ ‘ಕ್ಯಾಚ್’ ಮಾಡಿದೆ. ಗಲ್ಫ್ ಆಫ್ ಮೆಕ್ಸಿಕೋ ಬಳಿ ಭಾನುವಾರ ಪ್ರಯೋಗಾರ್ಥವಾಗಿ ಈ ಪರೀಕ್ಷೆ ನಡೆದಿದ್ದು, ಅದ್ಭುತ ಸಾಧನೆ ಎಂದು ಬಣ್ಣಿಸಲಾಗಿದೆ.
ಸ್ಪೇಸ್‌ಎಕ್ಸ್ ತನ್ನದೇ ಲಾಂಚ್ ಪ್ಯಾಡ್‌ನಲ್ಲಿ ‘ಯಾಂತ್ರಿಕ ತೋಳಿನ’ ಟವರ್ ನಿರ್ಮಿಸಿತ್ತು. ತಾನೇ ಹಾರಿಸಿದ ರಾಕೆಟ್ ಬೂಸ್ಟರ್, ಉಡಾವಣೆಗೊಂಡ 7 ನಿಮಿಷಗಳ ನಂತರ ಭೂಮಿಗೆ ಮರಳಿದ್ದು, ಅದನ್ನು ಈ ಹಿಂದಿನಂತೆ ಜಲ ಪ್ರದೇಶದಲ್ಲಿ ಅಥವಾ ಸಮುದ್ರದಲ್ಲಿ ಬೀಳಿಸದೇ ಲಾಂಚ್ ಪ್ಯಾಡ್‌ನ ಟವರ್‌ನಲ್ಲಿದ್ದ ಯಾಂತ್ರಿಕ ತೋಳುಗಳ ಮೂಲಕ ‘ಕ್ಯಾಚ್’ ಮಾಡಿದೆ.
ತಿರುಪತಿ ಮಾದರಿಯಲ್ಲಿ ಸವದತ್ತಿ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ
‘ಇದೊಂದು ಅದ್ಭುತ ಸಾಧನೆ. ಕಂಪನಿಯು ರಾಕೆಟ್ ಬೂಸ್ಟರ್ ಅನ್ನು ಸಾಗರಗಳಲ್ಲಿ ಅಥವಾ ನೀರಿನ ಪ್ರದೇಶದಲ್ಲಿ ಇಳಿಸುವ ಬದಲು ಲಾಂಚ್ ಪ್ಯಾಡ್‌ನಲ್ಲಿಯೇ ಮರಳಿ ಪಡೆದಿದ್ದು ಇದೇ ಮೊದಲು. ಇದು ಭವಿಷ್ಯದ ಉಡ್ಡಯನಕ್ಕೆ ಮಾದರಿ’ ಎಂದು ಎಲಾನ್ ಮಸ್ಕ್ ಹರ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ