costliest sun: ಸೆಲೆಬ್ರಿಟಿ ಸೂರ್ಯ... ಈ ಒಂದು ಫೋಟೋ ರೇಟ್‌ ಕೇಳಿದ್ರೆ ಗಾಬರಿಯಾಗ್ತೀರಾ...!

By Suvarna NewsFirst Published Dec 8, 2021, 7:39 AM IST
Highlights

ಸೂರ್ಯನ ಈ ಫೋಟೋ ಬೆಲೆ 3766 ರೂ.!
ಅತ್ಯಾಕರ್ಷಕ ಚಿತ್ರ ಸೆರೆ ಹಿಡಿದ ಆ್ಯಂಡ್ರ್ಯೂ ಮೆಕಾರ್ಥಿ
ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಎಬ್ಬಿಸಿದ ಸೂರ್ಯ

ವಾಷಿಂಗ್ಟನ್‌(ಡಿ.8): ಖ್ಯಾತ ಫೋಟೋಗ್ರಾಫರ್‌ ಆಂಡ್ರ್ಯೂ ಮೆಕಾರ್ಥಿ(Andrew McCarthy) ತೆಗೆದಿರುವ ಸೂರ್ಯನ ಫೋಟೋವೊಂದು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾನಲ್ಲಿ ಹವಾ ಎಬ್ಬಿಸಿದೆ. ಅತ್ಯಾಧುನಿಕ ಟೆಲಿಸ್ಕೋಪ್‌ ಬಳಸಿ ಸೂರ್ಯನ ಮೇಲ್ಮೈಯನ್ನು ಅತ್ಯಾಕರ್ಷಕವಾಗಿ ಸೆರೆ ಹಿಡಿಯಲಾಗಿದೆ. ಈ ಫೋಟೋ ಬೆಲೆ ಎಷ್ಟುಗೊತ್ತೆ? ಬರೋಬ್ಬರಿ 3766 ರೂಪಾಯಿ. ಹೌದು ನವೆಂಬರ್‌ 29ರ ಮಧ್ಯಾಹ್ನ 2 ಗಂಟೆಗೆ ಸೂರ್ಯನು ಹೇಗೆ ಗೋಚರಿಸಿದ್ದ ಎಂಬುದು ಈ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂದು ಆ್ಯಂಡ್ರ್ಯೂ ಹೇಳಿದ್ದಾರೆ. ಈ ಫೋಟೋ 300 ಮೆಗಾಫಿಕ್ಸೆಲ್‌ಗಳಿಂದ ಕೂಡಿದ್ದು, ಇದಕ್ಕೆ ಫೈರ್‌ ಅಂಡ್‌ ಫ್ಯೂಷನ್‌(Fire and Fusion) ಎಂದು ಟೈಟಲ್‌ ನೀಡಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಫೋಟೋ ಬೇಕೆಂದರೆ ನೀವು 3,766 ರೂಪಾಯಿ ಪಾವತಿಸಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಆಂಡ್ರ್ಯೂ ಮೆಕಾರ್ಥಿ ಅವರು ಇನ್ಸ್ಟಾಗ್ರಾಮ್‌(Instagram)ನಲ್ಲಿ @cosmic-background ಹೆಸರಿನ ಖಾತೆಯನ್ನು ಹೊಂದಿದ್ದಾರೆ. ತಮ್ಮ ಛಾಯಾಗ್ರಹಣದ ಬಗ್ಗೆ ಮಾತನಾಡಿದ ಆಂಡ್ರ್ಯೂ, 'ಸೂರ್ಯನ ಇಂತಹ ಚಿತ್ರಗಳನ್ನು (Sun Images) ಸೆರೆಹಿಡಿಯಲು ನಾನು ಯಾವಾಗಲೂ ತುಂಬಾ ಉತ್ಸುಕನಾಗಿದ್ದೇನೆ, ಇದು ನಿಜವಾಗಿಯೂ ಆಸಕ್ತಿದಾಯಕವಾಗಿದೆ ಏಕೆಂದರೆ, ಇದು ಯಾವಾಗಲೂ ವಿಭಿನ್ನವಾಗಿರುತ್ತದೆ'  ಸೂರ್ಯನ ಮೇಲ್ಮೈನ ಅತ್ಯಂತ ಸ್ಪಷ್ಟವಾದ ಚಿತ್ರಗಳು ಇದಾಗಿದೆ. ಅಲ್ಲದೇ ಇಲ್ಲಿ ನಾನು ಪೋಸ್ಟ್‌ ಮಾಡಿರುವ ಚಿತ್ರಗಳು ನಾನು ನಂಬಲು ಸಾಧ್ಯವಿಲ್ಲದ ಸೂರ್ಯನ ನೋಟವನ್ನು ನೋಡುವ ಅವಕಾಶ ಮಾಡಿಕೊಟ್ಟಿದೆ. ಈ ಚಿತ್ರಗಳನ್ನು ವಿಶಿಷ್ಟವಾದ ಛಾಯಾಗ್ರಹಣ ವಿಧಾನಗಳಿಂದ ಸೆರೆಹಿಡಿಯಲಾಗಿದೆ. ಅಂತಿಮ ಚಿತ್ರವು 300 ಮೆಗಾಪಿಕ್ಸೆಲ್‌ಗಳ ಗಾತ್ರವನ್ನು ಹೊಂದಿದೆ. ಇದು ಸಾಮಾನ್ಯ ಐದು ಮೆಗಾಪಿಕ್ಸೆಲ್‌ಗಳ ಕ್ಯಾಮೆರಾ ಫೋನ್‌ಗಳ ಚಿತ್ರಕ್ಕಿಂತ ಸ್ಪಷ್ಟವಾಗಿದ್ದು, ಸುಮಾರು 60 ಪಟ್ಟು ಅಧಿಕ ಸೈಜ್‌ ಅನ್ನು ಹೊಂದಿರುತ್ತದೆ.  ವಾಸ್ತವವಾಗಿ ಸೂರ್ಯನ ಸ್ಪಷ್ಟವಾದ ಚಿತ್ರ ಪಡೆಯುವ ನಿಟ್ಟಿನಲ್ಲಿ 1,50,000ಕ್ಕೂ ಹೆಚ್ಚು ಫೋಟೋಗಳನ್ನು ತಾನು ತೆಗೆದಿರುವುದಾಗಿಯೂ ಆಂಡ್ರ್ಯೂ ಮೆಕಾರ್ಥಿ ಹೇಳಿದ್ದಾರೆ. 

Solar eclipse Effect on Zodiac Signs: ವರ್ಷದ ಕಡೇ ಗ್ರಹಣ ಯಾವ ರಾಶಿಗೆ ಕೊಡುತ್ತೆ ತೊಂದರೆ?

ಅರಿಝೋನಾ(Arizona)ಮೂಲದ ಮೆಕಾರ್ಥಿ, "ನಾನು ಸೂರ್ಯನ ಛಾಯಾಗ್ರಹಣ ಮಾಡಲು ನಿಜವಾಗಿಯೂ ಉತ್ಸುಕನಾಗಿದ್ದೇನೆ, ಏಕೆಂದರೆ ಸೂರ್ಯ ಎಂದಿಗೂ ವಿಭಿನ್ನ. ಆಕಾಶವು ಎಷ್ಟು ಸ್ಪಷ್ಟವಾಗಿದೆ ಎಂಬುವುದಕ್ಕೆ ಚಂದ್ರನು ಹೆಚ್ಚು ಮಾನದಂಡವಾಗಿದ್ದರೂ ಸೂರ್ಯನು ಎಂದಿಗೂ ನೀರಸವಾಗಲಾರ. ಆ ದಿನ ಒಳ್ಳೆಯ ದಿನ ಆಗಿತ್ತು. ಇದು ಬಹಳ ವಿಶೇಷವಾದದ್ದು," ಎಂದು ಹೇಳಿದ್ದಾರೆ. ಮೆಕಾರ್ಥಿ ಇನ್ಸ್ಟಾಗ್ರಾಮ್‌ನಲ್ಲಿ ಮುಖ್ಯವಾಗಿ ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣ ಸಂದರ್ಭದಲ್ಲಿ ತೆಗೆದಂತಹ ಹಲವಾರು ಫೋಟೋಗಳಿವೆ. ಬೇರೆ ಬೇರೆ ಗ್ರಹಗಳ ಫೋಟೋ ತೆಗೆದಿರುವ ಮೆಕಾರ್ಥಿ ಅವುಗಳನ್ನೂ ಸಹ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಾನು ಬೇರೆ ಬೇರೆ ಗ್ರಹಗಳ ಸ್ಪಷ್ಟವಾದ ಚಿತ್ರವನ್ನು ತೆಗೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

 

ಫೋಟೋದಲ್ಲಿ ಕಾಣುವಂತೆ ಸೂರ್ಯನ ಮೇಲ್ಮೈಯಲ್ಲಿ ಗೋಚರಿಸುವ ಈ ಕಪ್ಪು ಕಲೆಗಳು ವಾಸ್ತವದಲ್ಲಿ ಕಪ್ಪು ಕಲೆಗಳಾಗಿಲ್ಲ. ಈ ಸ್ಥಳಗಳಿಂದ ಅತ್ಯಂತ ಶಕ್ತಿಯುತ ಕಿರಣಗಳು ಹೊರಹೊಮ್ಮುತ್ತವೆ, ಛಾಯಾಗ್ರಹಣದ ಪ್ರಕ್ರಿಯೆಯಿಂದಾಗಿ ಈ ಕಲೆಗಳು ಕಪ್ಪು ಬಣ್ಣದಲ್ಲಿ (Black Spots) ಕಾಣಿಸಿಕೊಳ್ಳುತ್ತವೆ. ಸೂರ್ಯನ ಇಂತಹ ಚಿತ್ರವನ್ನು ಕ್ಲಿಕ್ಕಿಸುವ ಪ್ರಕ್ರಿಯೆ ತುಂಬಾ ಕ್ಲಿಷ್ಟಕರವಾಗಿದೆ. ಇದರಲ್ಲಿ ಸೂರ್ಯನಿಂದ ಹೊರಸೂಸುವ ಬಲವಾದ ಕಿರಣಗಳಿಂದ ಕುರುಡುತನ ಸಂಭವಿಸುವ ಅಪಾಯವಿರುತ್ತದೆ. ಇದರಿಂದ ಛಾಯಾಗ್ರಾಹಕನನ್ನು ರಕ್ಷಿಸಲು ಎರಡು ಫಿಲ್ಟರ್‌ಗಳಿರುವ ವಿಶೇಷ ದೂರದರ್ಶಕವನ್ನು ಬಳಸಲಾಗುತ್ತದೆ. 

Record: ಸೂರ್ಯಂಗೆ ಟಾರ್ಚಾ? 1 ಗಂಟೆ ಸೂರ್ಯನ ದಿಟ್ಟಿಸಿ ದಾಖಲೆ ಬರೆದ 70ರ ವೃದ್ಧ

ಸೂರ್ಯನಿಂದ ಹೊರಹೊಮ್ಮುವ ಸೌರ ಕಾಸ್ಮಿಕ್ ಕಿರಣಗಳು  ಅಪಾರ ಶಕ್ತಿಯುತ ಕಣಗಳನ್ನು ಒಳಗೊಂಡಿದೆ. ಈ ಕಿರಣಗಳು ಸುಮಾರು 90 ಪ್ರತಿಶತ ಪ್ರೋಟಾನ್‌ಗಳು ಮತ್ತು 10 ಪ್ರತಿಶತ ಹೀಲಿಯಂನ ನ್ಯೂಕ್ಲಿಯಸ್‌ಗಳನ್ನು ಒಳಗೊಂಡಿರುತ್ತವೆ. ಸೌರ ಚಂಡಮಾರುತವು (Solar Flare) ಭೂಮಿಯ ವಾತಾವರಣದೊಂದಿಗೆ ಡಿಕ್ಕಿ ಹೊಡೆದಾಗ ಇದು ಸಂಭವಿಸುತ್ತದೆ.
 

click me!