Angela Merkel: ಜರ್ಮನಿಯಲ್ಲಿ 16 ವರ್ಷಗಳ ಬಳಿಕ ಏಂಜೆಲಾ ಮಾರ್ಕೆಲ್ ಆಡಳಿತ ಯುಗ ಅಂತ್ಯ, ಶೋಲ್ಜ್‌ ಅಧಿಕಾರಕ್ಕೆ

By Suvarna NewsFirst Published Dec 7, 2021, 6:56 PM IST
Highlights

16 ವರ್ಷಗಳ ಕಾಲ  ಜರ್ಮನಿಯ ಚಾನ್ಸಲರ್ ಆಗಿದ್ದ ಆಂಜೆಲಾ ಮರ್ಕೆಲ್‌ 
ಅಭಿವೃದ್ಧಿಯಲ್ಲಿ ಆದರ್ಶ ನಾಯಕಿ ಎನಿಸಿಕೊಂಡಿದ್ದ ಆಂಜೆಲಾ
ಏಕೀಕರಣದ ರೂವಾರಿ ಹೆಲ್ಮಟ್‌ ಕೋಲ್‌ ಅವರ ಗರಡಿಯಲ್ಲಿ ಪಳಗಿದ ನಾಯಕಿ
 

ಬರ್ಲಿನ್‌ (ಡಿ.7): ಜರ್ಮನಿಯಲ್ಲಿ (Germany) 16 ವರ್ಷಗಳ ಕಾಲ ಆಡಳಿತ ನಡೆಸಿದ ಚಾನ್ಸಲರ್ ಆಂಜೆಲಾ ಮರ್ಕೆಲ್‌ (Angela Merkel) ಅವರ ಯುಗ ಅಂತ್ಯಗೊಂಡಿದೆ. ಅಭಿವೃದ್ಧಿಯಲ್ಲಿ ಅವರು 'ಉಕ್ಕಿನ ಮಹಿಳೆ' ಎನಿಸಿಕೊಂಡಿದ್ದರು.  ಮೆರ್ಕೆಲ್ ಅವರ ಕೊಡುಗೆ ಜರ್ಮನಿಗೆ ಅಷ್ಟು ದೊಡ್ದದಾಗಿತ್ತು. ಡಿ.8 ರ ಬುಧವಾರ ಒಲಾಫ್‌ ಶೋಲ್ಜ್‌ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದು, ಪ್ರಭಾವಿ ರಾಷ್ಟ್ರವಾಗಿ ಜರ್ಮನಿಯನ್ನು ಸಜ್ಜುಗೊಳಿಸಿದ್ದಕ್ಕಾಗಿ ಅವರು ಜಾಗತಿಕ ಸಮುದಾಯದ ನೆನಪಲ್ಲಿ ಬಹುಕಾಲ ಉಳಿಯಲಿದ್ದಾರೆ. ದೇಶ ಎದುರಿಸಿದ್ದ ಹಲವು ಬಿಕ್ಕಟ್ಟುಗಳನ್ನು ಸಮರ್ಥವಾಗಿ ನಿಭಾಯಿಸಿದ ಮತ್ತು ಮಹಿಳೆಯರ ಆದರ್ಶ ನಾಯಕಿಯಾಗಿ ಹೊರಹೊಮ್ಮಿದ ಮೆರ್ಕೆಲ್‌ ಅವರು ವಾಸ್ತವದಲ್ಲಿ ವಿಜ್ಞಾನಿ. ಕಮ್ಯುನಿಸ್ಟ್ ಆಡಳಿತದ ಪೂರ್ವ ಜರ್ಮನಿಯಲ್ಲಿ ಬೆಳೆದ ಅವರು ಜರ್ಮನಿಯ ಏಕೀಕರಣದ ರೂವಾರಿ ಹೆಲ್ಮಟ್‌ ಕೋಲ್‌ ಅವರ ಗರಡಿಯಲ್ಲಿ ಪಳಗಿ  ಬೆಳಗಿದವರು.

ಆಂಜೆಲಾ ಮರ್ಕೆಲ್‌ ಸತತ ಐದನೇ ಬಾರಿಗೆ ಚಾನ್ಸಲರ್‌ ಆಗುವ ಕನಸನ್ನು ಅವರು ಕಂಡಿದ್ದರು. ಆದರೆ ಅವರ ಪಕ್ಷ ಬಹುಮತ ಸಾಧಿಸುವಲ್ಲಿ ವಿಫಲವಾಗಿದ್ದು, ಇದೀಗ ಓಲಾಫ್ ಸ್ಕೋಲ್ಜ್ (Olaf Scholz ) ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ಆಂಜೆಲಾ ಉತ್ತರಾಧಿಕಾರಿ ಆಯ್ಕೆಗೆ ಮತ್ತು ಸರಕಾರ ರಚನೆ ಬಗ್ಗೆ ಕಳೆದ ಒಂದು ವಾರದಿಂದ ಮಾತುಕತೆ ನಡೆಯುತ್ತಲೇ ಇತ್ತು.  ಈ ಮಧ್ಯೆ, ನೂತನ ಸರ್ಕಾರ ರಚನೆಗಾಗಿ ಸಮಾನ ಮನಸ್ಕ ಪಕ್ಷಗಳಾದ ಸೋಷಿಯಲ್ ಡೆಮಾಕ್ರಟ್ಸ್‌, ದಿ ಎನ್ವಿರಾನ್‌ಮೆಂಟಲ್‌ ಗ್ರೀನ್ಸ್‌ ಮತ್ತು ಫ್ರಿ ಡೆಮಾಕ್ರಟ್ಸ್‌ ಪಕ್ಷಗಳು 'ಪ್ರಗತಿಪರ ಸಮ್ಮಿಶ್ರ' ಒಕ್ಕೂಟ ರಚಿಸಿಕೊಂಡಿದ್ದು, 177 ಪುಟಗಳ ಸಮ್ಮಿಶ್ರ ಒಪ್ಪಂದಕ್ಕೆ ಸಹಿ ಹಾಕಿವೆ.

ಸಾಮಾಜಿಕ ಪ್ರಜಾಪ್ರಭುತ್ವವಾದಿಗಳ ಪೈಕಿ ವಿಲ್ಲಿ ಬ್ರಾಂಡ್, ಹೆಲ್ಮಟ್ ಸ್ಮಿತ್ ಮತ್ತು ಗೆರ್ಹಾರ್ಡ್ ಶ್ರೋಡರ್ ನಂತರ 63 ವರ್ಷದ ಸ್ಕೋಲ್ಜ್ ನಾಲ್ಕನೇ ಚಾನ್ಸಲರ್ ಆಗಿದ್ದಾರೆ. ಹ್ಯಾಂಬರ್ಗ್ ಮಾಜಿ ಮೇಯರ್ ಆಗಿರುವ ಸ್ಕೋಲ್ಜ್ ಮಾರ್ಕೆಲ್ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

Germany locks unvaccinated: ಲಸಿಕೆ ಹಾಕಿಸಿಕೊಳ್ಳದವರ ವಿರುದ್ಧ ಕಠಿಣ ಕ್ರಮ

ಚುನಾವಣೆಯಲ್ಲಿ ಸೋತಿದ್ದ ಮರ್ಕೆಲ್:
ವಿಶ್ವದ ಪ್ರಭಾವಿ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಜರ್ಮನಿ ಚಾನ್ಸೆಲರ್‌ ಆಂಜೆಲಾ ಮರ್ಕೆಲ್‌ ಸೆಪ್ಟೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ತೀವ್ರ ರೀತಿಯಲ್ಲಿ ಮುಖಭಂಗ ಅನುಭವಿಸಿದ್ದರು. ಅವರ ಕನ್ಸರ್ವೇಟಿವ್‌ ಪಕ್ಷ ಚುನಾವಣೆಯಲ್ಲಿ ಸೋತು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು. ಯಾವುದೇ ಪಕ್ಷಕ್ಕೂ ತನ್ನ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಲಭಿಸಿಲ್ಲ.  ಹೀಗಾಗಿ ಸೋಶಿಯಲ್ ಡೆಮಾಕ್ರೆಟ್‌, ಇತರೆ ಪಕ್ಷಗಳ ಜೊತೆಗೂಡಿ ಅಧಿಕಾರ ನಡೆಸಲು ಮುಂದಾಯಿತು. ಅತ್ತ ಆಂಜೆಲಾ ಮರ್ಕೆಲ್‌ರ ಕನ್ಸರ್ವೇಟಿವ್‌ ಪಕ್ಷ ಕೂಡ ಇತರೆ ಪಕ್ಷಗಳ ಜೊತೆಗೂಡಿ ಅಧಿಕಾರಕ್ಕೇರಬಹುದು ಎನ್ನಲಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. 

ಆಫ್ಘಾನಿಸ್ತಾನದ ಮಾಜಿ ಸಚಿವ ಈಗ ಜರ್ಮನಿಯಲ್ಲಿ ಪಿಝಾ ಡೆಲಿವರಿ ಬಾಯ್!

ಆಂಜೆಲಾ ಮರ್ಕೆಲ್‌ ಜುಲೈ 17, 1954 ರಂದು ಹ್ಯಾಂಬರ್ಗ್ನಲ್ಲಿ ಜನಿಸಿದರು. ಜರ್ಮನಿಯ 21, 2005 ರಿಂದ ಜರ್ಮನಿಯ ಚಾನ್ಸೆಲರ್ ಆಗಿದ್ದವರು. ಜರ್ಮನಿಯ ಇತಿಹಾಸದಲ್ಲಿ ಚಾನ್ಸೆಲರ್ ಸ್ಥಾನದಲ್ಲಿನ ಮೊದಲ ಮಹಿಳೆ.  ಏಪ್ರಿಲ್ 10, 2000 ರಿಂದ ಕ್ರಿಶ್ಚಿಯನ್-ಡೆಮಾಕ್ರಟಿಕ್ ಒಕ್ಕೂಟದ ಪಕ್ಷದ ನಾಯಕಿಯಾಗಿದ್ದಾರೆ.  ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  2005ರಲ್ಲಿ ಯುಎಸ್ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ. ಬುಷ್, ಪ್ಯಾರಿಸ್‌ನ ಎಲಿಸೀ ಅರಮನೆಯಲ್ಲಿ ಜಾಕ್ವೆಸ್ ಚಿರಾಕ್ ಮತ್ತು ಬ್ರಿಟಿಷ್ ಪ್ರಧಾನಮಂತ್ರಿ ಸ್ಥಾನದಲ್ಲಿ ಟೋನಿ ಬ್ಲೇರ್ ಅಧಿಕಾರದಲ್ಲಿದ್ದ ಕಾಲದಲ್ಲಿ ಯುರೋಪಿಯನ್ ವೇದಿಕೆಯಲ್ಲೇ ಮಾರ್ಕೆಲ್ ದೊಡ್ಡ ಶಕ್ತಿಯಾಗಿ ನಿಂತಿದ್ದರು.

Junior Hockey World Cup: ಭಾರತದ ಕೈ ತಪ್ಪಿದ ಕಂಚು..!

click me!