
ನವದೆಹಲಿ(ಜೂ,09): ಲಡಾಖ್ ಭಾಗದಲ್ಲಿ ಚೀನಾ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿರುವ ವಿಷಯವನ್ನು ಭಾರತವು ಗಂಭೀರವಾಗಿ ಪರಿಗಣಿಸಬೇಕು ಎಂದು ಅಮೆರಿಕದ ಹಿರಿಯ ಸೇನಾಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
‘ಹಿಮಾಲಯದ ಗಡಿಭಾಗದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಮಾಡುವ ಮೂಲಕ ಚೀನಾ, ಗಡಿಭಾಗದಲ್ಲಿ ಅಸ್ಥಿರತೆ ತರುವ ವಿನಾಶಕಾರಿ ಚಟುವಟಿಕೆ ನಡೆಸುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಭಾರತವು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅಮೆರಿಕ ಸೇನೆಯ ಜನರಲ್ ಚಾರ್ಲ್ಸ್ ಫ್ಲೈನ್ ಹೇಳಿದ್ದಾರೆ.
‘ಲಡಾಖ್ ವಲಯದಲ್ಲಿ ಚೀನಾ ಸೇನಾ ಶಸ್ತ್ರಾಗಾರವನ್ನೇ ನಿರ್ಮಿಸುವಂತೆ ಕಂಡುಬರುತ್ತಿದೆ.ಚೀನಾ ಆಕ್ರಮಣಕಾರಿ ಪ್ರವೃತ್ತಿ ನಿಗ್ರಹಕ್ಕಾಗಿ ದೇಶಗಳು ಒಗ್ಗೂಡಿ ಮಾತುಕತೆ ನಡೆಸಬೇಕು’ ಎಂದಿದ್ದಾರೆ.
‘ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಅಮೆರಿಕ ಎತ್ತರದ ಪ್ರದೇಶಗಳಲ್ಲಿ ಯುದ್ಧ ಮಾಡಲು ಸೇನಾ ತರಬೇತಿ ಯೋಜನೆ ಹಮ್ಮಿಕೊಳ್ಳಲಿದೆ. ಯೋಜನೆಯ ಭಾಗವಾಗಿ ಅಕ್ಟೋಬರ್ ತಿಂಗಳಲ್ಲಿ ಹಿಮಾಲಯದ 9,000-10,000 ಅಡಿ ಎತ್ತರದ ಪ್ರದೇಶದಲ್ಲಿ ಯೋಧರು ಯುದ್ಧಾಭ್ಯಾಸ ನಡೆಸಲಿದ್ದಾರೆ. ಈ ತರಬೇತಿ ವೈಮಾನಿಕ ದಾಳಿ, ಲಾಜಿಸ್ಟಿಕ್ ಹಾಗೂ ನೈಜ ಸಮಯದ ಆಧಾರದ ಮೇಲೆ ಮಾಹಿತಿ ರವಾನೆ ಮೊದಲಾದ ಅಂಶಗಳನ್ನೊಳಗೊಳ್ಳಲಿದೆ’ ಎಂದು ಫ್ಲೈನ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ