ಕಾರಿಗೆ ಗ್ಯಾಸ್ ಹಾಕುವ ಸಲುವಾಗಿ ಗ್ಯಾಸ್ ಸ್ಟೇಷನ್ ಬಳಿ ನಿಂತಿದ್ದ ಮಹಿಳೆಯ ಬಳ ಬಂದ ಅನಾಮಧೇಯ ಮಧ್ಯವಯಸ್ಕ ವ್ಯಕ್ತಿಯೊಬ್ಬ, 30 ಡಾಲರ್ ಅಂದರೆ ಅಂದಾಜು 2300 ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಖರೀದಿ ಮಾಡಿ ಖಂಡಿತಾ ನಿಮಗೆ ಜಾಕ್ ಪಾಟ್ ಹೊಡೆಯುತ್ತೆ ಎಂದಿದ್ದ. ಒಲ್ಲದ ಮನಸ್ಸಿನಿಂದಲೇ ಲಾಟರಿ ಟಿಕೆಟ್ ಖರೀದಿಸಿದ್ದ ಮಹಿಳೆ, ಟಿಕೆಟ್ ಅನ್ನು ತಿಕ್ಕಿದಾಗ ನಿಜಕ್ಕೂ ಕೋಟ್ಯಧಿಪತಿಯಾಗಿದ್ದಳು.
ವಾಷಿಂಗ್ಟನ್ (ಜೂನ್ 8): ಅದೃಷ್ಟ ಬದಲಾಗೋಕೆ ಪರಿಶ್ರಮದೊಂದಿಗೆ ಒಂದು ಅಚಾನಕ್ ಕ್ಷಣ ಕೂಡ ಸಾಕು. ಅಂಥದ್ದೊಂದು ಅಚಾನಕ್ ಕ್ಷಣದಲ್ಲಿ ಕೋಟ್ಯಧಿಪತಿಯಾದ ಸಾಕಷ್ಟು ಮಂದಿಯಿದ್ದಾರೆ. ಅಂಥದ್ದೊಂದು ಕ್ಷಣದಲ್ಲಿ ದಿವಾಳಿಯಾದ ಜನರೂ ಇದ್ದಾರೆ. ಆದರೆ, ಅಮೆರಿಕದ ಮಿಚಿಗನ್ (Michigan ) ನಗರದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬನ ಸಲಹೆಯಿಂದ ಲಾಟರಿ ಟಿಕೆಟ್ ಖರೀದಿಸಿದ್ದ ಮಹಿಳೆ ಒಂದೇ ಕ್ಷಣದಲ್ಲಿ ಜಾಕ್ ಪಾಟ್ (JackPot) ಹೊಡೆದಿದ್ದಾರೆ.
ಕಾರಿಗೆ ಗ್ಯಾಸ್ ಹಾಕುವ ಸಲುವಾಗಿ ಗ್ಯಾಸ್ ಸ್ಟೇಷನ್ ಬಳಿ ನಿಂತಿದ್ದ ಮಹಿಳೆಯ (Women) ಬಳ ಬಂದ ಅನಾಮಧೇಯ ಮಧ್ಯವಯಸ್ಕ ವ್ಯಕ್ತಿಯೊಬ್ಬ, 30 ಡಾಲರ್ ಅಂದರೆ ಅಂದಾಜು 2300 ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಖರೀದಿ ಮಾಡಿ ಖಂಡಿತಾ ನಿಮಗೆ ಜಾಕ್ ಪಾಟ್ ಹೊಡೆಯುತ್ತೆ ಎಂದಿದ್ದ. ಒಲ್ಲದ ಮನಸ್ಸಿನಿಂದಲೇ ಲಾಟರಿ ಟಿಕೆಟ್ ಖರೀದಿಸಿದ್ದ ಮಹಿಳೆ, ಟಿಕೆಟ್ ಅನ್ನು ತಿಕ್ಕಿದಾಗ ನಿಜಕ್ಕೂ ಕೋಟ್ಯಧಿಪತಿಯಾಗಿದ್ದಳು.
ಅಮೆರಿಕದ ಜೆನೆಸೀ ಕೌಂಟಿಯ (Genesee County) ಮೂಲದ ಮಹಿಳೆ ಇವರಾಗಿದ್ದು, ಗೌಪ್ಯತೆಯ ಕಾರಣದಿಂದಾಗಿ ಆಕೆಯ ಹೆಸರನ್ನು ಬಹಿರಂಗ ಮಾಡಲಾಗಿಲ್ಲ. ಅವರು ಗ್ರ್ಯಾಂಡ್ ಬ್ಲಾಕ್‌ನಲ್ಲಿರುವ (Grand Black) ಗ್ಯಾಸ್ ಸ್ಟೇಷನ್‌ನಿಂದ ಮಿಚಿಗನ್ ಲಾಟರಿ ಟಿಕೆಟ್ ಖರೀದಿಸಿದ್ದರು.
ಮಹಿಳೆ ಹೇಳುವ ಪ್ರಕಾರ, ಆಕೆ ತನ್ನ ಪ್ರಯಾಣ ಮಾಡುತ್ತಿದ್ದ ವೇಳೆ ಗ್ರ್ಯಾಂಡ್ ಬ್ಲಾಕ್ ನಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಗ್ಯಾಸ್ ಹಾಕುವ ಸಲುವಾಗಿ ಸರತಿ ಸಾಲಿನಲ್ಲಿದ್ದರು. ಆಗ ಅವರ ಬಳಿ ಬಂದ ಒಬ್ಬ ವ್ಯಕ್ತಿ, 'ನೀವು 2300 ರೂಪಾಯಿಗಳಿಗೆ ($30) ಲಾಟರಿ ಟಿಕೆಟ್ ಖರೀದಿಸಿ ನೋಡಿ, 31 ಕೋಟಿ ಮೊತ್ತವನ್ನು ಖಂಡಿತಾ ಗೆಲ್ಲುತ್ತೀರಿ ಎಂದು ಹೇಳಿದ್ದ ಎಂದು ಮಹಿಳೆ ಹೇಳಿದ್ದಾಳೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಆತ ನಮ್ಮ ಮನವೊಲಿಸುವ ಸಾಹಸ ಮಾಡುತ್ತಿದ್ದ. ಆತ ಹೇಳುತ್ತಿದ್ದ ರೀತಿಗೆ ಕೊನೆಗ ನಾವು ಒಪ್ಪಿಕೊಂಡು, ಕೆಲ ಸಮಯ ಯೋಚಿಸಿ ಟಿಕೆಟ್ ಖರೀದಿ ಮಾಡಿದ್ದೆವು. ಆತನೇ ಲಾಟರಿ ಟಿಕೆಟ್ ಹರಿದು ನಮಗೆ ನೀಡಿದ್ದ ಎಂದಿದ್ದಾಳೆ.
ಅದಾದ ಬಳಿಕ ನಾವು ಕಾರಿಗೆ ಗ್ಯಾಸ್ ತುಂಬಿಸಿಕೊಂಡು ಅಲ್ಲಿಂದ ಹೊರಟೆವು. ಕಾರಿನಲ್ಲಿದ್ದ ವೇಳೆ ಕುತೂಹಲ ತಡೆಯಲಾರದೆ, ಲಾಟರಿ ಟಿಕೆಟ್ ಅನ್ನು ಸ್ಕ್ರ್ಯಾಚ್ ಮಾಡಿದಾಗ ಒಂದು ಕ್ಷಣ ನಮ್ಮ ಕಣ್ಣನ್ನು ನಾವೇ ನಂಬದ ಅಚ್ಚರಿ ನಡೆದುಹೋಗಿತ್ತು. ಗ್ಯಾಸ್ ಸ್ಟೇಷನ್ ನಲ್ಲಿ ನಮಗೆ ಲಾಟರಿ ಟಿಕೆಟ್ ನೀಡಿದ್ದ ವ್ಯಕ್ತಿ ಹೇಳಿದ್ದಷ್ಟೇ ಮೊತ್ತವನ್ನು ನಾವು ಗೆದ್ದಿದ್ದೆವು ಎಂದು ಮಹಿಳೆ ಹೇಳಿದ್ದಾಳೆ.
ಇದರಿಂದಾಗಿ ಮಹಿಳೆ ಒಂದೇ ಕ್ಷಣದಲ್ಲಿ ಕೋಟ್ಯಧಿಪತಿಯಾಗಿ ಅಮೆರಿಕದ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಲಾಟರಿ ಟಿಕೆಟ್ ಖರೀದಿ ಮಾಡಿದ ಕ್ಷಣದಿಂದ ಹಿಡಿದು ಸ್ಕ್ರ್ಯಾಚ್ ಮಾಡುವವರೆಗೂ ಇಷ್ಟು ಹಣವನ್ನು ಗೆಲ್ಲಬಹುದು ಎಂದು ಕನಸು ಮನಸಿನಲ್ಲೂ ಊಹೆ ಮಾಡಿರಲಿಲ್ಲ ಎಂದಾಕೆ ಹೇಳಿದ್ದಾರೆ.
KBC Lottery Fraud: ಲಾಟರಿ ಹೆಸರಲ್ಲಿ 100ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರ ಬಂಧನ
ಇದಾದ ಬಳಿಕ ಮಹಿಳೆಯು ಲಾಟರಿ ಟಿಕೆಟ್ ಹಿಡಿದು ಮಿಚಿಗನ್ ಲಾಟರಿ ಕೇಂದ್ರ ಕಚೇರಿಗೆ ತೆರಳಿದ್ದು, ಅಲ್ಲಿಯೂ ಕೂಡ ತಾವು ಗೆದ್ದಿರುವ ಹಣದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ತಕ್ಷಣಕ್ಕೆ ಆಕೆ 19 ಕೋಟಿಯನ್ನು ತೆಗೆದುಕೊಂಡು ಹೋಗಬಹುದು ಎಂದು ಆಕೆಗೆ ತಿಳಿಸಲಾಗಿತ್ತು. ಪೂರ್ಣ 31 ಕೋಟಿ ರೂಪಾಯಿ ನಿಮಗೆ 30 ವರ್ಷದ ಬಳಿಕ ಸಿಗಲಿದೆ ಎಂದು ಆಕೆಗೆ ಈ ವೇಳೆ ತಿಳಿಸಲಾಗಿದೆ. ಪ್ರತಿ ವರ್ಷ ಕಂತುಗಳ ರೂಪದಲ್ಲಿ ಆಕೆಗೆ ಈ ಹಣವನ್ನು ನೀಡಲಾಗುತ್ತದೆ ಎಂದು ಮಿಚಿಗನ್ ಲಾಟರಿ ತಿಳಿಸಿದೆ. ಆ ಕಾರಣಕ್ಕಾಗಿ ಮಹಿಳೆ 19 ಕೋಟಿ ರೂಪಾಯಿಯನ್ನು ಸದ್ಯಕ್ಕೆ ತೆಗೆದುಕೊಂಡಿದ್ದಾಳೆ.
Lottery Ticket ಗಡಿ ಜಿಲ್ಲೆಯಲ್ಲಿ ಕದ್ದು ಮುಚ್ಚಿ ಲಾಟರಿ ದಂಧೆ, ಲಕ್ಷಾಂತರ ಮೌಲ್ಯದ ಕೇರಳ ಟಿಕೆಟ್ ವಶ!
ಒಟ್ಟಾರೆ, ಅನಾಮಧೇಯ ವ್ಯಕ್ತಿ ನೀಡಿದ ಸಣ್ಣ ಸಲಹೆಯೊಂದು ಮಹಿಳೆಯ ಇಡೀ ಜೀವನವನ್ನು ಬದಲಾಯಿಸಿಬಿಟ್ಟಿದೆ. ತಮಗೆ ಸಿಕ್ಕಿರುವ ಹಣದಲ್ಲಿ ಒಳ್ಳೆಯ ಮನೆಯನ್ನು ಖರೀದಿ ಮಾಡುವ ಗುರಿ ಹೊಂದಿರುವುದಾಗಿ ಮಹಿಳೆ ಹೇಳಿದ್ದು, ಸಣ್ಣ ಪುಟ್ಟ ಸಾಲಗಳು ತೀರಿಸಿ ಉಳಿದ ಹಣವನ್ನು ಸೇವಿಂಗ್ ಮಾಡುವುದಾಗಿ ತಿಳಿಸಿದ್ದಾರೆ.