ಸೋಂಕಿತರು ಹೆಚ್ಚಾಗುತ್ತಾರೆ, ಕೊರೋನಾ ಪರೀಕ್ಷೆ ಕಡಿಮೆ ಮಾಡಿ: ಟ್ರಂಪ್

By Suvarna NewsFirst Published Jun 22, 2020, 8:57 AM IST
Highlights

ಕೊರೋನಾ ಪರೀಕ್ಷೆ ಕಡಿಮೆ ಮಾಡಲು ಟ್ರಂಪ್‌ ಸೂಚನೆ!| ಹೆಚ್ಚು ಸೋಂಕಿತರು ಪತ್ತೆಯಾಗುತ್ತಾರೆಂದ ಅಧ್ಯಕ್ಷ!

ನವದೆಹಲಿ(ಜೂ.22): ಕೊರೋನಾ ಪತ್ತೆ ಪರೀಕ್ಷೆಯನ್ನು ಅಧಿಕ ಪ್ರಮಾಣದಲ್ಲಿ ಮಾಡುತ್ತಿರುವುದಕ್ಕೆ ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಪರೀಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿಯೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಭಾರತದಂತಹ ಹಲವು ದೇಶಗಳು ಕೊರೋನಾ ಪರೀಕ್ಷೆ ಹೆಚ್ಚು ಮಾಡಲು ಪ್ರಯತ್ನಿಸುತ್ತಿರುವಾಗ, ಟ್ರಂಪ್‌ ಪರೀಕ್ಷೆಯನ್ನೇ ಕಡಿಮೆ ಮಾಡಲು ಸೂಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಚುನಾವಣಾ ಪ್ರಚಾರ ರಾರ‍ಯಲಿಯೊಂದರಲ್ಲಿ ಮಾತನಾಡಿದ ಅವರು, ಪರೀಕ್ಷೆ ಮಾಡಿದರೆ ಹೆಚ್ಚು ಪ್ರಕರಣ ಪತ್ತೆಯಾಗುತ್ತವೆ. ಹೀಗಾಗಿ ಕಡಿಮೆ ಮಾಡಲು ಸೂಚಿಸಿದ್ದೇನೆ ಎಂದರು.

ಅಮೆರಿಕ ಔದ್ಯೋಗಿಕ ವೀಸಾದಲ್ಲಿ ಹೊಸ ಬದಲಾವಣೆ: ಟೆಕ್ಕಿಗಳಿಗೆ ಉದ್ಯೋಗ ಅಭದ್ರತೆ..!

ಕೊರೋನಾಗೆ ಟ್ರಂಪ್‌ ಹೊಸ ಹೆಸರು ಕುಂಗ್‌ಫ್ಲೂ!

ಕೊರೋನಾ ವೈರಸ್‌ ಹುಟ್ಟುಹಾಕಿದ್ದೇ ಚೀನಾ ಎಂದು ಹಿಂದಿನಿಂದಲೂ ವಾದಿಸಿಕೊಂಡೇ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮತ್ತೊಮ್ಮೆ ಚೀನಾಕ್ಕೆ ಟಾಂಗ್‌ ನೀಡಿದ್ದಾರೆ. ಈ ಹಿಂದೆ ಕೊರೋನಾವನ್ನು ‘ಚೀನಾ ವೈರಸ್‌’ ಎಂದು ಮೂದಲಿಸಿದ್ದ ಟ್ರಂಪ್‌, ಇದೀಗ ಕೊರೋನಾವನ್ನು ಚೀನಾದ ಮಾರ್ಷಲ್‌ ಆರ್ಟ್‌ ಕುಂಗ್‌ಫು ರೀತಿಯಲ್ಲಿ ಕುಂಗ್‌ ಫ್ಲೂ ಎಂದು ಕರೆಯುವ ಮೂಲಕ ಚೀನಾವನ್ನು ವ್ಯಂಗ್ಯವಾಡಿದ್ದಾರೆ. ಕೊರೋನಾ ವೈರಸ್‌ ಅನ್ನು ಜನ ನಾನಾ ರೀತಿಯಲ್ಲಿ ಕರೆಯುತ್ತಾರೆ. ಕೆಲವರು ವೈರಸ್‌ ಎನ್ನುತ್ತಾರೆ, ಕೆಲವರು ಫ್ಲೂ ಎನ್ನುತ್ತಾರೆ, ನಾನು ಕುಂಗ್‌ ಫ್ಲೂ ಎನ್ನಬಹುದು, ಅದರಲ್ಲಿ ವ್ಯತ್ಯಾಸವೇನೂ ಇಲ್ಲ ಎಂದು ಹೇಳಿದ್ದಾರೆ.

click me!