ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಮನುಷ್ಯರಷ್ಟೇ ಅಲ್ಲದೇ ಪ್ರಾಣಿಗಳು ಸಂಕಷ್ಟಕ್ಕೆ ಒಳಗಾಗಿವೆ. ಬುದ್ಧಿವಂತ ಮನುಷ್ಯರೇನೋ ಅಪಾಯವನ್ನು ತಿಳಿದು ಸ್ಥಳದಿಂದ ಪಲಾಯನ ಮಾಡುತ್ತಿದ್ದಾರೆ. ಆದರೆ ಬುದ್ಧಿ ತಿಳಿಯದ ಮೃಗಾಲಯದ ಬಂಧನದಲ್ಲಿರುವ ಯುದ್ಧದ ಅರಿವಿಲ್ಲದ ಪ್ರಾಣಿಗಳು ಏನು ಮಾಡಬೇಕು. ಸದ್ಯ ಈ ಬಗ್ಗೆ ಯೋಚಿಸಿರುವ ಉಕ್ರೇನ್‌ನ ಕೀವ್‌ನಲ್ಲಿರುವ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳನ್ನು ಟ್ರಕ್ ಮೂಲಕ ಸಮೀಪದ ದೇಶ ಪೋಲೆಂಡ್‌ಗೆ ಕಳುಹಿಸಿಕೊಟ್ಟಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ 10ನೇ ದಿನವೂ ಮುಂದುವರೆದಿದೆ. ಯುದ್ಧ ಪೀಡಿತ ಉಕ್ರೇನ್‌ನಲ್ಲಿ (Ukraine) ನೆಲೆಸಿದ್ದ ಬೇರೆ ದೇಶಗಳ ಪ್ರಜೆಗಳು ಅಲ್ಲದೇ ಉಕ್ರೇನ್ ನಿವಾಸಿಗಳು ಕೂಡ ದೇಶ ಬಿಟ್ಟು ಜೀವ ಉಳಿಸಿಕೊಳ್ಳುವುದಕ್ಕಾಗಿ ಪಲಾಯನ ಮಾಡುತ್ತಿದ್ದಾರೆ. ಯುದ್ಧದಿಂದ ಅಕ್ಷರಶಃ ನರಕದಂತಾಗಿರುವ ಉಕ್ರೇನ್‌ನಲ್ಲಿ ತಿನ್ನಲು ಆಹಾರವಿಲ್ಲದೇ ಕುಡಿಯಲು ನೀರು ಇಲ್ಲದೇ ಜನ ಸಂಕಷ್ಟ ಪಡುತ್ತಿದ್ದಾರೆ. ಜೊತೆಗೆ ಬಾಂಬ್‌ಗಳು ಕ್ಷಿಪಣಿಗಳ ಸ್ಫೋಟದಿಂದಾಗಿ ನಗರದ ಬಹುತೇಕ ಕಟ್ಟಡಗಳು ಕುಸಿಯುವ ಜೊತೆ ಹೊತ್ತಿ ಉರಿಯುತ್ತಿದ್ದು ಅಲ್ಲಿನ ಪರಿಸರ ಸಂಪೂರ್ಣ ನೆಲಸಮ ಆಗುವುದರ ಜೊತೆ ವಾಯುಮಾಲಿನ್ಯವೂ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದೆ. ಶುದ್ಧವಾದ ಗಾಳಿಯನ್ನು ಉಸಿರಾಡಲು ಕೂಡ ಜನ ಸಂಕಷ್ಟ ಪಡುತ್ತಿದ್ದಾರೆ.
Russia Ukraine Crisis: ಪ್ರಾಣ ಉಳಿಸಿಕೊಳ್ಳುವ ಪಲಾಯನದಲ್ಲಿ ಪ್ರಾಣಿಗಳನ್ನು ಮರೆಯದ ಉಕ್ರೇನಿಯನ್ನರು
ಈ ನಡುವೆಯೂ ಉಕ್ರೇನಿಗರು ಮಾನವೀಯತೆ ಮರೆಯದೇ ಮೃಗಾಲಯಗಳಲ್ಲಿದ್ದ ಮುಗ್ಧ ಪ್ರಾಣಿಗಳನ್ನು ಸಮೀಪದ ದೇಶ ಪೋಲೆಂಡ್‌ಗೆ ಸ್ಥಳಾಂತರಿಸುತ್ತಿದ್ದಾರೆ. ಕೀವ್‌ನ ಮೃಗಾಲಯದಲ್ಲಿದ್ದ(Zoo) ಒಟ್ಟು 6 ಹುಲಿ ಹಾಗೂ 6 ಸಿಂಹಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಉಕ್ರೇನ್‌ಗೆ ಸೇರಿದ ಟ್ರಕ್‌ಗಳ ಮೂಲಕ ಪ್ರಾಣಿಗಳ ಸ್ಥಳಾಂತರವಾಗಿದೆ. ಈ ಪ್ರಾಣಿಗಳ ಜೊತೆ ಎರಡು ಕತ್ತೆ ಕಿರುಬ ಎರಡು ಚಿರತೆಗಳನ್ನು ಕೂಡ ಕೀವ್‌ನಿಂದ ಸ್ಥಳಾಂತರಿಸಲಾಗಿದೆ. ಯುದ್ಧ ಪೀಡಿತ ಝೈಟೊಮಿರ್ ಪ್ರದೇಶವನ್ನು ತಪ್ಪಿಸಿಕೊಂಡು ಬರುವ ಸಲುವಾಗಿ ಸಾವಿರ ಕಿಲೋ ಮೀಟರ್ ದೂರ ಪ್ರಯಾಣಿಸಿ ಪೋಲೆಂಡ್ ಬಾರ್ಡರ್‌ಗೆ ಈ ಪ್ರಾಣಿಗಳನ್ನು ಹೊತ್ತ ಟ್ರಕ್ ಬಂದು ತಲುಪಿದೆ ಎಂದು ಸ್ಥಳಾಂಂತರದ ನೇತೃತ್ವ ವಹಿಸಿದ್ದ ವಕ್ತಾರೆ ಮಾಲ್ಗೊರ್ಜಾಟಾ ಚೋಡಿಲಾ (Malgorzata Chodyla) ಹೇಳಿದರು.
ಒಂದು ಸಮಯದಲ್ಲಂತೂ ರಷ್ಯಾ ಟ್ಯಾಂಕರ್‌ಗಳ ಎದುರೇ ನಮ್ಮ ಈ ಪ್ರಾಣಿಗಳನ್ನು ಹೊತ್ತ ಟ್ರಕ್ ನಿಂತಿತ್ತು. ಏಕೆಂದರೆ ಈ ಟ್ರಕ್‌ನ ಚಾಲಕ ತನ್ನ ವಾಹನದ ಕೆಳಗೆ ಮಲಗಿ ವಿಶ್ರಾಂತಿ ತೆಗೆದುಕೊಂಡ. ಈ ಮಧ್ಯೆ ಉಕ್ರೇನ್ ವಸತಿ ಕೇಂದ್ರದ ಸಿಬ್ಬಂದಿ ಪ್ರಾಣಿಗಳಿಗೆ ಆಹಾರ ನೀಡಿದರು. ಏಕೆಂದರೆ ಈ ಟ್ರಕ್ ಸಿಬ್ಬಂದಿಗೆ ಪ್ರಾಣಿಗಳಿಗೆ ಆಹಾರ ನೀಡುವುದ ಹೇಗೆ ಎಂಬುದು ಗೊತ್ತಿರಲಿಲ್ಲ ಎಂದು ಈ ಪ್ರಣಿಗಳ ಸ್ಥಳಾಂತರದ ನೇತೃತ್ವ ವಹಿಸಿದ್ದ ವಕ್ತಾರೆ ಹೇಳಿದರು.
Ukraine Crisis ಉಕ್ರೇನ್‌ನಿಂದ ಭಾರತೀಯರ ರಕ್ಷಣೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಶಹಹಬ್ಬಾಸ್!
ನಂತರ ಪೋಲೆಂಡ್(Poland) ಗಡಿ ತಲುಪಿ ಅಲ್ಲಿ ಪೋಲಿಷ್ ಟ್ರಕ್‌ಗೆ ಈ ಪ್ರಾಣಿಗಳನ್ನು ಸ್ಥಳಾಂತರಿಸಲಾಯಿತು. ನಂತರ ಉಕ್ರೇನ್‌ನ ಚಾಲಕ ತನ್ನ ಮಕ್ಕಳೊಂದಿಗೆ ಮನೆಗೆ ಮರಳಿದ್ದಾನೆ ಎಂದು ಅವರು ಹೇಳಿದರು. ಈಗ ಸ್ಥಳಾಂತರಗೊಂಡ ಪ್ರಾಣಿಗಳನ್ನು ಪೊಜ್ನನ್ ಮೃಗಾಲಯದ ಸಿಬ್ಬಂದಿ ರಕ್ಷಿಸುತ್ತಿದ್ದಾರೆ. ಮೃಗಾಲಯದ ನಿರ್ದೇಶಕಿ ಇವಾ ಝ್‌ಗ್ರಾಬ್‌ಸಿನ್ಸ್ಕಾ (Ewa Zgrabczynska) ಈ ಪ್ರಾಣಿಗಳನ್ನು ಸ್ಥಳಾಂತರಿಸುವ ವ್ಯವಸ್ಥೆಗೆ ಸಹಾಯ ಮಾಡಿದರು. ಅವರು ಈಗಾಗಲೇ ಪ್ರಾಣಿಗಳನ್ನು ತೆಗೆದುಕೊಳ್ಳಲು ಬಯಸುವ ಹಲವಾರು ಪಾಶ್ಚಿಮಾತ್ಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.ಇನ್ನು ಈ ಮೃಗಾಲಯವಿರುವ ಪೊಜ್ನನ್ ನಗರದಲ್ಲಿ ಅವರು ಪ್ರಾಣಿಗಳ ಹೊಟ್ಟೆ ತುಂಬಿಸಲು ನಿಧಿ ಸಂಗ್ರಹಣೆಯನ್ನು ಕೂಡ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ