ಟಾಯ್ಲೆಟ್‌ ಕಮೋಡಲ್ಲಿ ಜ್ಯೂಸ್‌ ತಯಾರಿಸಿದಳು! ವಿಡಿಯೋ ವೈರಲ್

By Kannadaprabha NewsFirst Published Apr 30, 2021, 10:58 AM IST
Highlights

ಇಲ್ಲೊಬ್ಬ ವಿದೇಶೀ ಮಹಿಳೆ ಟಾಯ್ಲೆಟ್‌ನ ಕಮೋಡ್‌ನಲ್ಲಿ ಹಣ್ಣು, ಐಸ್‌ಕ್ರೀಮು ಹಾಗೂ ವಿವಿಧ ಥರದ ಡ್ರಿಂಕ್ಸ್‌ ಹಾಕಿ ಜ್ಯೂಸ್‌ ಮಾಡಿದ ವಿಡಿಯೋ ಭಾರೀ ವೈರಲ್‌ ಆಗಿದೆ 

ಬೆಂಗಳೂರು (ಏ.30):  ಹಣ್ಣು ಅಥವಾ ಐಸ್‌ ಕ್ರೀಂ ಬೆರೆಸಿ ಮಿಕ್ಸರ್‌ನಲ್ಲಿ ಜ್ಯೂಸ್‌ ಮಾಡುವುದು ಕಾಮನ್‌. ಆದರೆ ಇಲ್ಲೊಬ್ಬ ವಿದೇಶೀ ಮಹಿಳೆ ಟಾಯ್ಲೆಟ್‌ನ ಕಮೋಡ್‌ನಲ್ಲಿ ಹಣ್ಣು, ಐಸ್‌ಕ್ರೀಮು ಹಾಗೂ ವಿವಿಧ ಥರದ ಡ್ರಿಂಕ್ಸ್‌ ಹಾಕಿ ಜ್ಯೂಸ್‌ ಮಾಡಿದ ವಿಡಿಯೋ ಭಾರೀ ವೈರಲ್‌ ಆಗಿದೆ 

ಸುಮಾರು 1 ಕೋಟಿ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ನಾನಾ ಹಣ್ಣುಗಳ ತುಂಡುಗಳು, ಐಸ್‌ಕ್ರೀಮು ಹಾಗೂ ಕೂಲ್‌ಡ್ರಿಂಕ್ಸನ್ನು ಟಾಯ್ಲೆಟ್‌ ಕಮೋಡಲ್ಲಿ ಈಕೆ ಸುರುವುತ್ತಾಳೆ.

 

White people need to be STOP pic.twitter.com/vbb85Yk4W5

— Curlyixing (@curlyixing)

ಆಮೇಲೆ ಮೆಲ್ಲಗೆ ಫ್ಲಶ್‌ ಮಾಡಿ ಸೌಟು ಹಾಕಿ ಕಲಕುತ್ತಾಳೆ. ಅಲ್ಲಿಗೆ ಜ್ಯೂಸ್‌ ರೆಡಿಯಾಗುತ್ತದೆ. ಅಲ್ಲದೇ ಅದನ್ನು ತನ್ನ ಫ್ರೆಂಡ್ಸ್‌ಗೆ ಕುಡಿಯಲು ನೀಡಿದ್ದಾಳೆ.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

click me!