ನ್ಯೂಯಾರ್ಕ್‌ನ ಪ್ರಸಿದ್ಧ ಬ್ರೂಕ್ಲಿನ್ ಸೇತುವೆಗೆ ಹಡಗು ಡಿಕ್ಕಿ

Published : May 19, 2025, 08:24 AM IST
ನ್ಯೂಯಾರ್ಕ್‌ನ ಪ್ರಸಿದ್ಧ ಬ್ರೂಕ್ಲಿನ್ ಸೇತುವೆಗೆ ಹಡಗು ಡಿಕ್ಕಿ

ಸಾರಾಂಶ

ನ್ಯೂಯಾರ್ಕ್‌ನ ಈಸ್ಟ್ ನದಿಯಲ್ಲಿ ಮೆಕ್ಸಿಕೋದ ನೌಕಾಪಡೆಯ ಹಡಗೊಂದು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 22 ಜನರು ಗಾಯಗೊಂಡಿದ್ದಾರೆ. ಯಾಂತ್ರಿಕ ದೋಷದಿಂದಾಗಿ ಹಡಗಿನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

ನ್ಯೂಯಾರ್ಕ್‌: ಇಲ್ಲಿನ ಈಸ್ಟ್‌ ನದಿಯಲ್ಲಿ ಸಾಗುತ್ತಿದ್ದ ಮೆಕ್ಸಿಕೋದ ನೌಕಾಪಡೆಯ ಹಡಗೊಂದು 142 ವರ್ಷ ಹಳೆದ ಬ್ರೂಕ್ಲಿನ್ ಸೇತುವೆಯ ಅಡಿ ಸಾಗುವ ವೇಳೆ ಅದಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ 22 ಜನರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.

ಮ್ಯಾನ್‌ಹ್ಯಾಟನ್ ಪಿಯರ್‌ನಿಂದ ಸಮುದ್ರದ ಕಡೆ ಹೊರಟಿದ್ದ ಹಡಗು ಸೇತುವೆಯತ್ತ ಹೋಗಿದ್ದೇಕೆಂದು ತಿಳಿದುಬಂದಿಲ್ಲ. ಈ ಬಗ್ಗೆ ಮಾತನಾಡಿರುವ ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಮುಖ್ಯಸ್ಥ ವಿಲ್ಸನ್‌ ಅರಾಂಬೋಲ್ಸ್‌, ‘ಯಾಂತ್ರಿಕ ಸಮಸ್ಯೆಯಿಂದಾಗಿ ಹಡಗಿನಲ್ಲಿ ವಿದ್ಯುತ್‌ ವ್ಯತ್ಯಯವಾಗಿದ್ದು, ಪೈಲೆಟ್‌ ನಿಯಂತ್ರಣ ಕಳೆಕೊಂಡ ಕಾರಣ ಅವಘಡ ಸಂಭವಿಸಿದೆ’ ಎಂದು ತಿಳಿಸಿದ್ದಾರೆ.

ಆಗಿದ್ದೇನು?:
‘ಕುವಾಹ್ಟೆಮೊಕ್’ ಹೆಸರಿನ 297 ಅಡಿ ಉದ್ದ ಮತ್ತು 40 ಅಡಿ ಅಗಲದ ಮೆಕ್ಸಿಕೋ ನೌಕಾಪಡೆಯ ಅಲಂಕೃತ ಹಡಗು 227 ಜನರನ್ನು ಹೊತ್ತು ಮ್ಯಾನ್‌ಹಟ್ಟನ್‌ನಿಂದ ಹೊರಟಿತ್ತು. ಅದು 1883ರಲ್ಲಿ ನಿರ್ಮಾಣವಾಗಿದ್ದ ಬ್ರೂಕ್ಲಿನ್ ಸೇತುವೆಯ ಕೆಳಗಿಂದ ಹಾದು ಹೋಗುತ್ತಿದ್ದಾಗ, ಅದರಲ್ಲಿದ್ದ 158 ಅಡಿ ಎತ್ತರದ 3 ಸ್ತಂಭಗಳು ಸೇತುವೆಗೆ ತಾಗಿ ಮುರಿದು ಹೋಗಿವೆ. ಆ ಸೇತುವೆಯ ಅಡಿಯಿಂದ 135 ಅಡಿ ಎತ್ತರದ ಹಡಗುಗಳಷ್ಟೇ ಹೋಗಬಹುದಾಗಿತ್ತು. ಆದರೆ ಈ ಹಡಗಿನ ಕಂಬಗಳು ಅದಕ್ಕಿಂತ ಉದ್ದವಿದ್ದ ಕಾರಣ ಮುರಿದಿವೆ.

ಘಟನೆ ನಡೆದಾಗ, ಸೂರ್ಯಾಸ್ತ ವೀಕ್ಷಿಸಲು ನೆರೆದಿದ್ದ ಹಲವರು ಇದರ ದೃಶ್ಯವನ್ನು ಸೆರೆಹಿಡಿದಿದ್ದು, ‘ಸಿನಿಮಾ ನೋಡಿದಂತಾಯಿತು’ ಎಂದು ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಕೆಲ ಹೊತ್ತಿನ ತನಕ ಸೇತುವೆಯ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಬಳಿಕ ಮತ್ತೆ ಆರಂಭಿಸಲಾಗಿದೆ.

ಭಾರತದ ಭೂ ಭಾಗ ಬಾಂಗ್ಲಾಕ್ಕೆ ಸೇರಿಸಿ ಟರ್ಕಿ ಹೊಸ ಕಿರಿಕ್‌
ಭಾರತದ ಜತೆಗಿನ ಯುದ್ಧದ ವೇಳೆ ತನ್ನ ಯೋಧರನ್ನು ಕಳುಹಿಸಿ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದ ಟರ್ಕಿ ಇದೀಗ, ಬಾಂಗ್ಲಾದೇಶದಲ್ಲೂ ಹೊಸ ಭಾರತ ವಿರೋಧಿ ಆಟ ಆಡಲು ಮುಂದಾಗಿದೆ. ಟರ್ಕಿ ಬೆಂಬಲಿತ ಇಸ್ಲಾಂ ಮೂಲಭೂತವಾದಿಗಳ ಎನ್‌ಜಿಒವೊಂದು ಭಾರತದ ಈಶಾನ್ಯ ಮತ್ತು ಪೂರ್ವದ ಹಲವು ರಾಜ್ಯಗಳನ್ನು ಸೇರಿಸಿ ಗ್ರೇಟರ್‌ ಬಾಂಗ್ಲಾದೇಶ್‌ ಪರಿಕಲ್ಪನೆ ಹುಟ್ಟುಹಾಕಿದೆ. ಈ ಕುರಿತು ಗ್ರೇಟರ್‌ ಬಾಂಗ್ಲಾದೇಶ್‌ ಮ್ಯಾಪ್‌ ಅನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಿದೆ.

ಸಲ್ತನತ್‌ -ಎ- ಬಾಂಗ್ಲಾ (ಬಾಂಗ್ಲಾ ಸಾಮ್ರಾಜ್ಯ) ಹೆಸರಿನ ಎನ್‌ಜಿಒವೊಂದು ಈ ವಿವಾದಾತ್ಮಕ ಮ್ಯಾಪ್‌ ಅನ್ನು ಬಿಡುಗಡೆ ಮಾಡಿದ್ದು, ಮ್ಯಾನ್ಮಾರ್‌ನ ಆರಕ್ಕನ್‌ ರಾಜ್ಯ, ಬಿಹಾರ, ಜಾರ್ಖಂಡ್‌, ಒಡಿಶಾ ಮತ್ತು ಭಾರತದ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಗ್ರೇಟರ್‌ ಬಾಂಗ್ಲಾದೇಶ್‌ ಮ್ಯಾಪ್‌ನಲ್ಲಿ ತೋರಿಸಿದೆ. ಢಾಕಾದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಹಾಲ್‌ಗಳಲ್ಲಿ ಈ ಮ್ಯಾಪ್‌ ಅನ್ನು ಹಾಕಲಾಗಿದೆ.

ಪಾಕಿಸ್ತಾನದ ರೀತಿಯಲ್ಲಿ ಇದೀಗ ಬಾಂಗ್ಲಾದೇಶದ ಮೇಲೂ ಟರ್ಕಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ಬಾಂಗ್ಲಾದೇಶದ ಸೇನೆಗೆ ಟರ್ಕಿಯಿಂದ ಶಾಸ್ತ್ರಾಸ್ತ್ರಗಳ ಪೂರೈಕೆ ಹೆಚ್ಚಿದೆ. ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ ಪಾಕಿಸ್ತಾನವು ಬಾಂಗ್ಲಾ ಮತ್ತು ಟರ್ಕಿಯನ್ನು ಹತ್ತಿರ ತರುವಲ್ಲಿ ಮಹತ್ವದ ಪಾತ್ರವಹಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!