ಟ್ರಂಪ್ ಮಾತಾಡುವ ರೀತಿ ತುಂಬಾ ಮೂರ್ಖತನದ್ದು, ಅಮೆರಿಕದ ಆಮದುಗಳ ಮೇಲೆಯೂ ಭಾರತ 50% ಸುಂಕ ವಿಧಿಸಿ ಪ್ರತೀಕಾರ ಕೈಗೊಳ್ಳಬೇಕು: ಶಶಿ ತರೂರ್

Published : Aug 08, 2025, 10:24 PM IST
Shashi taroor

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ತೀವ್ರವಾಗಿ ಟೀಕಿಸಿದ್ದಾರೆ. ಭಾರತದ ಮೇಲಿನ ಸುಂಕವನ್ನು ಅನ್ಯಾಯ ಮತ್ತು ದ್ವಿಮುಖ ಎಂದು ಕರೆದ ತರೂರ್, ಭಾರತವು ಪ್ರತಿಕಾರ ತೀರಿಸಿಕೊಳ್ಳಬೇಕು  ಎಂದು ಸಲಹೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷರ ಮಾತನಾಡುವ ರೀತಿ ತುಂಬಾ ಮೂರ್ಖತನದಿಂದ ಕೂಡಿದ್ದು, ಅವರು ಬೇರೆ ಯಾವುದೇ ದೇಶವನ್ನು ಅವಮಾನಿಸುತ್ತಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವರ್ತನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದನ ಸಂದರ್ಶನದಲ್ಲಿ ಮಾತನಾಡಿರುವ ಶಶಿ ತರೂರ್, ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಮಾತನಾಡುವ ಶೈಲಿ ಮೂರ್ಖತನದ್ದು ಎಂದು ಕರೆದ ತರೂರ್, ಭಾರತವನ್ನು ಅವಮಾನಿಸಲು ಟ್ರಂಪ್ ತಪ್ಪು ಜನರನ್ನು ಆಯ್ಕೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಭಾರತದ ಮೇಲಿನ ಸುಂಕವನ್ನು ಅನ್ಯಾಯ, ಅಸಮಾನ ಮತ್ತು ದ್ವಿಮುಖ ಎಂದು ಟೀಕಿಸಿದ್ದಾರೆ.

ಟ್ರಂಪ್‌ರ ದ್ವಿಮುಖ ನೀತಿ:

ತರೂರ್ ಟ್ರಂಪ್‌ರ ನೀತಿಯನ್ನು ಪ್ರಶ್ನಿಸಿದ್ದು, ಚೀನಾ ಭಾರತಕ್ಕಿಂತ ರಷ್ಯಾದಿಂದ ಹೆಚ್ಚು ತೈಲ ಆಮದು ಮಾಡಿಕೊಂಡರೂ, ಚೀನಾಕ್ಕೆ 30% ಸುಂಕ ಮತ್ತು 90 ದಿನಗಳ ಕಾಲಾವಕಾಶ ನೀಡಲಾಗಿದೆ, ಆದರೆ ಭಾರತಕ್ಕೆ 50% ಸುಂಕ ಮತ್ತು ಕೇವಲ 21 ದಿನಗಳ ಕಾಲಾವಕಾಶವನ್ನು ಮಾತ್ರ ನೀಡಲಾಗಿದೆ. ಅಮೆರಿಕವು ರಷ್ಯಾದಿಂದ ಯುರೇನಿಯಂ ಮತ್ತು ಪಲ್ಲಾಡಿಯಂ ಆಮದು ಮಾಡಿಕೊಳ್ಳುತ್ತಿದ್ದರೂ ಭಾರತವನ್ನು ಗುರಿಯಾಗಿಸಿರುವುದು ದ್ವಿಮುಖ ಧೋರಣೆಯನ್ನು ತೋರಿಸುತ್ತದೆ ಎಂದು ತರೂರ್ ಟೀಕಿಸಿದ್ದಾರೆ.

ಭಾರತ ಅಮೆರಿಕದ ಆಮದುಗಳ ಮೇಲೆಯೂ 50% ಸುಂಕ ವಿಧಿಸಬೇಕು:

ಟ್ರಂಪ್‌ರ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಶಸ್ತ್ರಾಸ್ತ್ರ ಖರೀದಿ ಒಪ್ಪಂದವನ್ನು ಸ್ಥಗಿತಗೊಳಿಸಿದೆ ಎಂದು ತರೂರ್ ಹೇಳಿದ್ದಾರೆ. ನಾವು ಹೆಮ್ಮೆಯ ದೇಶವಾಗಿ ಮಾತುಕತೆ ನಡೆಸಬೇಕು. ಒಂದು ಪಕ್ಷವು ಎಲ್ಲಾ ನಿಯಮಗಳನ್ನು ನಿಗದಿಪಡಿಸಿ, ಇನ್ನೊಂದು ಪಕ್ಷವು ಅದನ್ನು ಒಪ್ಪಿಕೊಳ್ಳಬೇಕೆಂಬ ಸ್ಥಿತಿಯನ್ನು ಭಾರತ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ. ಅಮೆರಿಕದ ಆಮದುಗಳ ಮೇಲೆ 50% ಸುಂಕ ವಿಧಿಸುವ ಮೂಲಕ ಭಾರತವು ಪ್ರತಿಕಾರ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದ್ದಾರೆ.

ಭಾರತಕ್ಕೆ ತರೂರ್ ಸಲಹೆ ಏನು?

ಭಾರತದ $90 ಬಿಲಿಯನ್ ವ್ಯಾಪಾರದ ಮೇಲೆ 50% ಸುಂಕವು ಗಂಭೀರ ಪರಿಣಾಮ ಬೀರಲಿದೆ ಎಂದು ತರೂರ್ ಎಚ್ಚರಿಸಿದ್ದಾರೆ. ವಿಯೆಟ್ನಾಂ, ಇಂಡೋನೇಷ್ಯಾ, ಬಾಂಗ್ಲಾದೇಶದಂತಹ ಸ್ಪರ್ಧಿಗಳಿಗೆ ಕಡಿಮೆ ಸುಂಕವಿರುವುದರಿಂದ, ಅಮೆರಿಕದಲ್ಲಿ ಭಾರತೀಯ ಉತ್ಪನ್ನಗಳು ಸ್ಪರ್ಧಾತ್ಮಕತೆ ಕಳೆದುಕೊಳ್ಳಬಹುದು. ಇದರಿಂದ ಭಾರತವು ಯುಕೆ, ಯುಎಇ ಮತ್ತು ಇತರ ದೇಶಗಳೊಂದಿಗೆ ವ್ಯಾಪಾರವನ್ನು ವೈವಿಧ್ಯಗೊಳಿಸಬೇಕಾಗುತ್ತದೆ ಎಂದು ತರೂರ್ ಸಲಹೆ ನೀಡಿದ್ದಾರೆ.

ತರೂರ್‌ರ ಟೀಕೆಯು ಕಾಂಗ್ರೆಸ್‌ನ ಇತರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪಿ. ಚಿದಂಬರಂ ಅವರ ಹೇಳಿಕೆಗಳೊಂದಿಗೆ ಸಾಮಂಜಸ್ಯವನ್ನು ತೋರಿಸುತ್ತದೆ, ಅವರು ಟ್ರಂಪ್‌ರ ಸುಂಕಗಳನ್ನು 'ಭಾರತಕ್ಕೆ ದೊಡ್ಡ ಆಘಾತ' ಎಂದು ಕರೆದಿದ್ದಾರೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಿಕೊಂಡು, ದೃಢವಾದ ರಾಜತಾಂತ್ರಿಕ ಮತ್ತು ಆರ್ಥಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ತರೂರ್ ಒತ್ತಾಯಿಸಿದ್ದಾರೆ. ಈ ವಿವಾದವು ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ರಾಜತಾಂತ್ರಿಕ ಮಾತುಕತೆಗಳ ಫಲಿತಾಂಶವು ಎರಡೂ ದೇಶಗಳ ಆರ್ಥಿಕ ಭವಿಷ್ಯವನ್ನು ನಿರ್ಧರಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!