ಮೊಸಳೆಯನ್ನೇ ಹುರಿದು ಮುಕ್ಕಿದ ಶಾರ್ಕ್‌: ಅತೀ ಅಪರೂಪದ ವೀಡಿಯೋ ವೈರಲ್

By Anusha Kb  |  First Published Dec 21, 2024, 12:17 PM IST

ಬೀಚ್‌ನಲ್ಲಿ ಶಾರ್ಕ್ ಒಂದು ಮೊಸಳೆಯನ್ನು ನುಂಗುತ್ತಿರುವ ಅಪರೂಪದ ದೃಶ್ಯ ಸೆರೆಯಾಗಿದೆ. ಈ ಘಟನೆಯನ್ನು ವೀಕ್ಷಿಸಿದ ಜನರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಆಹಾರ ಸರಪಳಿಯಲ್ಲಿ ಒಂದು ಪ್ರಾಣಿಯನ್ನು ಮತ್ತೊಂದು ಪ್ರಾಣಿ ತಿನ್ನುವುದು ಸಹಜ ಆದರೆ ದೊಡ್ಡ ಗಾತ್ರದ ಮೊಸಳೆಯಂತಹ ಮೊಸಳೆಯನ್ನೇ  ಶಾರ್ಕೊಂದು ತಿಂದರೆ ಹೇಗಿರುತ್ತದೆ. ಇದು ಸಹಜವಾಗಿ ನಡೆಯುವುದಾದರೂ ಕಾಣಲು ಸಿಗುವುದು ತೀರಾ ಅಪರೂಪ. ಆದರೆ ಇಂತಹ ದೃಶ್ಯವೊಂದಕ್ಕೆ ಬೀಚ್‌ಗೆ ಹೋಗಿದ್ದ ಜನ ಸಾಕ್ಷಿಯಾಗಿದ್ದು, ಅತೀ ವಿರಳವಾದ ದೃಶ್ಯವೊಂದನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟೇಲಿಯಾದಲ್ಲಿ ಈ ಘಟನೆ ನಡೆದಿದ್ದು, ಬೀಚ್‌ಗೆ ಹೋಗಿದ್ದವರು ಈ ಅಪರೂಪದ ಘಟನೆಯನ್ನು ಕಣ್ಣಾರೆ ನೋಡಿದ್ದಾರೆ. ಡಿಸೆಂಬರ್ 13 ರಂದು ಈ ದೃಶ್ಯ ಸೆರೆಯಾಗಿದೆ. ನ್ಹುಲುನ್‌ಬುಯ್‌ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ನ್ಹುಲುನ್‌ಬುಯ್‌ ಬೀಚ್‌ ಗೋವ್ ಪೆನಿನ್ಸುಲಾದ ನಾರ್ತರ್ನ್‌ ಪ್ರದೇಶದಲ್ಲಿರುವ ಕರಾವಳಿ ನಗರವಾಗಿದೆ. ಈ ಅಪರೂಪದ ದೃಶ್ಯವನ್ನು ಆಲಿಸ್ ಬೆಡ್ವೆಲ್ ಅವರು 43 ಸೆಕೆಂಡ್‌ಗಳ ಕಾಲ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಇದರಲ್ಲಿ ಶಾರ್ಕೊಂದು ಉಪ್ಪು ನೀರಿನ ಮೊಸಳೆಯನ್ನು ತಿನ್ನುತ್ತಿರುವ ದೃಶ್ಯವಿದೆ. 

ಈ ಮೊಸಳೆಯೂ ಮಧ್ಯಮ ಗಾತ್ರದ್ದಾಗಿದ್ದು,  ಆಸ್ಟ್ರೇಲಿಯಾದ ಅತಿದೊಡ್ಡ ಮೊಸಳೆ ಪ್ರಭೇದಗಳಲ್ಲಿ ಒಂದಾಗಿದ್ದು, ಇದು ಸಾಮಾನ್ಯವಾಗಿ ದಡದಲ್ಲಿ ಮಲಗಿರುತ್ತದೆ. ಆದರೆ ದೊಡ್ಡದಾದ ಶಾರ್ಕೊಂದು ಸ್ವಲ್ಪವೂ ಸಮಯ ಹಾಳು ಮಾಡದೇ ಸೀದಾ ಬಂದು ಈ ಮೊಸಳೆ ತಲೆಯಲ್ಲಿ ಹಿಡಿದು ಎಳೆದೊಯ್ದಿದೆ. 10 ಸೆಕೆಂಡ್‌ಗಳ ಕಾಲ ಇದನ್ನು  ಎಳೆದಾಡಿದ್ದು, ಬಳಿಕ ಅದಕ್ಕೆ ಮೊಸಳೆಯ ದೇಹದ ಮೇಲೆ ಒಳ್ಳೆಯ ಹಿಡಿತ ಸಿಕ್ಕಿದೆ. ಹೀಗಾಗಿ ಕೂಡಲೇ ಅದು ಮೊಸಳೆಯನ್ನು ಎಳೆದುಕೊಂಡು ಆಳ ಸಮುದ್ರಕ್ಕೆ ಹೋಗಿದೆ.  

Tap to resize

Latest Videos

undefined

ಒಮ್ಮೆ ಶಾರ್ಕ್ ನೀರಿನ ಮೇಲ್ಮೈನಿಂದ ಕೆಳಗೆ ಕಣ್ಮರೆಯಾಗುತ್ತದೆ, ಮತ್ತೆ ಮೇಲೆ ಬರುವ ಅದು ಮೊಸಳೆಯ ದೇಹದ ಸುತ್ತಲೂ ಸುತ್ತುತ್ತದೆ. ಎಬಿಸಿ ಡರ್ವಿನ್  ಎಂಬುವವರು ಈ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.  ಇದು ನೋಡುಗರಲ್ಲಿ ಕುತೂಹಲವನ್ನುಂಟು ಮಾಡಿದೆ. ಮೊಸಳೆ ಈಗಾಗಲೇ ಸಂತೋಷದ ಸ್ಥಳದಲ್ಲಿ ಇರಲಿಲ್ಲ. ಅಲ್ಲಿ ಎರಡು ಗೆಲುವುಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ಒಬ್ಬರು ಕಾಮೆಂಟ್‌ ಬರೆದಿದ್ದಾರೆ. ಕೆಲವು ವೀಕ್ಷಕರ ಪ್ರಕಾರ, ಶಾರ್ಕ್ ಮೊಸಳೆಯನ್ನು ಬೇಟೆಯಾಡಿರಬಹುದು, ಆದರೆ ಆ ಭಾಗವು ಕ್ಯಾಮೆರಾದಲ್ಲಿ ದಾಖಲಾಗಿಲ್ಲ.

ಈ ದೃಶ್ಯವನ್ನು ಸೆರೆ ಹಿಡಿದ ಆಲಿಸ್ ಬೆಡ್ವೆಲ್ ಅವರು ವೀಡಿಯೋ ಮಾಡುವುದಕ್ಕೂ ಮೊದಲು ತೆಗೆದ ಫೋಟೋಗಳು ಈ ವಾದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.  ಶಾರ್ಕ್‌ಗಳು ಮತ್ತು ಮೊಸಳೆಗಳೆರಡೂ ಪರಭಕ್ಷಕಗಳಾಗಿವೆ ಮತ್ತು ಅವು ಇತರ ಪ್ರಾಣಿಗಳನ್ನು ತಿನ್ನುವುದನ್ನು ಹೆಚ್ಚಾಗಿ ಕಾಣಬಹುದು.  ಆದರೆ ಆಸ್ಟ್ರೇಲಿಯಾದಲ್ಲಿ ಎರಡು ಬೇರೆ ಪ್ರಬೇಧದ ದೊಡ್ಡ ಪರಭಕ್ಷಕಗಳು ಹೀಗೆ ಕಾಣಿಸಿಕೊಂಡಿರುವುದು ಅಸಾಮಾನ್ಯ ವಿಚಾರವಲ್ಲ ಎಂಬುದು ಅಲ್ಲಿನ ಜನರ ಅಭಿಪ್ರಾಯವಾಗಿದೆ. ಡಿಸೆಂಬರ್ 2023 ರಲ್ಲಿ, ಉತ್ತರ ಪ್ರಾಂತ್ಯದಲ್ಲಿ  ಇದೇ ರೀತಿಯ ಘಟನೆಯೊಂದು ನಡೆದಿತ್ತು.  ಮೀನುಗಾರ ಮಹಿಳೆ ಜೆಸ್ಸಿ ಲೀಗಾ ಎಂಬಾಕೆ  ಪೂರ್ವ ಅರ್ನ್ಹೆಮ್ ಲ್ಯಾಂಡ್‌ನಲ್ಲಿ ದೋಣಿಯಲ್ಲಿರುವಾಗಲೇ ಇದೇ ರೀತಿಯ ಘಟನೆಯನ್ನು ನೋಡಿದ್ದರು. ಒಂದೇ ಒಂದು ಮೊಸಳೆಯನ್ನು ಹಲವು ಶಾರ್ಕ್‌ಗಳು ಸುತ್ತುವರೆದಿದ್ದವು. ಅಲ್ಲದೇ ಅವರಲ್ಲೊಂದು ಮೊಸಳೆಯನ್ನು ಕೆಳಗೆ ಎಳೆದೊಯ್ದಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ ಶಾರ್ಕ್‌ಗಳೆಲ್ಲವೂ ಅಲ್ಲಿಂದ ನಾಪತ್ತೆಯಾಗಿದ್ದರು. ಅಲ್ಲದೇ ಮೊಸಳೆಗಳು ಕೂಡ ಶಾರ್ಕ್‌ಗಳನ್ನು ಬೇಟೆಯಾಡುವುದು ಸಾಮಾನ್ಯವಾಗಿದೆ. 

Shark eats a crocodile in Australia pic.twitter.com/wTJKMTFeWP

— AlAudhli  العوذلي ™ (@alaudhli)

 

click me!