ಸೆಕ್ಸ್ ಟಾಯ್‌ನ್ನು ನೋಡಿ ಹೆಣ ಎಂದು ಪೊಲೀಸರು ಬೆಸ್ತು ಬಿದ್ದ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ. ಬಟ್ಟೆ ಇಲ್ಲದ ಹೆಣದಂತೆ ಕಾಣುತ್ತಿದ್ದ ಸೆಕ್ಸ್ ಟಾಯ್‌ವೊಂದು ಥಾಯ್ಲೆಂಡ್‌ನ ಬೀಚ್‌ಗೆ ತೇಲಿ ಬಂದಿದ್ದು, ಇದನ್ನು ನೋಡಿದ ಸಾರ್ವಜನಿಕರು ಗಾಬರಿಗೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೀಚೋಂದರಲ್ಲಿ ವಿವಸ್ತ್ರ ಸ್ಥಿತಿಯಲ್ಲಿ ಹೆಣ್ಣಿನ ಶವವೊಂದು ಬಿದ್ದಿದೆ ಎಂದು ಬೀಚ್‌ನಲ್ಲಿ ಸೆಕ್ಸ್ ಟಾಯ್ಸ್ ನೋಡಿದ ಜನ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಪೊಲೀಸರು ಹತ್ತಿರ ಬಂದು ನೋಡಿದಾಗ ಇದು ಶವವಲ್ಲ ಸೆಕ್ಸ್ ಟಾಯ್ಸ್ ಎಂಬುದು ಗೊತ್ತಾಗಿದೆ.
ಥೈಲ್ಯಾಂಡ್‌ನ ಬ್ಯಾಂಗ್ ಸೇನ್ ಬೀಚ್‌ನಲ್ಲಿ ಈ ಘಟನೆ ನಡೆದಿತ್ತು. ಪೂರ್ವ ಥೈಲ್ಯಾಂಡ್‌ನ ಚೋನ್‌ಬುರಿ ಪ್ರಾಂತ್ಯದ ಮುಯಾಂಗ್ ಚೋನ್‌ಬುರಿ ಜಿಲ್ಲೆಯ ಟಾಂಬೊನ್ ಸೇನ್ ಸುಕ್ ಪ್ರದೇಶದಲ್ಲಿ ಈ ಬೀಚ್ ಇದೆ. ಕಾಲುಗಳು ಮಡಚಿದ ಸ್ಥಿತಿಯಲ್ಲಿ ತಲೆಗೆ ಶರ್ಟೊಂದು ಸುತ್ತಿಕೊಂಡು ತಲೆ ಕಾಣದ ಸ್ಥಿತಿಯಲ್ಲಿ ಈ ಟಾಯ್ಸ್ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಬಂದ ಪೊಲೀಸರು ಇದನ್ನು ನೋಡಿ ಶವಕ್ಕೆ ಕನಿಷ್ಠ ತಲೆಯಾದರೂ ಇದೆಯೋ ಇಲ್ಲವೋ ಎಂದು ಶರ್ಟ್ ತೆಗೆಯಲು ಹೋದಾಗ ಬೆಚ್ಚಿ ಬಿದ್ದಿದ್ದಾರೆ. ಏಕೆಂದರೆ ಅದೊಂದು ಗೊಂಬೆಯಾಗಿತ್ತು ಎಂದು ಸ್ಥಳೀಯ ಮಾಧ್ಯಮ ರಾಗ್ ದಿ ಥೈಗರ್ ವರದಿ ಮಾಡಿದೆ.
ಒಂಟಿ ಜೀವನದ ಸುಖ ತಾತ್ಕಾಲಿಕ, ಆಯಸ್ಸೇ ಕಡಿಮೆಯಾಗುತ್ತೆ ಅನ್ನುತ್ತೆ ಅಧ್ಯಯನ
ಈ ಗೊಂಬೆ ಇಲ್ಲಿಗೆ ತಲುಪುವ ಮೊದಲು ಇದರ ಬಳಕೆದಾರರರು ಇದನ್ನು ಕಾಲುವೆ ಅಥವಾ ನದಿಗೆ ಎಸೆದಿರಬೇಕು. ಇದು ನೀರಿನಲ್ಲಿ ಹರಿಯುತ್ತಾ ಬಂದು ಸಾಗರ ಸೇರಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇತ್ತ ಬೀಚ್‌ನಿಂದ ಈ ಗೊಂಬೆಯನ್ನು ವಶಕ್ಕೆ ಪಡೆದ ಪೊಲೀಸರು, ಅದನ್ನು ಅದರ ಮಾಲೀಕರು ವಾಪಸ್ ಪಡೆಯಲು ಬಯಸಿದ್ದರೆ ಪಡೆದುಕೊಳ್ಳಬಹುದು ಎಂದು ಅದನ್ನು ಸ್ಟೇಷನ್‌ನಲ್ಲೇ ಇರಿಸಿದ್ದಾರಂತೆ. ಆದರೆ ಈ ಗೊಂಬೆ ನನ್ನದು ಎಂದು ಹೇಳಿಕೊಂಡು ಅದನ್ನು ತೆಗೆದುಕೊಳ್ಳಲು ಇದುವರೆಗೆ ಯಾರೂ ಮುಂದೆ ಬಂದಿಲ್ಲ. ಇದು ಸುಮಾರು 45 ಸಾವಿರ ರೂಪಾಯಿ ಮೌಲ್ಯದ ದುಬಾರಿ ಗೊಂಬೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಥೈಗರ್ ವರದಿ ಮಾಡಿದೆ.
ಆದರೆ ಈ ಸುದ್ದಿ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಜನ ಈ ಬಗ್ಗೆ ಕುತೂಹಲದಿಂದ ಜನ ಕಾಮೆಂಟ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಚೋರ್ಬ್ ಜಂಗ್ ಬ್ಯಾಂಗ್ ಸೇನ್ (ಐ ಲವ್ ಬ್ಯಾಂಗ್ ಸೇನ್) ಎಂಬ ಫೇಸ್ಬುಕ್ ಪೇಜೊಂದು ಈ ಗೊಂಬೆಯ ಚಿತ್ರವನ್ನು ಅಪ್ಲೋಡ್ ಮಾಡಿದೆ ಎಂದು ತಿಳಿದು ಬಂದಿದೆ.
ಯಪ್ಪಾ..ಸೆಕ್ಸ್ ಬಳಿಕ ಹುಡುಗರು ಯಾಕೆ ಹೀಗೆಲ್ಲಾ ಮಾತನಾಡ್ತಾರೆ !
ಇದನ್ನು ನೋಡಿ, ಈ ಗೊಂಬೆಯನ್ನು ಬಳಸಿ ಬೇಜಾರಾಗಿ ಹೀಗೆ ಬಿಸಾಕಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗಂತ ಈ ಸೆಕ್ಸ್ ಟಾಯ್‌ಗಳು ಜನರನ್ನು ಗೊಂದಲಕೀಡು ಮಾಡುವುದು ಇದೇ ಮೊದಲೇನಲ್ಲ. ಕಳೆದ ಜೂನ್‌ನಲ್ಲಿ ಜಪಾನ್‌ನಲ್ಲಿ ತುರ್ತು ರಕ್ಷಣಾ ಪಡೆಯ ಡೈವರ್‌ಗಳು ನೀರಿನಲ್ಲಿ ಮಹಿಳೆ ಮುಳುಗೇಳುತ್ತಿದ್ದಾಳೆ ಎಂದು ನದಿಗೆ ಹಾರಿದ್ದರು. ಆದರೆ ಗೊಂಬೆಯ ಸಮೀಪ ಧಾವಿಸಿದ ರಕ್ಷಣಾ ತಂಡಕ್ಕೆ ಅಚ್ಚರಿ ಕಾದಿತ್ತು. ಏಕೆಂದರೆ ಅದೊಂದು ತೇಲುವ ಮನುಷ್ಯ ಗಾತ್ರದ ಗೊಂಬೆಯಾಗಿತ್ತು.
ಸೆಕ್ಸ್ ಟಾಯ್‌ಗಳ ಬಗ್ಗೆ ಭಾರತದಲ್ಲಿ ಎಲ್ಲರಿಗೂ ತಿಳಿದಿರಲು ಸಾಧ್ಯವಿಲ್ಲ. ಪಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವಷ್ಟು ಇವುಗಳು ಭಾರತ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಜನಪ್ರಿಯವಾಗಿಲ್ಲ. ಲೈಂಗಿಕ ಸುಖ ಪಡೆಯಲು ಸಂಗಾತಿ ಇಲ್ಲದವರು, ಸಂಗಾತಿ ಇದ್ದವರು ಕೂಡ ಈ ಸೆಕ್ಸ್ ಟಾಯ್‌ಗಳನ್ನು ಬಳಸುತ್ತಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ