ಇಮ್ರಾನ್‌ ಸಂಪುಟದ 7 ಸಚಿವರು ಉಭಯ ಪೌರತ್ವ ಹೊಂದಿರುವವರು!

By Suvarna NewsFirst Published Jul 20, 2020, 3:22 PM IST
Highlights

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಂಪುಟದಲ್ಲಿರುವ ಸಚಿವರಲ್ಲಿ ಏಳು ಮಂದಿಗೆ ಉಭಯ ಪೌರತ್ವ|  ಸಂಪುಟದಲ್ಲಿರುವ ಚುನಾಯಿತರಲ್ಲದ ಪ್ರತಿನಿಧಿಗಳ ಮಾಹಿತಿ ಬಹಿರಂಗ| ಚುನಾಯಿತರಲ್ಲದ, ಪ್ರಧಾನಿಯವರ ವಿಶೇಷ ಸಹಾಯಕರು

ಇಸ್ಲಾಮಾಬಾದ್(ಜು.20)‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಂಪುಟದಲ್ಲಿರುವ ಸಚಿವರ ಪೈಕಿ ಏಳು ಮಂದಿ ಒಂದೋ ಉಭಯ ಪೌರತ್ವ ಹೊಂದಿರುವವರು ಅಥವಾ ವಿದೇಶವೊಂದರ ಕಾಯಂ ನಿವಾಸಿಗಳು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಒಸಮಾ ಬಿನ್‌ ಲಾಡೆನ್‌ಗೆ ಹುತಾತ್ಮ ಪಟ್ಟ ಕೊಟ್ಟ ಪಾಕ್‌ ಪ್ರಧಾನಿ!

ಸಂಪುಟದಲ್ಲಿರುವ ಚುನಾಯಿತರಲ್ಲದ ಪ್ರತಿನಿಧಿಗಳ ಮಾಹಿತಿ ಬಹಿರಂಗ ಪಡಿಸಬೇಕು ಎಂದು ವಿಪಕ್ಷಗಳ ಒತ್ತಾಯದ ಮೇರೆಗೆ, ಸಂಪುಟದ ವೆಬ್‌ಸೈಟ್‌ನಲ್ಲಿ ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಉಭಯ ಪೌರತ್ವ ಹೊಂದಿರುವವರು ಚುನಾಯಿತರಲ್ಲದ, ಪ್ರಧಾನಿಯವರ ವಿಶೇಷ ಸಹಾಯಕರಾಗಿದ್ದಾರೆ ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ವಿಪರ್ಯಾಸವೆಂದರೆ ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಖುದ್ದು ಇಮ್ರಾನ್‌ ಖಾನ್‌ ಅವರೇ, ವಿದೇಶಿಗರು ಸಂಪುಟದ ಭಾಗವಾಗುವುದನ್ನು ಕಠಿಣವಾಗಿ ವಿರೋಧಿಸಿದ್ದರು.

click me!