ಚೀನಾ, ಪ್ರವಾಹದ ನೀರು ಬಿಡಲು ಡ್ಯಾಂ ಸ್ಫೋಟ!

Published : Jul 20, 2020, 11:00 AM ISTUpdated : Jul 20, 2020, 11:35 AM IST
ಚೀನಾ, ಪ್ರವಾಹದ ನೀರು ಬಿಡಲು ಡ್ಯಾಂ ಸ್ಫೋಟ!

ಸಾರಾಂಶ

ಪ್ರವಾಹದ ನೀರು ಬಿಡಲು ಡ್ಯಾಂ ಸ್ಫೋಟ!| ಪ್ರವಾಹದ ಒತ್ತಡ ತಾಳದೇ ಚೀನಾ ಸರ್ಕಾರದ ಅನಿವಾರ್ಯ ಕ್ರಮ| ಚುಚೆ ನದಿಗೆ ಅಡ್ಡಲಾಗಿದ್ದ ಡ್ಯಾಂ ಸ್ಫೋಟ| ಚೀನಾದ 433 ನದಿಗಳಲ್ಲಿ ಈಗ ಪ್ರವಾಹ!

ಬೀಜಿಂಗ್‌(ಜು.20): ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ ಎಡೆಬಿಡದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಉಕ್ಕೇರಿದ ನದಿಯಿಂದ ಪೂರ್ಣಪ್ರಮಾಣದಲ್ಲಿ ನೀರು ಬಿಟ್ಟರೂ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಅಣಕಟ್ಟೊಂದನ್ನು ಸ್ಫೋಟಿಸಲಾಗಿದೆ.

ಯಾಂಗ್‌ತ್ಸೆ ನದಿಯ ಉಪನದಿಯಾದ ಚುಚೆ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಸೃಷ್ಟಿಯಾಗಿದೆ. ಪ್ರವಾಹದ ಒತ್ತಡವನ್ನು ನಿಯಂತ್ರಿಸಲು ಈ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಅಣೆಕಟ್ಟೊಂದನ್ನು ಸ್ಫೋಟಕ ಬಳಸಿ ಭಾನುವಾರ ಬೆಳಗ್ಗೆ ಧ್ವಂಸಗೊಳಿಸಲಾಗಿದೆ. ಇದರಿಂದಾಗಿ ನೀರಿನ ಮಟ್ಟ2 ಅಡಿಯಷ್ಟುಇಳಿಯುವ ನಿರೀಕ್ಷೆಯಿದೆ.

ಚೀನಾದಲ್ಲಿ ಈ ವರ್ಷ ಅತಿಶಯ ಮಳೆಯಾಗುತ್ತಿದ್ದು, 433 ನದಿಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ವಿಶ್ವದ ಅತಿ ದೊಡ್ಡ ಅಣೆಕಟ್ಟೆಯಾದ ತ್ರೀ ಗಾರ್ಜಸ್‌ ಡ್ಯಾಂನಲ್ಲಿ ಪ್ರವಾಹವು ಸಾಮಾನ್ಯ ಮಟ್ಟಕ್ಕಿಂತ 15 ಮೀ. ಏರಿದ ಕಾರಣ ಕಳೆದ ವಾರ 3 ಫ್ಲಡ್‌ಗೇಟ್‌ ತೆರೆಯಲಾಗಿತ್ತು. ಜೂನ್‌ನಿಂದ ಮಳೆಗೆ ಚೀನಾದಲ್ಲಿ 140 ಜನರು ಮೃತಪಟ್ಟಿದ್ದಾರೆ. 37.89 ಲಕ್ಷ ಜನರು ಬಾಧಿತರಾಗಿದ್ದಾರೆ. 2.24 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅನೇಕ ಊರುಗಳು ಮುಳುಗಡೆ ಆಗವೆ.

ಪ್ರವಾಹ ಸ್ಥಿತಿ ಕೈಮೀರಿದರೆ ಡ್ಯಾಂ ಸ್ಫೋಟ ಮಾಡುವ ನಿರ್ಣಯವನ್ನು ಚೀನಾ 1998ರಲ್ಲೇ ತೆಗೆದುಕೊಂಡಿತ್ತು. ಆಗ ಪ್ರವಾಹದಲ್ಲಿ 2000 ಜನರು ಮೃತಪಟ್ಟು 30 ಲಕ್ಷ ಮನೆ ಧ್ವಂಸವಾಗಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ