₹4000 ಕೋಟಿ ವಂಚನೆ ಕೇಸ್‌ : ಅಮೆರಿಕ ಸಂಸ್ಥೆಗೆ ಸೆಬಿ ನಿರ್ಬಂಧ

Kannadaprabha News   | Kannada Prabha
Published : Jul 05, 2025, 05:32 AM IST
Jane street scam

ಸಾರಾಂಶ

ಷೇರುಪೇಟೆಯಲ್ಲಿ ಕೃತಕ ಏರಿಳಿತ ಸೃಷ್ಟಿಸಿ ಅಕ್ರಮವಾಗಿ 4843 ಕೋಟಿ ರು. ಲಾಭ ಗಳಿಸಿದ ಆರೋಪದ ಮೇರೆಗೆ ಅಮೆರಿಕ ಮೂಲದ ಅಂತಾರಾಷ್ಟ್ರೀಯ ಷೇರು ಟ್ರೇಡಿಂಗ್‌ ಕಂಪನಿ ಜೇನ್‌ ಸ್ಟ್ರೀಟ್‌ನ ಸಹಸಂಸ್ಥೆಗಳ ಮೇಲೆ ಸೆಬಿ ನಿರ್ಬಂಧ ವಿಧಿಸಿದೆ.

ನವದೆಹಲಿ: ಷೇರುಪೇಟೆಯಲ್ಲಿ ಕೃತಕ ಏರಿಳಿತ ಸೃಷ್ಟಿಸಿ ಅಕ್ರಮವಾಗಿ 4843 ಕೋಟಿ ರು. ಲಾಭ ಗಳಿಸಿದ ಆರೋಪದ ಮೇರೆಗೆ ಅಮೆರಿಕ ಮೂಲದ ಅಂತಾರಾಷ್ಟ್ರೀಯ ಷೇರು ಟ್ರೇಡಿಂಗ್‌ ಕಂಪನಿ ಜೇನ್‌ ಸ್ಟ್ರೀಟ್‌ನ ಸಹಸಂಸ್ಥೆಗಳ ಮೇಲೆ ಭಾರತೀಯ ಷೇರುಪೇಟೆ ನಿಯಂತ್ರಣ ಸಂಸ್ಥೆಯಾದ ಸೆಬಿ ನಿರ್ಬಂಧ ವಿಧಿಸಿದೆ. ಇಂಡೆಕ್ಸ್‌ ಟ್ರೇಡಿಂಗ್‌ನಲ್ಲಿ ಭಾರೀ ಅಕ್ರಮ ನಡೆಸಿದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ.

ಸೆಬಿ ನಿರ್ಬಂಧದ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೆ ಭಾರತೀಯ ಷೇರುಮಾರುಕಟ್ಟೆಯಲ್ಲಿ ಜೇನ್‌ ಸ್ಟ್ರೀಟ್‌ ಕಂಪನಿಯು ಭಾರತೀಯ ಸೆಕ್ಯುರಿಟೀಸ್‌ ಮಾರುಕಟ್ಟೆಯಿಂದ ದೂರವುಳಿಯಬೇಕಿದೆ. ಅಲ್ಲದೆ, ತಾನು ಲಾಭವಾಗಿ ಗಳಿಸಿದ ಹಣವನ್ನು ಎಸ್ಕ್ರೋ ಖಾತೆಯಲ್ಲಿ ಇಡುವಂತೆ ಸೂಚಿಸಲಾಗಿದೆ.

ಆರೋಪ ಏನು?: ಜೇನ್‌ ಸ್ಟ್ರೀಟ್‌ನ ಅಂಗ ಸಂಸ್ಥೆಗಳು ಜ.1,2023 ಮತ್ತು ಮಾ.31, 2025ರ ನಡುವೆ ಇಂಡೆಕ್ಸ್‌ ಆಪ್ಷನ್ಸ್‌, ಫ್ಯೂಚರ್‌ ಟ್ರೇಡ್‌ ಮೂಲಕ ಅಕ್ರಮವಾಗಿ ಸುಮಾರು 42,289 ಕೋಟಿ ರು.ನಷ್ಟು ಲಾಭಗಳಿಸಿದೆ. ಭಾರೀ ಮೊತ್ತದಲ್ಲಿ ಕ್ಯಾಶ್‌ ಮತ್ತು ಫ್ಯೂಚರ್‌ ಮಾರುಕಟ್ಟೆಯಲ್ಲಿ ಭಾರೀ ಖರೀದಿ ಮತ್ತು ಮಾರಾಟ ನಡೆಸಿ ಇಂಡೆಕ್ಸ್‌ ಅನ್ನು ಕೃತಕವಾಗಿ ಮೇಲೇರಿಸಿ, ಇಳಿಸಿ ಲಾಭ ಮಾಡಿಕೊಂಡಿದೆ ಎಂಬ ಆರೋಪ ಸಂಸ್ಥೆ ಮೇಲಿದೆ. ಈ ಮೂಲಕ ಅಕ್ರಮ ಮತ್ತು ನ್ಯಾಯಸಮ್ಮತವಲ್ಲದ ವಹಿವಾಟು ಕ್ರಮಗಳ ನಿಯಮಗಳ ಉಲ್ಲಂಘನೆ, ಮಾರುಕಟ್ಟೆಯ ಭಾಗೀದಾರರು ಅದರಲ್ಲೂ ರಿಟೇಲ್‌ ಟ್ರೇಡರ್‌ಗಳ ದಾರಿ ತಪ್ಪಿಸಿದ ಆರೋಪ ಸಂಸ್ಥೆ ಮೇಲಿದೆ.

ಅವರಿಂದ ಮಾತ್ರ ಸಾಧ್ಯ..' ಜಿಯೋ-ಬ್ಲ್ಯಾಕ್‌ರಾಕ್‌ ಸ್ಟಾಕ್‌ ಬ್ರೋಕಿಂಗ್‌ ಲೈಸೆನ್ಸ್‌ ಬಗ್ಗೆ ಏನಂದ್ರು ಜೀರೋಧಾದ ನಿತಿನ್‌ ಕಾಮತ್‌?

ಸಾಮಾನ್ಯವಾಗಿ ತಾವು ಮಾಡಿದ ಉದ್ದಿಮೆಯಲ್ಲಿ ಮತ್ತೊಬ್ಬ ಪ್ರತಿಸ್ಪರ್ಧಿ ಬಂದಾಗ ಅಸೂಯೆ ಸಹಜ. ಅದರಲ್ಲೂ ಪ್ರತಿಸ್ಪರ್ಧಿ ತಮಗಿಂತ ದೊಡ್ಡವನಾಗಿದ್ದರೆ ತಮ್ಮ ಉದ್ಯಮ ಹಾಳಾಗಿ ಹೋಗುತ್ತದೆ ಅನ್ನೋ ಚಿಂತೆಯೇ ಹೆಚ್ಚು. ಆದರೆ, ಸ್ಟಾಕ್‌ ಬ್ರೋಕಿಂಗ್‌ ವ್ಯವಹಾರದಲ್ಲಿರುವ ಜೀರೋಧಾದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಿತಿನ್‌ ಕಾಮತ್‌, ಇತ್ತೀಚೆಗೆ ಸೆಬಿಯಿಂದ ಸ್ಟಾಕ್‌ ಬ್ರೋಕಿಂಗ್‌ ಲೈಸೆನ್ಸ್‌ ಪಡೆದುಕೊಂಡಿರುವ ರಿಲಯನ್ಸ್‌ ಸಮೂಹದ ಜಿಯೋ ಬ್ಲ್ಯಾಕ್‌ರಾಕ್‌ನ ಜಂಟಿ ಉದ್ಯಮವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ಜಿಯೋ-ಬ್ಲ್ಯಾಕ್‌ರಾಕ್ ಸ್ಟಾಕ್ ಬ್ರೋಕಿಂಗ್ ಲೈಸೆನ್ಸ್‌ ಪಡೆದಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆಯಾಗಿ, ಜೆರೋಧಾ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಭಾರತದ ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಯ ಬಗ್ಗೆ ಆಶಾವಾದ ಹಾಗೂ ಎಚ್ಚರಿಕೆ ಎರಡನ್ನೂ ಒತ್ತಿ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದೊಂದು ಅದ್ಭುತ ಸುದ್ದಿ ಎಂದು ಜಿಯೋ-ಬ್ಲ್ಯಾಕ್‌ರಾಕ್ ಸ್ಟಾಕ್ ಬ್ರೋಕಿಂಗ್ ಲೈಸೆನ್ಸ್‌ ಪಡೆದ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತೀಯ ಮಾರುಕಟ್ಟೆಗಳಿಗೆ ದೊಡ್ಡ ಸಮಸ್ಯೆ ಎಂದರೆ ಭಾಗವಹಿಸುವಿಕೆಯಲ್ಲಿ ವ್ಯಾಪಕತೆಯ ಕೊರತೆ. ನಾವು ಹೆಚ್ಚಾಗಿ ಅಗ್ರ 10 ಕೋಟಿ ಭಾರತೀಯರಿಗೆ ಸೀಮಿತರಾಗಿದ್ದೇವೆ. ಅದನ್ನು ಮೀರಿ ಯಾರಾದರೂ ಮಾರುಕಟ್ಟೆಗಳನ್ನು ವಿಸ್ತರಿಸಬಹುದಾದರೆ, ಅದು ಬಹುಶಃ ಜಿಯೋ ಮಾತ್ರ, ಅದರ ಎಲ್ಲಾ ವಿತರಣಾ ಶಕ್ತಿಯೊಂದಿಗೆ ಕೆಲಸ ಮಾಡಬಹುದು' ಎಂದು ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!