ಎಫ್‌-35 ರಿಪೇರಿಗೆ ಇಂದು ಬ್ರಿಟನ್‌ ತಜ್ಞರ ಆಗಮನ

Kannadaprabha News   | Kannada Prabha
Published : Jul 05, 2025, 04:49 AM IST
F 35B Lightning II fighter aircraft

ಸಾರಾಂಶ

ಕಳೆದ 20 ದಿನಗಳಿಂದ ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಬ್ರಿಟನ್‌ನ ಅತ್ಯಾಧುನಿಕ ಯುದ್ಧ ವಿಮಾನವನ್ನು ರಿಪೇರಿ ಮಾಡಲು ಶನಿವಾರ ಬ್ರಿಟನ್‌ನಿಂದ 40 ತಂತ್ರಜ್ಞರು ಆಗಮಿಸಲಿದ್ದಾರೆ.

ತಿರುವನಂತಪುರ: ಕಳೆದ 20 ದಿನಗಳಿಂದ ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಬ್ರಿಟನ್‌ನ ಅತ್ಯಾಧುನಿಕ ಯುದ್ಧ ವಿಮಾನವನ್ನು ರಿಪೇರಿ ಮಾಡಲು ಶನಿವಾರ ಬ್ರಿಟನ್‌ನಿಂದ 40 ತಂತ್ರಜ್ಞರು ಆಗಮಿಸಲಿದ್ದಾರೆ.

 ಇವರು ಎಫ್‌-35 ಯುದ್ಧ ವಿಮಾನದ ಕಡೇ ಯತ್ನವನ್ನು ಮಾಡಲಿದ್ದಾರೆ. ಒಂದು ವೇಳೆ ಇದೂ ವಿಫಲವಾದರೆ, ವಿಮಾನದ ಬಿಡಿ ಭಾಗಗಳನ್ನು ಬೇರ್ಪಡಿಸಿ ಏರ್‌ ಲಿಫ್ಟ್‌ ಮಾಡಲಿದ್ದಾರೆ.

ಜೂ.14ರಂದು ಹಿಂದೂಮಹಾಸಾಗರದಲ್ಲಿ ಭಾರತೀಯ ಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿ ಎಫ್‌-35ಬಿ ಬ್ರಿಟನ್‌ಗೆ ತೆರಳುವಾಗ ಇಂಧನ ಖಾಲಿ ಎಂದು ಹೇಳಿ ತಿರುವನಂತಪುರದಲ್ಲಿ ಇಳಿಸಿತ್ತು. ಆ ಬಳಿಕ ತಾಂತ್ರಿಕ ದೋಷಕ್ಕೊಳಗಾಗಿ ತಿರುವನಂತಪುರದಲ್ಲಿಯೇ ಉಳಿಯಬೇಕಾಯಿತು. ವಿಮಾನದ ತಂತ್ರಜ್ಞಾನ ಕಳವಾಗಬಹುದು ಎಂಬ ಭೀತಿಯಿಂದಾಗಿ ಭಾರತೀಯ ವಾಯುಪಡೆಯವರಿಂದ ರಿಪೇರಿಗೆ ಬ್ರಿಟನ್‌ ಒಲ್ಲೆಯೆಂದಿತ್ತು.

ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಚಿಂತನೆ

ತಿರುವನಂತಪುರಂ: ಬ್ರಿಟಿಷ್ ರಾಯಲ್ ನೇವಿಯ ಎಫ್-35 ಬಿ ಯುದ್ಧ ವಿಮಾನವು ಹೈಡ್ರಾಲಿಕ್ ದೋಷ ಮತ್ತು ಇಂಧನ ಖಾಲಿಯಾದ ಕಾರಣದಿಂದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಲ್ಯಾಂಡಿಂಗ್ ಆಗಿತ್ತು. 10 ದಿನಗಳಾದರೂ ಕೂಡ ಯುದ್ಧ ವಿಮಾನವು ತಿರುವನಂತಪುರಂನಲ್ಲೇ ಇದ್ದು, ಈಗ ಅದಕ್ಕೆ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿತ್ತು

ವಿಮಾನವು ನಿಲ್ದಾಣದ ವಿಐಪಿ ಬೇ 4 ರಲ್ಲಿ ನಿಂತಿದ್ದು, ಈಗಾಗಲೇ ಅಧಿಕಾರಿಗಳು ಅದರ ಪಾರ್ಕಿಂಗ್ ಶುಲ್ಕವನ್ನು ಲೆಕ್ಕ ಹಾಕಲು ಪ್ರಕ್ರಿಯೆ ಆರಂಭಿಸಿದ್ದಾರೆ. ಆದರೆ ನಿಖರ ಮೊತ್ತವನ್ನೂ ನಿಗದಿ ಮಾಡಲಾಗಿಲ್ಲ. ಸದ್ಯ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಕಡಿಮೆ ಇರುವ ಕಾರಣ, ಈ ಜೆಟ್‌ನ ನೆಲೆ ಪ್ರಾರಂಭಿಕ ವಿಮಾನ ಚಲನೆಗೆ ಅಡ್ಡಿಯಾಗಿಲ್ಲ.

ಸಾಮಾನ್ಯವಾಗಿ ಪಾರ್ಕಿಂಗ್ ಶುಲ್ಕವನ್ನು ವಿಮಾನದ ತೂಕದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಆದರೆ ಎಫ್-35 ಬಿ ಹಗುರವಾದ ಮತ್ತು ನಿಯಮಿತ ನಾಗರಿಕ ಹಾರಾಟಕ್ಕೆ ಸೇರದ ವಿಮಾನವಾಗಿರುವುದರಿಂದ ಈ ಪ್ರಕರಣದಲ್ಲಿ ವಿಶಿಷ್ಟ ಮೌಲ್ಯಮಾಪನವು ಅನ್ವಯಿಸಬಹುದು.  

ದೋಷವನ್ನು ಸರಿಪಡಿಸಲು ಯುಕೆ ಮತ್ತು ಯುಎಸ್‌ನ ಎಂಜಿನಿಯರ್‌ಗಳ ತಂಡವು  ತಿರುವನಂತಪುರಂಗೆ ಆಗಮಿಸಲಿದ್ದು, ವಿಮಾನ ದುರಸ್ತಿ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಆದರೆ ಸಮಸ್ಯೆ ಬಗೆಹರಿಯದಿದ್ದರೆ, ಜೆಟ್ ಅನ್ನು ಸರಕು ಸಾಗಣೆ ವಿಮಾನದ ಮೂಲಕ ಮರಳಿ ತೆಗೆದುಕೊಂಡು ಹೋಗಲು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಾಗಬಹುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!