ಗುಡ್‌ನ್ಯೂಸ್: ಲಾಮಾಗಳಲ್ಲಿ ಕೊರೋನಾ ಪ್ರತಿಕಾಯ ಪತ್ತೆ!

By Suvarna NewsFirst Published Jul 14, 2020, 3:22 PM IST
Highlights

ದ.ಅಮೆರಿಕದ ಲಾಮಾಗಳಲ್ಲಿ ಕೊರೋನಾ ಪ್ರತಿಕಾಯ ಪತ್ತೆ|  ಮಾಂಸಕ್ಕಾಗಿ ಬಳಸುವ ಒಂಟೆ ಜಾತಿಯ ಲಾಮಾ ಎಂಬ ಪ್ರಾಣಿ| ಅಭಿವೃದ್ಧಿಪಡಿಸಿದರೆ ಕೊರೋನಾ ಚಿಕಿತ್ಸೆಗೆ ಬಳಸಬಹುದು 

ಲಂಡನ್(ಜು.14):  ದಕ್ಷಿಣ ಅಮೆರಿಕದಲ್ಲಿ ಮಾಂಸಕ್ಕಾಗಿ ಬಳಸುವ ಒಂಟೆ ಜಾತಿಯ ಲಾಮಾ ಎಂಬ ಪ್ರಾಣಿಗಳಲ್ಲಿ ಕೊರೋನಾ ವೈರಸ್ಸನ್ನು ನಿಷ್ಕ್ರಿಯಗೊಳಿಸುವ ಎರಡು ರೀತಿಯ ಪ್ರತಿಕಾಯಗಳು ಪತ್ತೆಯಾಗಿವೆ.

ಇವುಗಳನ್ನು ಅಭಿವೃದ್ಧಿಪಡಿಸಿದರೆ ಕೊರೋನಾ ಚಿಕಿತ್ಸೆಗೆ ಬಳಸಬಹುದು ಎಂದು ಈ ಕುರಿತು ಅಧ್ಯಯನ ನಡೆಸಿದ ಬ್ರಿಟನ್ನಿನ ರೋಸಲಿಂಡ್‌ ಫ್ರಾಂಕ್ಲಿನ್‌ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಬಂಧ ಪ್ರಕಟಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೆಂಡ್ತಿ, ಪುತ್ರಿಗೆ ಕೊರೋನಾ ಪಾಸಿಟಿವ್ ದೃಢ

ಲಾಮಾಗಳಲ್ಲಿ ಕಂಡುಬಂದಿರುವ ಎರಡು ಅತ್ಯಂತ ಸಣ್ಣ ಪ್ರತಿಕಾಯಗಳು ಕೊರೋನಾ ವೈರಸ್‌ನಲ್ಲಿರುವ ಪ್ರೋಟೀನ್‌ ಕೋಶಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿ ಹೊಂದಿವೆ. ಕೊರೋನಾದಿಂದ ಗುಣಮುಖರಾದ ಮನುಷ್ಯರಲ್ಲಿ ಸಿಗುವ ಆ್ಯಂಟಿಬಾಡಿಗಳಿಗಿಂತ ಇವು ಚಿಕ್ಕದಾಗಿಯೂ ಹೆಚ್ಚು ಪರಿಣಾಮಕಾರಿಯಾಗಿಯೂ ಇವೆ ಎಂದು ವಿಜ್ಞಾನಿಗಳು ಹೇಳಿದ್ದು, ಈ ಪ್ರತಿಕಾಯಗಳಿಗೆ ಆ್ಯಂಟಿಬಾಡಿ ಎನ್ನುವುದರ ಬದಲು ನ್ಯಾನೋಬಾಡಿ ಎಂದು ಕರೆದಿದ್ದಾರೆ.

click me!