
ನವದೆಹಲಿ(ಅ.28); ಸೌದಿ ಆರೆಬಿಯಾ ಸದ್ದಿಲ್ಲದೆ ಪಾಕಿಸ್ತಾನ ಸರಿಯಾದ ಏಟು ನೀಡಿದೆ. ಪಾಕಿಸ್ತಾನ ನಕ್ಷೆಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ ತೆಗೆದು ಹಾಕಿದೆ. ಜಿ-20 ಸಮ್ಮಿಟ್‌ಗಾಗಿ ಸೌದಿ ಅರೆಬಿಯಾ ಬಿಡುಗಡೆ ಮಾಡಿರುವ ಹೊಸ ಮ್ಯಾಪ್‌ನಲ್ಲಿ ಗಿಲ್ಗಿಟ್, ಬಾಲ್ಟಿಸ್ತಾನ ಹಾಗೂ ಪಾಕ್ ಆಕ್ರಮಿತಿ ಕಾಶ್ಮೀರ ತೆಗೆದುಹಾಕಿ ಹೊಸ ನಕ್ಷ ಬಿಡುಗಡೆ ಮಾಡಿದೆ.
'ನಮ್ಮನ್ನು ಪಾಕ್ ಪ್ರಾಣಿಗಳಂತೆ ನೋಡ್ತಿದೆ' ಗಳಗಳನೇ ಅತ್ತ POK ಹೋರಾಟಗಾರ!
ಸೌದಿ ಅರೆಬಿಯಾ ತೆಗೆದುಕೊಂಡು ಈ ಮಹತ್ವದ ನಿರ್ಧಾರದ ಕುರಿತು ಪಾಕ್ ಆಕ್ರಮಿತ ಕಾಶ್ಮೀರದ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲ ಇದು ಸೌದರಿ ಅರೆಬಿಯಾ ದೀಪಾವಳಿ ಹಬ್ಬಕ್ಕೆ ಭಾರತಕ್ಕೆ ನೀಡಿದ ಉಡುಗೊರೆ ಎಂದು ಅಮ್ಜದ್ ಅಯೂಬ್ ಹೇಳಿದ್ದಾರೆ.
ನಮ್ಮ ಜಾಗ, ಪಾಕಿಸ್ತಾನದ ಅತಿಕ್ರಮಣ, ಚೀನಾದ ಅಣೆಕಟ್ಟು, ಬೌದ್ಧ ಶಿಲ್ಪಗಳು ಅನಾಥ!
ಸೌದಿ ಮಾಧ್ಯಮ ವರದಿಗಳ ಪ್ರಕಾರ, ಸೌದಿ ಅರೇಬಿಯಾದಲ್ಲಿ ನವೆಂಬರ್ 21 ಹಾಗೂ 22 ರಂದು ಜಿ -20 ಶೃಂಗಸಭೆಯನ್ನು ನಡೆಯಲಿದೆ. ಇದಕ್ಕಾಗಿ ಸೌದಿ ಅರೆಬಿಯಾ 20 ರಿಯಾಲ್ ನೋಟುಗಳನ್ನು ಬಿಡುಗಡೆ ಮಾಡಲಿದೆ. ಈ ನೋಟಿನಲ್ಲಿ ಪ್ರದರ್ಶಿಸಿರುವ ವಿಶ್ವ ನಕ್ಷೆಯಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗಗಳಾಗಿ ತೋರಿಸಿಲ್ಲ ಎಂದು ವರದಿಯಲ್ಲಿ ಹೇಳಿದೆ.
ಸೌದಿ ಅರೆಬಿಯಾದ ಈ ನಡೆ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ ತರಲಿದೆ ಎಂದು ಸೌದಿ ಮಾಧ್ಯಮಗಳು ವರದಿ ಮಾಡಿವೆ. ನವೆಂಬರ್ 15 ರಂದು ಪಾಕಿಸ್ತಾನ ಗಿಲ್ಗಿಟ್ -ಬಾಲ್ಟಿಸ್ತಾನ್ ವಿಧಾನಸಭೆ ಚುನಾವಣೆ ನಡೆಸಲು ನಿರ್ಧರಿಸಿದೆ. ಇದಕ್ಕೆ ವಿದೇಶಾಂಗ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ ಭಾರತದ ಅಂಗ ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ