ನಗೆಪಾಟಲೀಗೀಡಾದ ಪಾಕ್: ರಾಯಭಾರಿಯೇ ಇಲ್ಲದ ಫ್ರಾನ್ಸ್‌ನಿಂದ ರಾಯಭಾರಿ ಕರೆಸಿಕೊಳ್ಳಲು ನಿರ್ಣಯ!

Published : Oct 27, 2020, 08:37 PM ISTUpdated : Oct 27, 2020, 08:42 PM IST
ನಗೆಪಾಟಲೀಗೀಡಾದ ಪಾಕ್: ರಾಯಭಾರಿಯೇ ಇಲ್ಲದ ಫ್ರಾನ್ಸ್‌ನಿಂದ ರಾಯಭಾರಿ ಕರೆಸಿಕೊಳ್ಳಲು ನಿರ್ಣಯ!

ಸಾರಾಂಶ

ಪಾಕಿಸ್ತಾನ ಮತ್ತೆ ನಗೆಪಾಟಲಿಗೀಡಾಗಿದೆ. ಪಾಕಿಸ್ತಾನ ನಾಷ್ಯನಲ್ ಅಸೆಂಬ್ಲಿಯಲ್ಲಿ ನಡೆದ ಸತತ ಚರ್ಚೆ ಇದೀಗ ಸದ್ದು ಮಾಡುತ್ತಿದೆ. ನ್ಯಾಷನಲ್ ಅಸೆಂಬ್ಲಿ ಸರ್ವಾನುಮತದಿಂದ ಫ್ರಾನ್ಸ್‌ನಿಂದ ಪಾಕಿಸ್ತಾನ ರಾಯಭಾರಿ ವಾಪಸ್ ಕರೆಯಿಸಿಕೊಳ್ಳುವುದಕ್ಕೆ ನಿರ್ಣಯ ಮಾಡಲಾಗಿದೆ. ಆದರೆ ಫ್ರಾನ್ಸ್‌ನಲ್ಲಿ ಪಾಕಿಸ್ತಾನ ರಾಯಭಾರಿಯೇ ಇಲ್ಲ ಅನ್ನೋದು ವಿಚಾರ ಅಸೆಂಬ್ಲಿಗೆ ತಿಳಿದೇ ಇಲ್ಲ. 

ಪಾಕಿಸ್ತಾನ(ಅ.27):  ಫ್ರಾನ್ಸ್ ಅಧ್ಯಕ್ಷರ ಧರ್ಮನಿಂದನೆ ವಿರುದ್ಧ ಪಾಕಿಸ್ತಾನ  ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯ ಗಂಭೀರತೆಯನ್ನು ವಿಶ್ವಕ್ಕೆ ಸಾರಲು ಹೊರಟ ಪಾಕಿಸ್ತಾನ ನಗೆಪಾಟಲಿಗೀಡಾಗಿದೆ. ಧರ್ಮನಿಂದನೆಯ ವಿರುದ್ಧ ಪ್ರತಿಭಟನೆಯ ಭಾಗವಾಗಿ ಪಾಕಿಸ್ತಾನ ರಾಷ್ಟೀಯ ಅಸೆಂಬ್ಲಿ ಸರ್ವಾನುಮತದಿಂದ, ಫ್ರಾನ್ಸ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ವಾಪಸ್ ಕರೆಸಿಕೊಳ್ಳಲು ನಿರ್ಣಯ ಮಾಡಲಾಗಿದೆ. ಆದರೆ ಫ್ರಾನ್ಸ್‌ನಲ್ಲಿ ಪಾಕಿಸ್ತಾನ ರಾಯಭಾರಿಯೇ ಇಲ್ಲ ಅನ್ನೋ ವಿಚಾರ ಅಸೆಂಬ್ಲಿಯ ಒಬ್ಬಿರಿಗೂ ತಿಳಿದೇ ಇಲ್ಲ. 

ಉಗ್ರರ ಪೋಷಣೆ ನಿಲ್ಲಿಸಲು ಪಾಕ್ ವಿಫಲ; ಗ್ರೇ ಪಟ್ಟಿಯಲ್ಲಿ ಪಾಕಿಸ್ತಾನ ವಿಲ ವಿಲ!

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಸದ್ಯ ಯಾವುದೇ ಅಧಿಕಾರಿ ಇಲ್ಲ. 3 ತಿಂಗಳ ಹಿಂದೆ ಫ್ರಾನ್ಸ್‌ನಲ್ಲಿದ್ದ ಪಾಕ್ ರಾಯಭಾರಿ ಮೊಯಿನ್ ಉಲ್ ಹಕ್ ಅವರನ್ನು ಚೀನಾಗೆ ವರ್ಗಾವಣೆ ಮಾಡಲಾಗಿತ್ತು.  ಬಳಿಕ ಫ್ರಾನ್ಸ್‌ಗೆ ಯಾವುದೇ ರಾಯಭಾರಿ ನೇಮಕ ಮಾಡುವಲ್ಲಿ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಹಿಂದೇಟು ಹಾಕಿತ್ತು. ಆದರೆ ಇದ್ಯಾವುದರ ಪರಿವೇ ಇಲ್ಲದೆ ಅಸೆಂಬ್ಲಿ ಗಂಭೀರ ಚರ್ಚೆ, ಕಾಲಹರಣ ಮಾಡಿ ಸರ್ಕಾರಕ್ಕೆ ರಾಯಭಾರಿ ವಾಪಸ್ ಕರೆಸಿಕೊಳ್ಳಲು ಆಗ್ರಹಿಸಿದೆ.

ಪಾಕ್‌ ಸೇನೆಯಿಂದ ಹೈಡ್ರಾಮಾ:ಸಿಡಿದೆದ್ದ ಪೊಲೀಸರು!

ವಿಶೇಷ ಅಂದರೆ ಅಸೆಂಬ್ಲಿಯಲ್ಲಿ ನಡೆದ ಚರ್ಚೆ ಹಾಗೂ ಸರ್ವಾನುಮತದ ನಿರ್ಣಯದಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಶಿ ಕೂಡ ಹಾಜರಿದ್ದರು. ಫ್ರಾನ್ಸ್ ರಾಯಭಾರಿ ಹುದ್ದೆ ಖಾಲಿ ಇರುವ ಕುರಿತ ಮಾಹಿತಿ ಇದ್ದರೂ, ಅಸೆಂಬ್ಲಿ ಚರ್ಚೆಯಲ್ಲಿ ಮಾಹಿತಿ ಬಹಿರಂಗ ಪಡಿಸಲಿಲ್ಲ. ಫ್ರಾನ್ಸ್‌ನಲ್ಲಿನ ರಾಜತಾಂತ್ರಿಕ ಕಾರ್ಯಗಳನ್ನು ರಾಯಭಾರಿ ಕಚೇರಿ ಉಪಮುಖ್ಯಸ್ಥ ಮೊಹಮ್ಮದ್ ಅಮ್ಜದ್ ಅಜೀಜ್ ನೋಡಿಕೊಳ್ಳುತ್ತಿದ್ದಾರೆ ಎಂದು ಪಾಕ್ ಮಾಧ್ಯಮಕ್ಕೆ ಪಾಕ್ ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ