ಲಕ್ಕುಂಡಿಗೂ ಮೊದಲು ಶುರುವಾಗಿತ್ತು ನಿಧಿ ಶೋಧ, 5 ವರ್ಷ ಬಳಿಕ ಸೌದಿಗೆ ಸಿಕ್ತು $2.5 ಟ್ರಿಲಿಯನ್ ಸಂಪತ್ತು

Published : Jan 27, 2026, 06:15 PM IST
saudi arabia treasure

ಸಾರಾಂಶ

ಲಕ್ಕುಂಡಿಗೂ ಮೊದಲು ಶುರುವಾಗಿತ್ತು ನಿಧಿ ಶೋಧ, ಕಳೆದ ಐದು ವರ್ಷಗಳ ಸತತ ನಿಧಿ ಶೋಧದಲ್ಲಿ ಸೌದಿ ಅರೇಬಿಯಾ ಇದೀಗ ಅಮೆರಿಕ, ಚೀನಾಗೆ ಠಕ್ಕರ್ ನೀಡಲು ಮುಂದಾಗಿದೆ. ಕಾರಣ ಬರೋಬ್ಬರಿ 2.5 ಟ್ರಿಯನ್ ಅಮೆರಿಕನ್ ಡಾಲರ್ ಸಂಪತ್ತು ಪತ್ತೆಯಾಗಿದೆ. 

ಸೌದಿ ಅರೆಬಿಯಾ (ಜ.27) ಕರ್ನಾಟಕದ ಲಕ್ಕುಂಡಿಯಲ್ಲಿ ಶತ ಶತಮಾನಗಳ ಹಳೆಯ ಚಿನ್ನ ಸೇರಿದಂತೆ ಅಮೂಲ್ಯ ಸಂಪತ್ತು ಪತ್ತೆಯಾಗಿ ದೇಶದ ಗಮನಸೆಳೆದಿದೆ. ಲಕ್ಕುಂಡಿಯಲ್ಲಿ ಇದೀಗ ಸತತ ಉತ್ಖನನ ನಡೆಯುತ್ತಿದ್ದು, ಸಾವಿರಾರು ವರ್ಷ ಹಳೇ ನಾಗನ ಶಿಲ್ಪ, ದೇವಸ್ಥಾನಗಳ ಕುರುಹು, ಲೋಹಗಳು ಸೇರಿದಂತೆ ಹಲವು ಇತಿಹಾಸ ವಸ್ತುಗಳು ಪತ್ತೆಯಾಗಿದೆ. ಲಕ್ಕುಂಡಿ ಉತ್ಖನನ ಎರಡನೇ ವಾರವೂ ಮುಂದುವರಿದಿದೆ. ಆದರೆ ಲಕ್ಕುಂಡಿಗೂ ಮೊದಲು ಸೌದಿ ಅರೆಬಿಯಾ ನಿಧಿ ಶೋಧನೆ ಕಾರ್ಯ ಆರಂಭಿಸಿತ್ತು. ಬರೋಬ್ಬರಿ 5 ವರ್ಷಗಳ ಕಾಲ ಸತತ ನಿಧಿ ಶೋಧನೆ ಮಾಡಿದ ಸೌದಿ ಅರೆಬಿಯಾಗೆ ಇದೀಗ ಬರೋಬ್ಬರಿ 2.5 ಟ್ರಿಲಿಯನ್ ಅಮೆರಿಕನ್ ಡಾಲರ್ ಸಂಪತ್ತು ಪತ್ತೆಯಾಗಿದೆ.

ಸತತ ಪ್ರಯತ್ನದಿಂದ ನಿದಿ ಶೋಧಿಸಿದ ಸೌದಿ

ಸೌದ ಅರೇಬಿಯಾ ಭೂಮಿಯೊಳಗೆ ಇತಿಹಾಸದಲ್ಲಿ ಹುದುಗಿದ ಚಿನ್ನ ಹುಡುಕುವ ಪ್ರಯತ್ನ ಮಾಡಿಲ್ಲ. ಅಷ್ಟಕ್ಕೂ ಸೌದಿ ಅರೆಬಿಯಾಗೆ ಭಾರತದ ರೀತಿಯ ಇತಿಹಾಸವೂ ಇಲ್ಲ. ಆದರೆ ಸೌದಿ ಅರೇಬಿಯಾ ಭೂಮಿಯೊಳಗಿರುವ ಖನಿಜ ಸಂಪತ್ತು ಹುಡುಕಾಟದಲ್ಲಿ ಯಶಸ್ವಿಯಾಗಿದೆ. ಕಳೆದ 5 ವರ್ಷದ ಶೋಧೆನೆಯಲ್ಲಿ ಸೌದಿ ಅರೇಬಿಯಾ ಒಟ್ಟು 2.5 ಟ್ರಿಲಿಯನ್ ಅಮೆರಿಕನ್ ಡಾಲರ್ ಅಪರೂಪದ ಭೂಮಿ ಖನಿಜ ಸಂಪತ್ತು (rare earth minerals) ಪತ್ತೆ ಹಚ್ಚಿದೆ. ಇದು ಅಮೆರಿಕ ಹಾಗೂ ಚೀನಾಗಿಂತ ದಪ್ಪುಟ್ಟಾಗಿದೆ. ಇದೇ ಚೀನಾಗೆ ತಲೆನೋವಾಗಿ ಪರಿಣಮಿಸಿದೆ.

ಅಪರೂಪದ ಖನಿಜ ಸಂಪತ್ತಿನಲ್ಲಿ ಚೀನಾ ಪ್ರಾಬಲ್ಯ

ವಿಶ್ವದಲ್ಲಿ ಅತೀ ಹೆಚ್ಚು ಅಪರೂಪದ ಖನಿಜ ಸಂಪತ್ತು ಹೊಂದಿದೆ ದೇಶ ಚೀನಾ. ವಿಶ್ವದಲ್ಲೇ ಚೀನಾ ಶೇಕಡ 90 ರಷ್ಟು ಅಪರೂಪದ ಖನಿಜ ಸಂಪತ್ತು ಹೊಂದಿದ ರಾಷ್ಟ್ರ. ನಂತ್ರದ ಸ್ಥಾನ ಅಮೆರಿಕ. ಈ ಎರಡು ದೇಶಗಳು ಮೇಲೆ ಇತರ ಎಲ್ಲಾ ದೇಶಗಳು ಅವಲಂಬಿತವಾಗಿದೆ. ಈ ಪ್ರಾಬಲ್ಯ ಅಂತ್ಯಗೊಳಿಸಿ ವಿಶ್ವದಲ್ಲಿ ಅಪರೂಪದ ಖನಿದ ಸಂಪತ್ತಿನಲ್ಲಿ ಅಗ್ರಗಣ್ಯನಾಗರು ಸೌದಿ ಅರೆಬಿಯಾ ಕಳೆದ 5 ವರ್ಷ ನಿಧಿ ಶೋಧನೆ ಮಾಡಿ ಇದೀಗ ಯಶಸ್ವಿಯಾಗಿದೆ.

ಅಮೆರಿಕದ ತೆರಿಗೆ ನೀತಿ, ಚೀನಾದ ದುಬಾರಿ ಮೌಲ್ಯಗಳಿಂದ ಹಲವು ದೇಶಗಳು ಅಪರೂಪದ ಖನಿಜ ಸಂಪತ್ತು ಆಮದು ಮಾಡಿಕೊಳ್ಳಲು ಪರದಾಡುತ್ತಿದೆ. ಇತ್ತ ಸೌದಿ ಅರೇಬಿಯಾ ಸೇರಿದಂತೆ 7 ಎಮಿರೈಟ್ಸ್ ಕೂಡ ಇದೇ ಸಮಸ್ಯೆಯಲ್ಲಿ ಸಿಲುಕಿಕೊಂಡಿತ್ತು. ಆದರೆ ಸೌದಿ ಅರೇಬಿಯಾ ಈ ಸಮಸ್ಯೆಗೆ ಉತ್ತರ ಕಂಡುಕೊಂಡಿದೆ. ಸೌದಿ ಅರೆಬಿಯಾ ಭೂಮಿಯ ಅಪರೂಪದ ಖನಿಜ ಸಂಪತ್ತ ಶೋಧಿಸಿದೆ. ಇದೀಗ ಸೌದಿ ಅರೆಬಿಯಾ ವಿಶ್ವದಲ್ಲೇ ನಂಬರ್ 1 ಆಗಲು ಪ್ಲಾನ್ ಹಾಕಿಕೊಂಡಿದೆ. ಇದಕ್ಕಾಗಿ 20 ವರ್ಷಗಳ ಪ್ಲಾನ್ ತಯಾರಿಸಿದೆ. ಸದ್ಯ ಭೂಮಿಯ ಅಡಿಯಲ್ಲಿ ಪತ್ತೆ ಹಚ್ಚಿರುವ ಅಪರೂಪದ ಖನಿಜ ಸಂಪತ್ತು ಹೊರತೆಗೆಯಲು ಕಾರ್ಖಾನೆಗಳು, ಮಿಶಿನರಿ ಎಲ್ಲವನ್ನು ರೆಡಿ ಮಾಡಿಕೊಳ್ಳುತ್ತಿದೆ. ಇದರಿಂದ ಅಮೆರಿಕ ಹಾಗೂ ಚೀನಾ ಮೇಲೆ ಯುಎಐ ಮಾತ್ರವಲ್ಲ ಇತರ ದೇಶಗಳ ಅವಲಂಬನೆಯೂ ಕಡಿಮೆಯಾಗಲಿದೆ. ಇದು ಚೀನಾ ಹಾಗೂ ಅಮೆರಿಕೆಗೆ ದೊಡ್ಡ ಹೊಡೆತ ನೀಡಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧರೆಗಿಳಿದ ದೇವಲೋಕ: ಮೈನಸ್ 20 ಡಿಗ್ರಿಯಿಂದಾಗಿ ಹೆಪ್ಪುಗಟ್ಟಿದ ನಯಾಗಾರ ಫಾಲ್ಸ್‌ನ ಮನಮೋಹಕ ದೃಶ್ಯ
ಈ ಕಂಪನಿಯಲ್ಲಿ ಮದುವೆಯಾಗೋ ಉದ್ಯೋಗಿಗೆ 12 ಲಕ್ಷ, ಮಕ್ಕಳಾದರೆ 24 ಲಕ್ಷ ರೂ ಘೋಷಣೆ