
ತೆಹ್ರಾನ್[ಮಾ.14]: ಚೀನಾದಿಂದ ಹುಟ್ಟಿಕೊಂಡ ಕೊರೋನಾ ವೈರಸ್ ಸದ್ಯ ಇಡೀ ವಿಶ್ವವನ್ನೇ ತನ್ನ ಮುಷ್ಟಿಯಲ್ಲಿಟ್ಟು ಆಡಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಡೆಡ್ಲಿ ವೈರಸ್‌ಗೆ ಮೃತಪಟ್ಟವರ ಸಂಖ್ಯೆ 5 ಸಾವಿರ ದಾಟಿದ್ದು, ಭಾರತದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇದನ್ನು ನಿಯಂತ್ರಿಸಲು ಅನೇಕ ಕ್ರಮಗಳನ್ನು ವಹಿಸಲಗುತ್ತಿದೆಯದರೂ, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಇರಾನ್‌ನಲ್ಲೂ ಈ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಬರೋಬ್ಬರಿ 514 ಮಂದಿ ಬಲಿಯಾಗಿದ್ದಾರೆ. ಸಾವನ್ನಪ್ಪಿದ್ದವರನ್ನು ಹೂಳಲು ಇರಾನ್‌ನಲ್ಲಿ ಸ್ಥಳದ ಅಭಾವ ಎದುರಾಗುಗಿದ್ದು, ಸದ್ಯ ಮೃತಪಟ್ಟವರನ್ನು ಸಾಮೂಹಿಕ ಸಮಾಧಿ ಮಾಡಲು ಇರಾನ್ ಸ್ಮಶಾನವೊಂದನ್ನು ನಿರ್ಮಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಕೊರೋನಾ ರುದ್ರ ನರ್ತನಕ್ಕೆ ಜಗತ್ತೇ ತತ್ತರ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊರೋನಾ ವೈರಸ್‌ನಿಂದ ಸಾವನ್ನಪ್ಪಿದವರನ್ನು ಹೂಳಲು ಕೋಮ್ ಪಟ್ಟಣದಲ್ಲಿ ಬೃಹತ್ ಸ್ಮಶಾನವನ್ನು ನಿರ್ಮಾಣ ಮಾಡಲಾಗಿದೆ. ಈ ಸಮಾಧಿ ಎಷ್ಟು ದೊಡ್ಡಾಗಿದೆಯೆಂದರೆ ಬಾಹ್ಯಾಕಾಶದಿಂದಲೂ ಈ ಸಮಾಧಿ ಗೋಚರಿಸುತ್ತಿದೆ. ಉಪಗ್ರಹವೊಂದು ಈ ದೃಶ್ಯವನ್ನು ಸೆರೆ ಹಿಡಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ