ಶಬರಿಮಲೆ ಚಿನ್ನಕನ್ನ: ಕಾಂತಾರ ನಟಗೆ ಇ.ಡಿ. ಸಮನ್ಸ್‌

Kannadaprabha News   | Kannada Prabha
Published : Feb 07, 2026, 06:55 AM IST
jayaram kantara

ಸಾರಾಂಶ

ಶಬರಿಮಲೆ ದ್ವಾರಪಾಲಕ ಮೂರ್ತಿ ಮತ್ತು ಗರ್ಭಗುಡಿ ದ್ವಾರದ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂತಾರ ಚಿತ್ರದ ಖ್ಯಾತಿಯ ಜಯರಾಂ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ನೀಡಿದೆ.

ಕೊಚ್ಚಿ: ಶಬರಿಮಲೆ ದ್ವಾರಪಾಲಕ ಮೂರ್ತಿ ಮತ್ತು ಗರ್ಭಗುಡಿ ದ್ವಾರದ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂತಾರ ಚಿತ್ರದ ಖ್ಯಾತಿಯ ಜಯರಾಂ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ನೀಡಿದೆ.

ಚೆನ್ನೈನಲ್ಲಿ ಎಸ್‌ಐಟಿ ಎದುರು ಹಾಜರಾಗಿ ವಿಚಾರಣೆ

ಕೆಲ ದಿನಗಳ ಹಿಂದೆ ಜಯರಾಂ ಅವರು ಚೆನ್ನೈನಲ್ಲಿ ಎಸ್‌ಐಟಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದರು. ಪೊಟ್ಟಿ ಮತ್ತು ಜಯರಾಂ ಒಟ್ಟಿಗೆ ಚೆನ್ನೈನಲ್ಲಿ ಕವಚಗಳಿಗೆ ಪೂಜೆ ಸಲ್ಲಿಸಿದ್ದ ವಿಡಿಯೋವೊಂದು ಬಹಿರಂಗವಾದ ನಂತರ ತನಿಖಾ ಸಂಸ್ಥೆಗಳು ಅವರ ಬೆನ್ನುಬಿದ್ದಿವೆ.

ಪೊಟ್ಟಿಗೂ ಇ.ಡಿ. ಬಿಸಿ?:

ಮತ್ತೊಂದೆಡೆ ಪ್ರಕರಣದಲ್ಲಿ ಬಂಧಿತನಾಗಿ ಗುರುವಾರವಷ್ಟೇ ಜಾಮೀನು ಮೇಲೆ ಬಿಡುಗಡೆ ಆದ ಪ್ರಮುಖ ಆರೋಪಿ, ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿಗೂ ಇ.ಡಿ. ಸಮನ್ಸ್‌ ನೀಡಲಿದೆ ಎಂದು ಮೂಲಗಳು ಹೇಳಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌ ತೊರೆಯಿರಿ: ಅಮೆರಿಕನ್ನರಿಗೆ ಟ್ರಂಪ್‌ ಸರ್ಕಾರ ಸೂಚನೆ
ಪಾಕ್‌ ಮಸೀದಿ ಆತ್ಮಾಹುತಿ ದಾಳಿಗೆ 69 ಬಲಿ