ಪಾಕ್‌ ಮಸೀದಿ ಆತ್ಮಾಹುತಿ ದಾಳಿಗೆ 69 ಬಲಿ

Kannadaprabha News   | Kannada Prabha
Published : Feb 07, 2026, 04:49 AM IST
Shia mosque attack in Pakistan

ಸಾರಾಂಶ

ಇಲ್ಲಿನ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುವ ವೇಳೆ ಭೀಕರ ಆತ್ಮಾಹುತಿ ದಾಳಿ ನಡೆದಿದ್ದು, 69 ಜನರು ಮೃತಪಟ್ಟಿದ್ದಾರೆ. 170ಕ್ಕೂ ಹೆಚ್ಚಿನ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇಸ್ಲಾಮಾಬಾದ್‌: ಇಲ್ಲಿನ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುವ ವೇಳೆ ಭೀಕರ ಆತ್ಮಾಹುತಿ ದಾಳಿ ನಡೆದಿದ್ದು, 69 ಜನರು ಮೃತಪಟ್ಟಿದ್ದಾರೆ. 170ಕ್ಕೂ ಹೆಚ್ಚಿನ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇಸ್ಲಾಮಾಬಾದ್‌ನ ಶೆಹಜಾದ್‌ ಟೌನ್‌ ಪ್ರಾಂತ್ಯದ ಇಮಾಂಬಾರ್ಗಾ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆಯಿದ್ದ ಕಾರಣ ಬೆಳಗ್ಗೆ ನೂರಾರು ಶಿಯಾ ಪಂಗಡದವರು ನೆರೆದಿದ್ದರು. ಈ ವೇಳೆ ಆತ್ಮಾಹುತಿ ದಾಳಿಕೋರ ಮಸೀದಿ ಪ್ರವೇಶಿಸಲು ಯತ್ನಿಸಿದ್ದು, ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ದಾಳಿಕೋರ ತನ್ನನ್ನೇ ಸಿಡಿಸಿಕೊಂಡಿದ್ದಾನೆ.

ಸ್ಥಳದಲ್ಲಿಯೇ ಹಲವರು ಅಸುನೀಗಿದ್ದಾರೆ

ಪರಿಣಾಮ ಭಾರಿ ಸದ್ದು ಕೇಳಿಸಿದ್ದು, ಸ್ಥಳದಲ್ಲಿಯೇ ಹಲವರು ಅಸುನೀಗಿದ್ದಾರೆ. ದೇಹಗಳು ಛಿದ್ರಛಿದ್ರವಾಗಿವೆ. ಗಾಯಾಳುಗಳ ಸಂಖ್ಯೆ ಅಧಿಕವಾಗಿರುವ ಕಾರಣ ಇಸ್ಲಾಮಾಬಾದ್‌ ಆಸ್ಪತ್ರೆಗಳಿಗೆಲ್ಲ ತುರ್ತು ಸ್ಥಿತಿ ಘೋಷಿಸಲಾಗಿದೆ.

ಆತ್ಮಾಹುತಿ ದಾಳಿಗೆ ಇದುವರೆಗೆ ಯಾವುದೇ ಸಂಘಟನೆ ಹೊಣೆ ಹೊರದಿದ್ದರೂ, ತೆಹ್ರೀಕ್‌ ಎ ತಾಲಿಬಾನ್‌ನ ಸಹ ಸಂಘಟನೆ ಆಗಿರುವ ‘ಫಿತ್ನಾ ಎ ಖ್ವಾರಾಜಿ’ಯ ಸಹಚರರು ದಾಳಿ ನಡೆಸಿರುವ ಶಂಕೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಉಗ್ರ ಮೊದಲಿಗೆ ಗುಂಡಿನ ದಾಳಿ ನಡೆಸಿ, ನಂತರ ತನ್ನನ್ನು ತಾನು ಸ್ಫೋಟಗೊಳಿಸಿದ

ಸ್ಥಳೀಯ ಮಾಧ್ಯಮವೊಂದು ಉಗ್ರ ಮೊದಲಿಗೆ ಗುಂಡಿನ ದಾಳಿ ನಡೆಸಿ, ನಂತರ ತನ್ನನ್ನು ತಾನು ಸ್ಫೋಟಗೊಳಿಸಿಕೊಂಡರು ಎಂದು ವರದಿ ಮಾಡಿದೆ.

3 ತಿಂಗಳ ಹಿಂದಷ್ಟೇ ಇಸ್ಲಾಮಾಬಾದ್‌ನ ಕೋರ್ಟ್‌ ಆವರಣದಲ್ಲಿ ಸ್ಫೋಟ ಸಂಭವಿಸಿ 12 ಜನರು ಬಲಿಯಾಗಿದ್ದರು.

ಉಜ್ಬೇಕ್‌ ಅಧ್ಯಕ್ಷ ಭೇಟಿ ವೇಳೆ ಸ್ಫೋಟ:

ಉಜ್ಬೇಕಿಸ್ತಾನದ ಅಧ್ಯಕ್ಷ ಶಾವ್ಕಾತ್‌ ಮಿರ್ಜಿಯೋಯ್ವೆವ್‌ ಅವರು 2 ದಿನಗಳ ಪಾಕ್‌ ಭೇಟಿಗಾಗಿ ಇಸ್ಲಾಮಾಬಾದ್‌ಗೆ ಆಗಮಿಸಿದ್ದು, ಈ ವೇಳೆಯೇ ಆತ್ಮಾಹುತಿ ದಾಳಿ ಸಂಭವಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೈ ಜಾರುತ್ತಿದೆಯಾ ಬಲೂಚ್? ಪಾಕ್ ಸಚಿವರೇ ಒಪ್ಪಿಕೊಂಡ ಸತ್ಯ: ಪಾಕ್ ಸೇನೆಗಿಂತಾ ಬಂಡುಕೋರರೇ ಹೈ-ಟೆಕ್!
ಹಳೇ ಸಿಮ್ ಕಾರ್ಡ್ ಬಿಸಾಡಿದ್ದೀರಾ? ಸಿಮ್‌ಗಳಿಂದ ಚಿನ್ನ ಹೊರತೆಗೆದು ₹27 ಲಕ್ಷ ಸಂಪಾದಿಸಿದ ಗುಜುರಿ ವ್ಯಾಪಾರಿ