ಜೈಶಂಕರ್ ಮತ್ತು ಆಸ್ಟ್ರೇಲಿಯಾ ವಿದೇಶಾಂಗ ಸಚಿವರ ಭೇಟಿ, ಬಹುಮುಖ್ಯ ವಿಚಾರ ಚರ್ಚೆ

By Suvarna NewsFirst Published Oct 7, 2020, 2:52 PM IST
Highlights

ಭಾರತ ಮತ್ತು ಆಸ್ಟ್ರೇಲಿಯಾ ವಿದೇಶಾಂಗ ಸಚಿವರ ಮಾತುಕತೆ/ ಜೂನ್ ನಲ್ಲಿ ಎರಡು ದೇಶದ ಪ್ರಧಾನಿಗಳು ಮಾಡಿದ್ದ ಒಪ್ಪಂದದ ಪ್ರಗತಿ ಚರ್ಚೆ/  ಜಪಾನ್ ನಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಮಂತ್ರಿಗಳ ಸಭೆ 

ಟೋಕಿಯೊ(ಅ. 07) ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್  ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಮರೈಸ್ ಪಾಯ್ನೆ ಅವರನ್ನು ಭೇಟಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸಂಬಂಧ ವೃದ್ಧಿಗೆ ಈ ಭೇಟಿ ಪ್ರಮುಖವಾಗಿದೆ.

ಟ್ವಿಟರ್ ನಲ್ಲಿ ವಿವರ ಹಂಚಿಕೊಂಡಿರುವ ಜೈಶಂಕರ್ ಕಳೆದ ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಸ್ಟ್ರೇಲಿಯಾ ಪ್ರಧಾನಿ ದ ಸ್ಕಾಟ್ ಮಾರಿಸನ್ ನಡುವೆ ಜೂನ್ ನಲ್ಲಿ ನಡೆದಿದ್ದ ದ್ವಿಪಕ್ಷೀಯ ಬಾಂಧ್ಯವ್ಯ ಗಟ್ಟಿಗೊಳಿಸುವ ವಿಚಾರಗಳ ಪ್ರಗತಿಯ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದ್ದಾರೆ.

ಗಡಿಯಲ್ಲಿ ಭಾರತದ ಸೇನೆಯ ಸಿದ್ಧತೆ ವಿವರ ಕೇಳಿಯೆ ಬೆಚ್ಚಿಬಿದ್ದ ಚೀನಾ

ವರ್ಚುವಲ್ ಶೃಂಗಸಭೆಯ ಮೂಲಕ ಜೂನ್ ನಲ್ಲಿ ಎರಡು ದೇಶದ ಪ್ರಧಾನಿಗಳು ಹಲವು  ಒಪ್ಪಂದಗಳಿಗೆ ಸಹಿ ಮಾಡಿದ್ದರು ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಮಂತ್ರಿಗಳ ಸಭೆ ಟೋಕಿಯೊದಲ್ಲಿ ನಡೆದಿದೆ. ಈ ಸಂದರ್ಭ ಉಭಯ ನಾಯಕರು ಭೇಟಿಯಾಗಿದ್ದಾರೆ.

ಟೋಕಿಯೊದಲ್ಲಿ ಮಂಗಳವಾರ ನಡೆದ ಕ್ವಾಡ್ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಅಂತಾರಾಷ್ಟ್ರೀಯ ಸವಾಲುಗಳು, ಕೊರೋನಾದಿಂದ ಉಂಟಾಗಿರುವ ಆರ್ಥಿಕ ತೊಂದರೆ ನಿವಾರಣೆ ವಿಚಾರಗಳ ಬಗ್ಗೆ ಚರ್ಚೆಯಾಗಿದ್ದು ಪರಸ್ಪರ ಅಭಿಪ್ರಾಯ ಹಂಚಿಕೊಳ್ಳಲು ಕೇಳಿಕೊಳ್ಳಲಾಗಿದೆ.

click me!