ಇಂಡೋನೇಷ್ಯಾದ ಬಾಲಿಯಲ್ಲಿ ಪವಿತ್ರ ವೃಕ್ಷದ ಕೆಳಗೆ ಬೆತ್ತಲಾಗಿ ಪೋಸ್ ಕೊಟ್ಟ ಆರೋಪದ ಮೇಲೆ ರಷ್ಯಾದ ಪ್ರಭಾವಿ (Influencer) ಒಬ್ಬರಿಗೆ ಜೈಲು ಶಿಕ್ಷೆಯಾಗಿದೆ. ಇಂಡೋನೇಷ್ಯಾದ ತಬನಾನ್ ಜಿಲ್ಲೆಯ (Tabanan district) ದೇವಾಲಯವೊಂದರ ಸಮೀಪವಿರುವ 700 ವರ್ಷ ಹಳೆಯದಾದ ಆಲದ ಮರದ (banyan tree) ಕಾಂಡಕ್ಕೆ ಒರಗಿಕೊಂಡು ಆಕೆ ಬೆತ್ತಲೆಯಾಗಿ ನಿಂತಿರುವ ಚಿತ್ರವನ್ನು ನಂತರ ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ್ದಾಳೆ. ಇದು ಬಲಿನೀಸ್ ಸಮುದಾಯಗಳನ್ನು (Balinese communitie) ಕೆರಳಿಸಿದೆ.
ಸ್ಥಳೀಯ ಸಂಸ್ಕೃತಿಯನ್ನು ಉಲ್ಲಂಘಿಸಿದ ಕ್ರಮ ಇದಾಗಿದ್ದು, ಪವಿತ್ರ ಮರದ ಮೇಲೆ ನಗ್ನ ಫೋಟೋಶೂಟ್ ನಡೆಸಿದ್ದಕ್ಕಾಗಿ ಅಲೀನಾ ಫಜ್ಲೀವಾ (Alina Fazleeva) ಮತ್ತು ಆಕೆಯ ಪತಿ ಆಂಡ್ರೆ ಫಜ್ಲೀವ್ (Andrey Fazleev) ಅವರನ್ನು ಬಾಲಿಯಿಂದ ಗಡೀಪಾರು ಮಾಡಲಾಗುವುದು ಎಂದು ಇಂಡೋನೇಷ್ಯಾದ ರಜಾ ದಿನದ ದ್ವೀಪದ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಕಟ್ಟುನಿಟ್ಟಾದ ಕಾನೂನುಗಳ ಅಡಿಯಲ್ಲಿ, ರಷ್ಯಾದ ಪ್ರಭಾವಿ ಅಪರಾಧಿ ಎಂದು ಸಾಬೀತಾದರೆ ಮಾಹಿತಿ ಮತ್ತು ಎಲೆಕ್ಟ್ರಾನಿಕ್ ವಹಿವಾಟುಗಳ ಕಾಯಿದೆಯ ಅಡಿ ಆಕೆ £78,000 ಮೊತ್ತದ ಭಾರಿ ದಂಡ ಮತ್ತು ಆರು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಮಾಸ್ಕ್ ಇಲ್ಲದೇ ಫ್ಲೈಟ್‌ನಲ್ಲಿ ಪಾರ್ಟಿ... ಇನ್‌ಫ್ಲುಯೆನ್ಸರ್‌ಗಳ ರಿಟರ್ನ್ ಟಿಕೆಟ್ ರದ್ದು ಪಡಿಸಿದ ಏರ್‌ಲೈನ್ಸ್
ಇದಾದ ಬಳಿಕ ರಷ್ಯಾ ಪ್ರಭಾವಿಯೂ ಈ ಫೋಟೋವನ್ನು ಅಳಿಸಿ ಹಾಕಿದ್ದು, ತಾನು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡು ಇನ್ಸ್ಟಾಗ್ರಾಮ್‌ನಲ್ಲಿ (Instagram) ಕ್ಷಮೆಯಾಚಿಸಿದ್ದಾರೆ. 'ನಾನು ತುಂಬಾ ಮುಜುಗರಕ್ಕೊಳಗಾಗಿದ್ದೇನೆ, ನಾನು ಯಾವುದೇ ರೀತಿಯಲ್ಲಿ ಅಪರಾಧ ಮಾಡಲು ಉದ್ದೇಶಿಸಿರಲಿಲ್ಲ, ಈ ಸ್ಥಳದ ಬಗ್ಗೆ ಸಂಪೂರ್ಣವಾಗಿ ನನಗೆ ಮಾಹಿತಿ ತಿಳಿದಿಲ್ಲ ಎಂದು ಅವರು ಬರೆದಿದ್ದಾರೆ. ಬಾಲಿಯಲ್ಲಿ ಬಹಳಷ್ಟು ಪವಿತ್ರ ಸ್ಥಳಗಳಿವೆ ಮತ್ತು ನನಗೆ ತಿಳಿದಂತೆ ಎಲ್ಲಿಯೂ ಆ ಪ್ರದೇಶದ ಮಹತ್ವದ ಬಗ್ಗೆ ಮಾಹಿತಿ ಚಿಹ್ನೆಗಳನ್ನು ಹೊಂದಿಲ್ಲ ಎಂದು ಅವರು ಹೇಳಿದರು. ಈ ಸ್ಥಳಗಳು ಮತ್ತು ಸಂಪ್ರದಾಯಗಳನ್ನು ಗೌರವದಿಂದ ಪರಿಗಣಿಸುವುದು ಬಹಳ ಮುಖ್ಯ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇವರು ತಮ್ಮ ಇನ್ಸಾಗ್ರಾಮ್‌ನಲ್ಲಿ 16,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಪರ್ವತಗಳು, ಮರಗಳು ಮತ್ತು ಇತರ ನೈಸರ್ಗಿಕ ಲಕ್ಷಣಗಳನ್ನು ಬಲಿನೀಸ್ ಹಿಂದೂ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವುಗಳನ್ನು ದೇವರುಗಳ ಮನೆಗಳೆಂದು ಭಾವಿಸಲಾಗಿದೆ.ಈ ರಷ್ಯನ್ ಜೋಡಿ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುವ ಮತ್ತು ಸ್ಥಳೀಯ ನಿಯಮಗಳನ್ನು ಗೌರವಿಸದ ಚಟುವಟಿಕೆಗಳನ್ನು ನಡೆಸಿರುವುದು ಸಾಬೀತಾಗಿದೆ ಎಂದು ಬಾಲಿ ವಲಸೆ ಮುಖ್ಯಸ್ಥ ಜಮರುಲಿ ಮಣಿಹುರುಕ್ (Jamaruli Manihuruk) ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
Defence Technology: ಚೀನಾ ಬಗ್ಗುಬಡಿಯಲು ಭಾರತ ಇಂಡೋನೆಷ್ಯಾ ರಕ್ಷಣಾ ಒಪ್ಪಂದ!
ಆದ್ದರಿಂದ, ಅವರನ್ನು ಗಡೀಪಾರಿಗೆ ಮಂಜೂರು ಮಾಡಲಾಗುವುದು. ಗಂಡ ಮತ್ತು ಹೆಂಡತಿಯನ್ನು ಕನಿಷ್ಠ ಆರು ತಿಂಗಳ ಕಾಲ ಇಂಡೋನೇಷ್ಯಾದಿಂದ ನಿಷೇಧಿಸಲಾಗುವುದು ಮತ್ತು ಸ್ಥಳೀಯ ನಂಬಿಕೆಗೆ ಅನುಗುಣವಾಗಿ ಪವಿತ್ರ ಪ್ರದೇಶದಲ್ಲಿ ಶುದ್ಧೀಕರಣ ಸಮಾರಂಭದಲ್ಲಿ ಅವರು ಭಾಗವಹಿಸಬೇಕು ಎಂದು ಅವರು ಹೇಳಿದರು.
ತನ್ನ ಆಡಳಿತವು ಇನ್ನು ಮುಂದೆ ಅಗೌರವ ತೋರುವ ಪ್ರವಾಸಿಗರನ್ನು ಸಹಿಸುವುದಿಲ್ಲ ಎಂದು ಬಾಲಿಯ ಗವರ್ನರ್ ವಯಾನ್ ಕೋಸ್ಟರ್ (Wayan Koster) ಹೇಳಿದ್ದಾರೆ. ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ವರ್ಷ ಸುಮಾರು 200 ಜನರನ್ನು ಹಾಲಿಡೇ ದ್ವೀಪದಿಂದ ಗಡೀಪಾರು ಮಾಡಲಾಗಿತ್ತು. ಕಳೆದ ತಿಂಗಳು ಕೆನಡಾದ ನಟ ಮತ್ತು ಸ್ವಯಂ ಘೋಷಿತ ಕ್ಷೇಮ ಗುರುವನ್ನು ಕೂಡ ಬಾಲಿಯಿಂದ ಗಡೀಪಾರು ಮಾಡಲಾಗಿತ್ತು. ನ್ಯೂಜಿಲೆಂಡ್‌ನ ಮಾವೋರಿ ನೃತ್ಯವನ್ನು ಮಾಡುವಾಗ ಆತ ಪವಿತ್ರ ಪರ್ವತ ಮೌಂಟ್ ಬತೂರ್‌ನಲ್ಲಿ(Mount Batur) ಬೆತ್ತಲೆಯಾದ ವೀಡಿಯೊ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಗಡೀಪಾರು ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ