4 ರಿಂದ 5 ಹಾವುಗಳು ಸುರುಳಿ ಸುತ್ತಿಕೊಂಡ ವಿಡಿಯೋ ವೈರಲ್

By Anusha Kb  |  First Published May 8, 2022, 2:39 PM IST
  • ಹಾವುಗಳು ಸುರುಳಿ ಸುತ್ತಿಕೊಂಡಿರುವ ವಿಡಿಯೋ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ಮರದ ಕೊಂಬೆಯಲ್ಲಿ ನೆತ್ತಾಡುತ್ತಿರುವ ವಿಡಿಯೋಗಳು

ನಾಲ್ಕೈದು ಹಾವುಗಳು ಮರದ ಕೊಂಬೆಯೊಂದರಲ್ಲಿ ಸುರುಳಿ ಸುತ್ತಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಹಾವುಗಳು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಾಗಿವೆ ಮತ್ತು ಅವುಗಳು ಕಚ್ಚಿದ 20 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮನುಷ್ಯರು ಸಾವಿನ ಮನೆ ಸೇರುತ್ತಾರೆ. ಅವು ಸಾಮಾನ್ಯವಾಗಿ ಭಾರತ ನೆರೆಯ ದೇಶಗಳಲ್ಲಿ ಕಂಡುಬರುತ್ತವೆ. 

ಕಾಡಿನಲ್ಲಿ ತೆಳ್ಳಗಿನ ಮರದ ಕೊಂಬೆಯೊಂದರಲ್ಲಿ ನಾಗರ ಹಾವುಗಳ ದೊಡ್ಡ ಗುಂಪೊಂದು ಸಿಕ್ಕು ಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'snake._.world' ಎಂಬ  ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. 18 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸುವಂತೆ ರಾಜ ನಾಗರಹಾವು ಮತ್ತು ಭಾರತೀಯ ನಾಗರಹಾವು ಸೇರಿದಂತೆ ಹಲವಾರು ಜಾತಿಯ ನಾಗರಹಾವುಗಳು ಚಿಕ್ಕ ಕೊಂಬೆಯ ಮೇಲೆ ಉಳಿಯಲು ಹೋರಾಡುತ್ತಿರುವಂತೆ ಒಂದರ ಮೇಲೊಂದು ಏರುತ್ತಿರುವುದನ್ನು ಕಾಣಬಹುದು. ಒಂದು ಹಾವು ಹೊಡೆದಾಡುವಾಗ ಕೊಂಬೆಯಿಂದ ಬೀಳುವುದನ್ನು ನೋಡಬಹುದು. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by 🐍SNAKE WORLD🐍 (@snake._.world)

 

ಲದೊಳಗೆ ಹಾವು ಅದೆಷ್ಟು ವರ್ಷವಾದರೂ ಇರಬಲ್ಲದು. ಆದರೆ ಮುಚ್ಚಿದ ಗಾಜಿನ ಜಾರಿನೊಳಗೆ ಆಹಾರ, ಗಾಳಿ ಯಾವುದೂ ಇಲ್ಲದೆ ಇರಲು ಸಾಧ್ಯವೇ? ಸಾಧ್ಯ ಅನ್ನೋದು ಸಾಬೀತಾಗಿದೆ. ಕಳೆದ ಒಂದು ವರ್ಷದಿಂದ ವಿಷಪೂರಿತ ಹಾವನ್ನು ಗಾಜಿನ ಜಾರಿನಲ್ಲಿ ಭದ್ರವಾಗಿ ಮುಚ್ಚಿ ಇಡಲಾಗಿತ್ತು. ಒಂದು ವರ್ಷದ ಬಳಿಕ ತೆರೆದಾಗ ಆಘಾತ ಎದುರಾಗಿದೆ. ಕಾರಣ ಮುಚ್ಚಳ ತೆರೆಯುತ್ತಿದ್ದಂತೆ ಹಾವು ಆತನ ಕೈಗೆ ಕಚ್ಚಿದ ಘಟನೆ ನಡೆದಿದೆ.

ನಾಗರ ಹಾವುಗಳಿಗೆ ಕಿಸ್ ಕೊಡುವ ಚಟಕ್ಕೆ ಬಿದ್ದ ಕಿಸ್ಸಿಂಗ್ ಸ್ಟಾರ್ ಅಂದರ್..!

ಚೀನಾದ ಹೇಲಿಯಾಂಗ್‌ಜಿಯಾಂಗ್‌ನಲ್ಲಿ ಈ ಘಟನೆ ನಡೆದಿದೆ. ತನ್ನ ಮಗನ ದೀರ್ಘಕಾಲದ ಅನಾರೋಗ್ಯದ ಚಿಕಿತ್ಸೆಗಾಗಿ ತಂದೆ ವಿಷಪೂರಿತ ಹಾವನ್ನು ಜಾರಿನೊಳಗೆ ಇಡಲಾಗಿತ್ತು. ಗಾಜಿನ ಜಾರಿನೊಳಗೆ ಮೆಡಿಸಿನಲ್ ವೈನ್ ಹಾಕಿ ಅದರೊಳಗೆ ಹಾವನ್ನು ಮುಳುಗಿಸಿ ಭದ್ರವಾಗಿ ಮುಚ್ಚಳ ಹಾಕಿ ಇಡಲಾಗಿತ್ತು. ಈ ಹಾವಿನಿಂದ ಬೇರ್ಪಡುವ ಕೆಲ ಅಂಶಗಳನ್ನು ತೆಗೆದು ಚಿಕಿತ್ಸೆ ನೀಡಲು ಈ ರೀತಿ ಮಾಡಲಾಗಿತ್ತು. ಒಂದು ವರ್ಷದಿಂದ ಔಷಧಿಯ ನೀರಿನಲ್ಲಿ ಮುಳುಗಿ ಹಾಗೂ ಯಾವುದೇ ಗಾಳಿ, ಆಹಾರವಿಲ್ಲದೆ ಗಾಜಿನ ಜಾರಿನಲ್ಲಿದ್ದ ಹಾವು ಮಚ್ಚಳ ತೆರೆಯುತ್ತಿದ್ದಂತೆ ತನ್ನ ಒಂದು ವರ್ಷದ ಆಕ್ರೋಶವನ್ನು ಹೊರಹಾಕಿದೆ. ನೇರವಾಗಿ ಆತನ ಕೈಗೆ ಕಚ್ಚಿದೆ. ಇದು ವಿಷಪೂರಿತ ಹಾವಾಗಿರುವ ಕಾರಣ ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಮಗನ ಆರೋಗ್ಯಕ್ಕಾಗಿ ಕಸರತ್ತು ಮಾಡಿದ ತಂದೆ ಇದೀಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುವಂತಾಗಿದೆ.

ಹೆಬ್ಬಾವೊಂದಿಗೆ ಯುವಕನ ಸರಸ : ಹೆಗಲಲ್ಲಿಟ್ಟುಕೊಂಡು ಸಖತ್ ಡಾನ್ಸ್

100 ಹಾವು ಸಾಕಿದ್ದ ವ್ಯಕ್ತಿ ಹಾವಿನ ಕಡಿತದಿಂದಲೇ ಸಾವು!

100ಕ್ಕೂ ಹೆಚ್ಚು ಹಾವುಗಳನ್ನು ಮನೆಯಲ್ಲಿ ಸಾಕಿಕೊಂಡಿದ್ದ ಮೇರಿಲ್ಯಾಂಡ್‌ನ ವ್ಯಕ್ತಿಯೋರ್ವ ತಾನು ಸಾಕಿದ್ದ ವಿಷಪೂರಿತ ಹಾವು ಕಚ್ಚಿದ್ದರಿಂದಲೇ ಮೃತಪಟ್ಟ ಘಟನೆ ಅಮೆರಿಕದಲ್ಲಿ ನಡೆದಿದೆ. ಈತ ವಿಷಪೂರಿತ ಹಾವುಗಳಾದ ನಾಗರಹಾವು, ಕಪ್ಪು ಮಾಂಬಾ, ರಾರ‍ಯಟ್‌ ಸ್ನೇಕ್‌ಗಳು ಸೇರಿದಂತೆ ಸುಮಾರು 124 ಹಾವುಗಳನ್ನು ಮನೆಯಲ್ಲೇ ಸಾಕಿಕೊಂಡಿದ್ದ. ಈತ ಹಾವು ಕಚ್ಚಿದ್ದರಿಂದಲೇ ಮೃತಪಟ್ಟಿದ್ದಾನೆ ಎಂದು ಚಾರ್ಲ್ಸ್ನ ವೈದ್ಯಾಧಿಕಾರಿಗಳು ಖಚಿತ ಪಡಿಸಿದ್ದಾರೆ. ಶವ ಪರೀಕ್ಷೆಯ ಸಮಯದಲ್ಲಿ ಮನೆಯ ತುಂಬಾ ಹಾವುಗಳಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!