ಆಗಸ್ಟ್‌ನಲ್ಲಿ 3ನೇ ಹಂತದ ಪ್ರಯೋಗ ಬಳಿಕ ಲಸಿಕೆ ಬಿಡುಗಡೆ ಎಂದಿದ್ದ ಸರ್ಕಾರ| ಬಿಡುಗಡೆಗೂ ಮುನ್ನವೇ ರಷ್ಯಾದಲ್ಲಿ ಪ್ರಭಾವಿಗಳಿಗೆ ಕೊರೋನಾ ಲಸಿಕೆ ಲಭ್ಯ| ಗುಪ್ತವಾಗಿ ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಈ ಲಸಿಕೆ ಲಭ್ಯ
ಮಾಸ್ಕೋ(ಜು.22): ಕೊರೋನಾ ವೈರಸ್ ಲಸಿಕೆಯನ್ನು ಆಗಸ್ಟ್‌ನಲ್ಲಿ 3ನೇ ಹಂತದ ಪ್ರಯೋಗಕ್ಕೆ ಒಳಪಡಿಸಿ ಆ ನಂತರ ರಾಷ್ಟ್ರಾದ್ಯಂತ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದ ರಷ್ಯಾ, ಈಗಾಗಲೇ ಗುಪ್ತವಾಗಿ ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಈ ಲಸಿಕೆ ನೀಡುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಆಗಸ್ಟ್ ಅಂತ್ಯಕ್ಕೆ ಭಾರತದಲ್ಲಿ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ!
ರಷ್ಯಾದ ಅಲ್ಯೂಮಿನಿಯಂ ದೈತ್ಯ ಯುನೈಟೆಡ್ ಕೊ. ಸೇರಿ ಪ್ರಮುಖ ಕಂಪನಿಗಳ ಕಾರ‍್ಯ ನಿರ್ವಾಹಕರು, ಉದ್ಯಮಿಗಳು, ಕೋಟ್ಯಧಿಪತಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತಮ್ಮ ಪ್ರಭಾವವನ್ನು ಬಳಸಿ ಲಸಿಕೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ, ಲಸಿಕೆ ಸಂಪೂರ್ಣ ಸುರಕ್ಷಿತ ಮತ್ತು ಬಳಕೆಗೆ ಯೋಗ್ಯ ಎಂಬುದನ್ನು ಖತಿಪಡಿಸಿಕೊಳ್ಳದೆಯೇ ರಷ್ಯಾ ಸರ್ಕಾರ ತರಾತುರಿಯಲ್ಲಿ ಲಸಿಕೆ ಬಳಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.