ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು: ಕೇಂದ್ರ ಸಚಿವ ವಿಕೆ ಸಿಂಗ್

By Suvarna News  |  First Published Mar 4, 2022, 10:19 AM IST

* ಉಕ್ರೇನ್‌ ಮೇಲೆ ರಷ್ಯಾ ದಾಳಿ, ವಿದ್ಯಾರ್ಥಿಗಳು ಅತಂತ್ರ

* ರಷ್ಯಾ ಕ್ಷಿಪಣಿ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಬಲಿ

* ಭಾರತೀಯ ವಿದ್ಯಾರ್ಥಿಗೆ ಗುಂಡೇಟು: ಕೇಂದ್ರ ಸಚಿವ ವಿಕೆ ಸಿಂಗ್


ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ನಡೆದ ಕ್ಷಿಪಣಿ ದಾಳಿಗೆ ಕರ್ನಾಟಕ ಹಾವೇರಿ ಜಿಲ್ಲೆಯ ನವೀನ್ ಬಲಿಯಾದ ವಿಚಾರ ಇಡೀ ದೇಶವನ್ನು ಆಘಾತಕ್ಕೀಡು ಮಾಡಿತ್ತು. ಆದರೀಗ ಈ ಕಹಿ ಸುದ್ದಿ ಬೆನ್ನಲ್ಲೇ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು ತಗುಲಿದೆ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಇಂದು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಸಚಿವರ ಪ್ರಕಾರ, ಗುಂಡಿನ ದಾಳಿಯಲ್ಲಿ ಗಾಯಗೊಂಡಾಗ ವಿದ್ಯಾರ್ಥಿ ಕೀವ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.

ಕೂಡಲೇ ಗುಂಡೇಟು ತಗುಲಿದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಕೊಟ್ಟ ಜನರಲ್ ವಿಕೆ ಸಿಂಗ್, “ಕೀವ್‌ನಿಂದ ಹೊರಟ ವಿದ್ಯಾರ್ಥಿಗೆ ಗುಂಡು ಹಾರಿಸಲಾಗಿದೆ ಎಂಬ ವರದಿಗಳನ್ನು ನಾವು ಕೇಳಿದ್ದೇವೆ. ಅವರನ್ನು ಮತ್ತೆ ಕೀವ್‌ಗೆ ಕರೆದೊಯ್ಯಲಾಗಿದೆ. ಇದೆಲ್ಲವೂ ಯುದ್ಧದ ಮಧ್ಯೆ ನಡೆಯುತ್ತಿದೆ. ” ಎಂದಿದ್ದಾರೆ

Tap to resize

Latest Videos

ಕೀವ್(ಮಾ.04): ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ವಿಶೇಷ ಪ್ರತಿನಿಧಿಗಳಾಗಿ ಕಳುಹಿಸಲಾದ ನಾಲ್ವರು ಮಂತ್ರಿಗಳಲ್ಲಿ ಜನರಲ್ ಸಿಂಗ್ ಒಬ್ಬರು ಎಂಬುವುದು ಉಲ್ಲೇಖನೀಯ.

ರಷ್ಯಾದ ಸೈನ್ಯವು ಉಕ್ರೇನ್‌ನಲ್ಲಿ ವಿನಾಶವನ್ನು ಉಂಟುಮಾಡುತ್ತಿದೆ. ಉಕ್ರೇನ್‌ನ ಪ್ರಮುಖ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ದಾಳಿ ನಡೆಸಿದ್ದು, ಆ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ಪರಮಾಣು ವಿದ್ಯುತ್ ಸ್ಥಾವರದ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಕರೆ ನೀಡಿದರು. ಅದೇ ಸಮಯದಲ್ಲಿ, ರಷ್ಯಾವು ಖಾರ್ಕಿವ್ನ ಹೆಚ್ಚಿನ ಭಾಗಗಳನ್ನು ತನ್ನ ನಿಯಂತ್ರಣಕ್ಕೆ ಪಡೆದಿದೆ. ಸಾಕಷ್ಟು ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗಿದೆ. ಹಲವು ಕಟ್ಟಡಗಳು ಮತ್ತು ವಾಹನಗಳಿಗೆ ತೀವ್ರ ಹಾನಿಯಾಗಿದೆ.

ಏತನ್ಮಧ್ಯೆ, "ಉಕ್ರೇನ್‌ನಲ್ಲಿ ಇನ್ನೂ ಕೆಟ್ಟ ಸ್ಥಿತಿ ಬರಲಿದೆ" ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಂಬಿದ್ದಾರೆ. ಮ್ಯಾಕ್ರನ್ ಅವರು ರಷ್ಯಾದ ಕೌಂಟರ್ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ 90 ನಿಮಿಷಗಳ ಸಂಭಾಷಣೆಯ ನಂತರ ಈ ಅಭಿಪ್ರಾಯ ಬಂದಿದೆ. ಮಾತುಕತೆಯ ಸಮಯದಲ್ಲಿ ಪುಟಿನ್ ಅವರು ಇಡೀ ದೇಶ ಆಕ್ರಮಿಸಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದು ಫ್ರೆಂಚ್ ಅಧ್ಯಕ್ಷರ ಸಹಾಯಕರೊಬ್ಬರು ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ ಮತ್ತೊಬ್ಬ ಭಾರತೀಯ ಸಾವು

ಯುದ್ಧಪೀಡಿತ ಉಕ್ರೇನ್‌ನ ವಿನ್ನಿಸ್ತಿಯಾ ನ್ಯಾಷನಲ್‌ ಪೈರೊಗೋವ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಪಂಜಾಬ್‌ ಮೂಲದ ವಿದ್ಯಾರ್ಥಿ ಚಂದನ್‌ ಜಿಂದಾಲ್‌ (22) ಅನಾರೋಗ್ಯದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ.

ಬರ್ನಾಲಾ ಮೂಲದ ಚಂದನ್‌ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದು ವಿನ್ನೆಸ್ತಿಯಾ ತುರ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿ ನಿಧನರಾಗಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯ ಕೂಡ ಇದನ್ನು ಖಚಿತಪಡಿಸಿದೆ.

ಈ ನಡುವೆ, ಚಂದನ್‌ನ ಶವವನ್ನು ಭಾರತಕ್ಕೆ ತರಲು ಸಹಾಯ ಮಾಡಬೇಕು ಎಂದು ಆತನ ತಂದೆಯು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂಗಳವಾರ ಖಾರ್ಕಿವ್‌ನ ಕಟ್ಟಡವೊಂದನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಸಾವಿಗೀ​ಡಾ​ಗಿ​ದ್ದರು.

ಉಕ್ರೇನ್‌ನಲ್ಲಿ ಮತ್ತೊಬ್ಬ ಭಾರತೀಯ ಸಾವು

 

ಸತತ 8 ದಿನಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಬೆಲಾರಸ್‌ನಲ್ಲಿ 2ನೇ ಹಂತದ ಸಂಧಾನ ಮಾತುಕತೆ ನಡೆಸಿದ್ದು, ಚರ್ಚೆಯು ಮಹತ್ವದ ಪ್ರಗತಿ ಕಂಡಿದೆ. ಯುದ್ಧಪೀಡಿತ ಸ್ಥಳಗಳಲ್ಲಿ ಜನರ ತೆರವು ಕಾರಾರ‍ಯಚರಣೆಗೆ ಅನುವು ಮಾಡಿಕೊಡಲು ಉಭಯ ದೇಶಗಳು ಸಮ್ಮತಿಸಿವೆ.

ಇದೇ ವೇಳೆ, ನಾಗರಿಕರ ತೆರವು ಕಾರ್ಯಾಚರಣೆಯಲ್ಲದೆ ಆಹಾರ ಹಾಗೂ ಔಷಧ ಪೂರೈಕೆಗೆ ಯಾವುದೇ ಅಡ್ಡಿ ಮಾಡಬಾರದು. ಇಂಥ ಕೆಲಸಗಳು ನಡೆಯುವಾಗ ತಾತ್ಕಾಲಿಕವಾಗಿ ಕದನವಿರಾಮ ನೀತಿಯನ್ನು ಅನುಸರಿಸಬೇಕು ಎಂದು ಮಾತುಕತೆಯಲ್ಲಿ ನಿರ್ಧರಿಸಲಾಗಿದೆ.

ಇದೇ ವೇಳೆ, ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ 3ನೇ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ.

ಮಾತುಕತೆ ಆರಂಭದಲ್ಲಿ, ‘ತಕ್ಷಣದಿಂದಲೇ ಕದನ ರಾಮ ಘೋಷಣೆಯಾಗಬೇಕು. ಯುದ್ಧ ಸ್ಥಗಿತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಬೇಕು. ಯುದ್ಧದಿಂದ ನಾಶವಾದ ಪ್ರದೇಶಗಳಿಂದ ನಾಗರಿಕರನ್ನು ರಕ್ಷಿಸಲು ಮಾನವೀಯ ಕಾರಿಡಾರ್‌ ರಚಿಸಬೇಕು’ ಎಂಬ ಷರತ್ತುಗಳನ್ನು ಉಕ್ರೇನ್‌ ವಿಧಿಸಿತ್ತು ಎಂದು ಮೂಲಗಳು ಹೇಳಿವೆ.

click me!