ರಷ್ಯಾದ ಪ್ರಾರ್ಥನಾ ಮಂದಿರ, ಚರ್ಚ್ ಮೇಲೆ ಉಗ್ರರ ಭೀಕರ ದಾಳಿ; ಪಾದ್ರಿ ಸೇರಿ 15 ಸಾವು!

By Chethan Kumar  |  First Published Jun 24, 2024, 8:04 AM IST

ರಷ್ಯಾದ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಯಹೂದಿಗಳ ಪ್ರಾರ್ಥನಾ ಮಂದಿರ ಹಾಗೂ ಎರಡು ಆರ್ಥಡಾಕ್ಸ್ ಚರ್ಚ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಪಾದ್ರಿ, ಪೊಲೀಸ್ ಸೇರಿದಂತೆ 15 ಮಂದಿ ಮೃತಪಟ್ಟರೆ ಹಲವರು ಗಾಯಗೊಂಡಿದ್ದಾರೆ.
 


ಮಾಸ್ಕೋ(ಜೂ.24) ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ಆತಂಕದಲ್ಲೇ ದಿನ ದೂಡುತ್ತಿರುವ ರಷ್ಯಾ ಜನರು ಇದೀಗ ಉಗ್ರ ದಾಳಿಯಿಂದ ನಲುಗಿದ್ದಾರೆ. ಉಕ್ರೇನ್ ಯುದ್ಧದ ಕಾವು ನಿಧಾನವಾಗಿ ಕಡಿಮೆಯಾಗುತ್ತಿದ್ದಂತೆ ಇದೀಗ ಉಗ್ರರು ಯಹೂದಿಗಳ ಪ್ರಾರ್ಥನಾ ಮಂದಿರ ಹಾಗೂ ಎರಡು ಆರ್ಥಡಾಕ್ಸ್ ಚರ್ಚ್ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಸಿದ ಉಗ್ರರು ಭದ್ರತಾ ಪಡೆಗಳ ಮೇಲೂ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಚರ್ಚ್ ಪಾದ್ರಿಯನ್ನೂ ಹತ್ಯೆ ಮಾಡಿದ್ದಾರೆ. ಉಗ್ರರ ಭೀಕರ ದಾಳಿಯಲ್ಲಿ ಪಾದ್ರಿ, ಪೊಲೀಸ್ ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇತ್ತ ಹಲವರು ಗಾಯಗೊಂಡಿದ್ದಾರೆ. 40ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.

ಉತ್ತರ ರಷ್ಯಾದ ಕೌಕಾಸ್ ವಲಯದಲ್ಲಿ ಈ ದಾಳಿ ನಡೆದಿದೆ. ಪ್ರತಿ ದಾಳಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಆದರೆ ಇನ್ನುಳಿದ ಉಗ್ರರು 40ಕ್ಕೂ ಹೆಚ್ಚಿನ ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಯಹೂದಿಗಳ ಪ್ರಾರ್ಥನಾ ಮಂದಿರ ಹಾಗೂ ಆರ್ಥಡಾಕ್ಸ್ ಚರ್ಚ್ ಟಾರ್ಗೆಟ್ ಮಾಡಿದ ಉಗ್ರರು ಗನ್ ಮೂಲಕ ಗುಂಡಿನ ಸುರಿಮಳೆಗೈಯುತ್ತಾ ದಾಳಿ ನಡೆಸಿದ್ದಾರೆ.

Tap to resize

Latest Videos

undefined

ಪಾಕ್‌ ಸೇನೆಗಾಗಿ ಚೀನಾ ಕೊಟ್ಟಅತ್ಯಾಧುನಿಕ ಉಪಕರಣಗಳು ಉಗ್ರರ ಕೈಲಿ ಪತ್ತೆ!

ಗುಂಡಿನ ದಾಳಿಯಲ್ಲಿ ಯಹೂದಿಗಳ ಪ್ರಾರ್ಥನಾ ಮಂದಿರ, ಆರ್ಥಡಾಕ್ಸ್ ಚರ್ಚ್ ಹೊತ್ತಿ ಉರಿದಿದೆ. ರಷ್ಯಾ ಇತ್ತೀಚಿನ ದಿನಗಳಲ್ಲಿ ಎದುರಿಸಿದ ಭೀಕರ ಉಗ್ರರ ದಾಳಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಈ ವೇಳೆ ಭದ್ರತಾ ಸಿಬ್ಬಂದಿಗಳು ಪ್ರತಿ ದಾಳಿ ನಡೆಸಿದ್ದರೆ. ಆದರೆ ಉಗ್ರರ ಪ್ರಬಲ ಗುಂಡಿನ ದಾಳಿಗೆ ಪೊಲೀಸರು, ಸಾರ್ವಜನಿಕರು ಸೇರಿದಂತೆ 15ಕಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇತ್ತ ಚರ್ಚ್ ಒಳನುಗ್ಗಿದ ಉಗ್ರರು, ಚರ್ಚ್ ಪಾದ್ರಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಭೀಕರ ಘಟನೆಯಿಂದ ಉತ್ತರ ರಷ್ಯಾದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 

ರಷ್ಯಾ ಸೇನೆ ಸ್ಥಳಕ್ಕೆ ಧಾವಿಸಿದ್ದು ಇಡೀ ಪ್ರದೇಶ ಸುತ್ತುವರಿದಿದೆ. ಇದೀಗ ಉಗ್ರರ ವಿರದ್ಧ ಪ್ರತಿ ದಾಳಿ ನಡೆಸಿ ನಿರ್ನಾಮ ಮಾಡುವುದಾಗಿ ರಷ್ಯಾ ಘೋಷಿಸಿದೆ. ಡೆಗಸ್ಟನ್ ಪಟ್ಟಣದಲ್ಲಿ ಶೋಕಾಚರಣೆ ಮಾಡಲಾಗಿದೆ. 24 ರಿಂದ 26ರ ವರೆಗೆ ಶೋಕಾಚರಣೆ ಎಂದು ಮೇಯರ್ ಘೋಷಿಸಿದ್ದಾರೆ. ಉಗ್ರ ದಾಳಿ ಕುರಿತು ತನಿಖೆ ನಡೆಸಲು ರಷ್ಯಾ ಸಮಿತಿ ನೇಮಕ ಮಾಡಿದೆ. ಸದ್ಯ ಯಾವುದೇ ಉಗ್ರ ಸಂಘಟನೆಗಳು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇಂತಹ ದಾಳಿಯನ್ನು ರಷ್ಯಾ ಸಹಿಸಲ್ಲ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರಷ್ಯಾ ಎಚ್ಚರಿಸಿದೆ. 

ಸಿಖ್ ಉಗ್ರನಿಗೆ ಕೆನಡಾ ಸಂಸತ್‌ನಲ್ಲಿ ಶ್ರದ್ಧಾಂಜಲಿ; ಇದೇನು ಭಾರತ ವಿರೋಧಿ ನೀತಿಯೇ?
 

click me!